ಉತ್ತರ ಪ್ರದೇಶ: ಶಾಲೆಯಲ್ಲಿ ಇಸ್ಲಾಮಿಕ್ ಪ್ರಾರ್ಥನೆಗೆ ಪೋಷಕರಿಂದ ವಿರೋಧ
ಶಾಲೆಯಲ್ಲಿ ಮಕ್ಕಳಿಂದ ಇಸ್ಲಾಮಿಕ್ ಪ್ರಾರ್ಥನೆ ಹೇಳಿಸುತ್ತಿದ್ದಾರೆಂದು ಪೋಷಕರು ವಿರೋಧ ವ್ಯಕ್ತಪಡಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದ ಶಾಲೆಯೊಂದರಲ್ಲಿ ನಡೆದಿದೆ.
ಉತ್ತರ ಪ್ರದೇಶ: ಶಾಲೆಯಲ್ಲಿ ಮಕ್ಕಳಿಂದ ಇಸ್ಲಾಮಿಕ್ ಪ್ರಾರ್ಥನೆ ಹೇಳಿಸುತ್ತಿದ್ದಾರೆಂದು ಪೋಷಕರು ವಿರೋಧ ವ್ಯಕ್ತಪಡಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದ (Kanpur) ಶಾಲೆಯೊಂದರಲ್ಲಿ ನಡೆದಿದೆ. ಕಾನ್ಪುರದ ಸಿಸಾಮೌ ಪ್ರದೇಶದ ಫ್ಲೋರೆಟ್ಸ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಪ್ರಾರ್ಥನೆಯ (Prayer) ಸಮಯದಲ್ಲಿ ಮಕ್ಕಳಿಗೆ ಇಸ್ಲಾಮಿಕ್ ಪ್ರಾರ್ಥನೆ ಕಲಿಸಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಇಸ್ಲಾಮಿಕ್ ಪ್ರಾರ್ಥನೆ ನಡೆಸುತ್ತಿರುವುದಕ್ಕೆ ಪೋಷಕರು ಗಲಾಟೆ ತೆಗೆದಿದ್ದಾರೆ.
UP | Parents object to recitation of Islamic prayer during morning prayer at a school in Kanpur
We've prayers from all religions be it Hinduism, Islam, Sikhism & Christianity. As parents objected to Islamic prayer, we've stopped it & only national anthem is being sung:Principal pic.twitter.com/lywPvmpi5E
— ANI UP/Uttarakhand (@ANINewsUP) August 1, 2022
ಮಕ್ಕಳು ಪ್ರಾರ್ಥನೆ ಮಾಡದಿದ್ದಕ್ಕೆ ಬೈಯುತ್ತಾರೆ. ಶಾಲೆಯಲ್ಲಿ ಕಲ್ಮಶ ವಾತಾವರಣ ಸೃಷ್ಟಿಸುತ್ತಿದ್ದಾರೆಂದು ಪೋಷಕರು ಕಿಡಿ ಕಾರಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಶಾಲೆ ಆಡಳಿತ ಮಂಡಳಿ ಇಸ್ಲಾಮಿಕ್ ಪ್ರಾರ್ಥನೆಯನ್ನು ಪೋಷಕರು ವಿರೋಧಿಸಿದ್ದರಿಂದ ನಾವು ಅದನ್ನ ನಿಲ್ಲಿಸಿ ರಾಷ್ಟ್ರಗೀತೆ ಮಾತ್ರ ಹಾಡಿಸುತ್ತೇವೆ ಎಂದು ಸಮಸ್ಯೆ ಬಗೆಹರಿಸಿದ್ದಾರೆ ಎಂದು ಫ್ಲೋರೆಟ್ಸ್ ಇಂಟರ್‌ನ್ಯಾಶನಲ್ ಸ್ಕೂಲ್ನಿಂದ ಮಾಹಿತಿ ದೊರೆತಿದೆ.
Published On - 3:19 pm, Mon, 1 August 22