AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್​ ಪ್ಲಾಂಟ್​​ನಲ್ಲಿ ರಾಕೆಟ್ ಬೂಸ್ಟರ್​ ಸ್ಫೋಟ; ವಿಡಿಯೋ ಇಲ್ಲಿದೆ

ಈ ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಜ್ವಾಲೆ ಮತ್ತು ಭಾರೀ ಹೊಗೆಯ ಉಂಡೆಗಳಾಗಿ ರಾಕೆಟ್‌ ಸ್ಫೋಟವಾಗಿದೆ.

Viral Video: ಎಲಾನ್ ಮಸ್ಕ್​ನ ಸ್ಪೇಸ್​ಎಕ್ಸ್​ ಪ್ಲಾಂಟ್​​ನಲ್ಲಿ ರಾಕೆಟ್ ಬೂಸ್ಟರ್​ ಸ್ಫೋಟ; ವಿಡಿಯೋ ಇಲ್ಲಿದೆ
Image Credit source: NDTV
TV9 Web
| Edited By: |

Updated on:Jul 12, 2022 | 11:49 AM

Share

ಟೆಕ್ಸಾಸ್​ನಲ್ಲಿ ಎಲಾನ್ ಮಸ್ಕ್‌ನ (Elon Musk) ಸ್ಪೇಸ್‌ಎಕ್ಸ್ ಅಭಿವೃದ್ಧಿಪಡಿಸಿರುವ ಬೂಸ್ಟರ್ ರಾಕೆಟ್​ನ ಪರೀಕ್ಷಾ ಉಡಾವಣೆ ವೇಳೆ ರಾಕೆಟ್ ಸ್ಫೋಟವಾಗಿದೆ. ಸ್ಫೋಟವಾದ ಬಳಿಕ ಬೆಂಕಿ ಜ್ವಾಲೆಯ ಕಿಡಿಗಳು ಹರಡಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ವರ್ಷದ ಅಂತ್ಯದಲ್ಲಿ ಕಕ್ಷೆಗೆ ಸ್ಟಾರ್‌ಶಿಪ್ ಅನ್ನು ಪ್ರಾರಂಭಿಸುವ ಎಲಾನ್ ಮಸ್ಕ್‌ನ ಉದ್ದೇಶಕ್ಕೆ ಈ ಸ್ಫೋಟದಿಂದ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.

ಈ ಬಗ್ಗೆ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದು, ಬೂಸ್ಟರ್ ರಾಕೆಟ್ ಸ್ಫೋಟವಾಗಿರುವುದು ಖಂಡಿತ ಒಳ್ಳೆಯ ವಿಷಯವಲ್ಲ. ಈ ಸ್ಫೋಟದಿಂದ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ ಬಗ್ಗೆ ನಮ್ಮ ತಂಡ ಇನ್ನೂ ನಿರ್ಧರಿಸಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ: ಮೊಹಾಲಿ ರಾಕೆಟ್ ದಾಳಿ: 5 ಪ್ರಮುಖ ಸಂಚುಕೋರರನ್ನು ಬಂಧಿಸಿದ ಪಂಜಾಬ್ ಪೊಲೀಸ್

ಈ ಸ್ಫೋಟಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಜ್ವಾಲೆ ಮತ್ತು ಭಾರೀ ಹೊಗೆಯ ಉಂಡೆಗಳಾಗಿ ರಾಕೆಟ್‌ ಸ್ಫೋಟವಾಗಿದೆ. ಟೆಕ್ಸಾಸ್‌ನ ಬೊಕಾ ಚಿಕಾದಲ್ಲಿ ಬೂಸ್ಟರ್‌ನ ದಿನವಿಡೀ ಸಜ್ಜಾಗಿ ನಿಂತಿದ್ದ ಅಗ್ನಿಶಾಮಕ ಪರೀಕ್ಷಾ ಅಭಿಯಾನದ ಮಧ್ಯೆ ಈ ವೈಫಲ್ಯ ಸಂಭವಿಸಿದೆ. ಇದು 33 ರಾಪ್ಟರ್ ಎಂಜಿನ್‌ಗಳ ಶ್ರೇಣಿಯನ್ನು ಹೊಂದಿದ್ದು, ಮುಂಬರುವ ಸಿಬ್ಬಂದಿರಹಿತ ಕಕ್ಷೆಯ ಪರೀಕ್ಷಾ ಹಾರಾಟದಲ್ಲಿ ಇದನ್ನು ಬಳಸಲು ಉದ್ದೇಶಿಸಲಾಗಿತ್ತು.

Published On - 11:47 am, Tue, 12 July 22

Follow Us
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ