Baal Aadhaar ದೇಶದಲ್ಲಿ 1.6 ಕೋಟಿ ಬಾಲ್ ಆಧಾರ್ ಕಾರ್ಡ್ ನೀಡಿಕೆ; ಮಕ್ಕಳಿಗಾಗಿ ಇರುವ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಹೇಗೆ?
ಆಧಾರ್ ನೀಡುವುದಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಮಕ್ಕಳು 5 ವರ್ಷ ತಲುಪುವವರೆಗೆ ಅದನ್ನು ಸಂಗ್ರಹಿಸಲಾಗುವುದಿಲ್ಲ. ಮಕ್ಕಳ ಆಧಾರ್ ನೋಂದಣಿಯು ಪೋಷಕರ ಫೇಷಿಯಲ್ ಇಮೇಜ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್ ಕಾರ್ಡ್ ಆಧರಿಸಿ ಇರುತ್ತದೆ
5 ವರ್ಷದವರೆಗಿನ ಮಕ್ಕಳಿಗೆ ವಿಶಿಷ್ಟ ಗುರುತಿನ ಸಂಖ್ಯೆಗಳನ್ನು ನೀಡುವ ಬಾಲ್ ಆಧಾರ್ (Baal Aadhaar) ಯೋಜನೆಯಡಿಯಲ್ಲಿ 1.6 ಕೋಟಿ ಬಾಲ್ ಆಧಾರ್ ಕಾರ್ಡ್ಗಳನ್ನು ನೀಡಲಾಗಿದೆ. ಇದು ಪ್ರಿಸ್ಕೂಲ್ ಹಂತದಲ್ಲಿಯೇ ಅವರಿಗೆ ಇದರ ಪ್ರಯೋಜನಗಳನ್ನು ಗುರುತಿಸಲು ಸುಲಭವಾಗುತ್ತದೆ ಎಂದು ಈ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತೀಯ ವಿಶಿಷ್ಟ ಗುರುತು ಸಂಖ್ಯೆಗಳ ಪ್ರಾಧಿಕಾರ ರಿಜಿಸ್ಟಾರ್ ಜನರಲ್ಸ್ ಜತೆ ಸಹಯೋಗ ಬಯಸಿದ್ದು, ಅವರು ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಇವರು ಜನನ ಪ್ರಮಾಣಪತ್ರವನ್ನು ನೀಡುವ ಜತೆಗೇ ಆಧಾರ್ ಸಂಖ್ಯೆಯನ್ನೂ ನೀಡುತ್ತಾರೆ. ಐದು ವರ್ಷದ ನಂತರವೇ ಆಧಾರ್ ಕಾರ್ಡ್ ಮಾಹಿತಿ ಅಪ್ಡೇಟ್ ಮಾಡಲಾಗುತ್ತದೆ. ಇದೇ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಅನುಷ್ಠಾನಕ್ಕೆ ತಂದಿದ್ದು ಇದು ಯಶಸ್ವಿಯಾಗಿದೆ. ಹುಟ್ಟುವಾಗಲೇ ಮಕ್ಕಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಸಿಗಲಿದೆ. ಇದು ಅವರು ಪ್ರಿಸ್ಕೂಲ್ ತಲುಪುವ ಹೊತ್ತಿಗೆ ಅದರ ಪ್ರಯೋಜನಗಳ ಬಗ್ಗೆ ಅರಿಯಲು ಸಹಾಯ ಮಾಡುತ್ತದೆ. ಇದು ಹಲವಾಪು ಸರ್ಕಾರಿ ಯೋಜನೆಗಳ ಪ್ರಯೋಜನವನ್ನು ಪಡೆಯುವಂತೆ ಮಾಡುತ್ತದೆ. ಮಗು ಐದನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಅದನ್ನು ಮರು ದೃಢೀಕರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಸರಿಸುಮಾರು 800 ಲಕ್ಷ ಆಧಾರ್ ಸಂಬಂಧಿ ವ್ಯವಹಾರಗಳು ದಿನ ನಿತ್ಯ ನಡೆಯುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಸರ್ಕಾರದ ಹಲವು ಕಲ್ಯಾಣ ಯೋಜನೆಗಳಿಗೆ ಆಧಾರ್ ಅತ್ಯಗತ್ಯವಾಗಿದೆ. ಆಧಾರ್ ಇಲ್ಲಿದ ಮಕ್ಕಳು ಪೋಷಣ್ ಯೋಜನೆಯ ಫಲಾನುಭವಿಗಳು ಆಗಲು ಸಾಧ್ಯವಿಲ್ಲ ಎಂದು ಜೂನ್ನಲ್ಲಿ ವರದಿಯೊಂದು ಹೇಳಿತ್ತು. ಪೋಷಕರ ಆಧಾರ್ ಮಾಹಿತಿ ಮಾತ್ರ ಪಡೆಯಲಾಗುತ್ತದೆ ವಿದ್ಯಾರ್ಥಿಗಳದ್ದಲ್ಲ ಎಂದು ಸರ್ಕಾರಿ ಅಧಿಕಾರಗಳು ಸ್ಪಷ್ಟನೆ ನೀಡಿದ್ದಾರೆ.
ಆಧಾರ್ ನೀಡುವುದಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಮಕ್ಕಳು 5 ವರ್ಷ ತಲುಪುವವರೆಗೆ ಅದನ್ನು ಸಂಗ್ರಹಿಸಲಾಗುವುದಿಲ್ಲ. ಮಕ್ಕಳ ಆಧಾರ್ ನೋಂದಣಿಯು ಪೋಷಕರ ಫೇಷಿಯಲ್ ಇಮೇಜ್, ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್ ಕಾರ್ಡ್ ಆಧರಿಸಿ ಇರುತ್ತದೆ. ಬಾಲ್ ಆಧಾರ್ ಗೆ ನೋಂದಣಿ ಮಾಡುವಾಗ ಸಂಬಂಧ ತಿಳಿಸುವ ದಾಖಲೆಯಾಗಿ ಜನನ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ.
ಬಾಲ್ ಆಧಾರ್ ಕಾರ್ಡ್ ನೀಲಿ ಬಣ್ಣದ್ದಾಗಿದ್ದು ಇದು ಮಗು 5 ವರ್ಷ ತಲುಪುವವರಿಗೆ ಚಾಲ್ತಿಯಲ್ಲಿರುತ್ತದೆ.
#AadhaarForMyChild Your #Aadhaar along with the child’s #birth certificate or the discharge slip you received from the hospital is enough to enroll your child for Aadhaar. List of other documents that may be used for the child’s #enrolment: https://t.co/BeqUA0pkqL #KidsAadhaar pic.twitter.com/lNsGIDHMSU
— Aadhaar (@UIDAI) February 28, 2022
ಬಾಲ್ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಗತ್ಯವಿರುವ ದಾಖಲೆಗಳು
ಮಗುವಿನ ಜನನ ಪ್ರಮಾಣಪತ್ರ ಅಥವಾ ಸರ್ಕಾರಿ ಆಸ್ಪತ್ರೆಯ ಡಿಸ್ಚಾರ್ಜ್ ಸ್ಲಿಪ್ ಪೋಷಕರು/ಹೆತ್ತವರಲ್ಲಿ ಒಬ್ಬರ ಆಧಾರ್ ಕಾರ್ಡ್ ಗಮನಿಸಿ: ಮಕ್ಕಳು ಐದು ವರ್ಷದ ಕೆಳಗಿನವರಾಗಿದ್ದರೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಪೋಷಕರು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಿದೆ.
5 ವರ್ಷದ ಕೆಳಗಿನ ಮಕ್ಕಳಿಗೆ ಆಧಾರ್ ಐದು ವರ್ಷದ ಕೆಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಇರುವುದಿಲ್ಲ. ಹಾಗಾಗಿ ಮಗುವಿನ ಆಧಾರ್ ಮಾಹಿತಿಯಲ್ಲಿ ಬೆರಳಚ್ಚು ಮತ್ತು ಐರಿಸ್ ಸ್ಕ್ಯಾನ್ ಇರುವುದಿಲ್ಲ. 5 ವರ್ಷದ ನಂತರವೇ ಮಗುವಿನ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡಲಾಗುವುದು
5 ವರ್ಷಕ್ಕಿಂತ ಮೇಲಿನ ಮಕ್ಕಳಿಗೆ
5 ರಿಂದ 15 ನೇ ವರ್ಷದ ಮಕ್ಕಳ ಬಯೋಮೆಟ್ರಿಕ್ಸ್ ಅಪ್ಡೇಟ್ ಮಾಡಬೇಕಾಗಿದೆ. ಇದರಲ್ಲಿ ಬೆರಳಚ್ಚು, ಐರಿಸ್ ಮತ್ತು ಫೋಟೊ ಕೂಡಾ ಅಪ್ಡೇಟ್ ಮಾಡಲಾಗುತ್ತದೆ. ಇದೆಲ್ಲದರ ನಂತರವೇ ನಿಜವಾದ ಆಧಾರ್ ನೀಡಲಾಗುವುದು
ಬಾಲ್ ಆಧಾರ್ ಕಾರ್ಡ್ಗೆ ನೋಂದಣಿ ಮಾಡುವುದು ಹೇಗೆ?
ಸಮೀಪದಲ್ಲಿರುವ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಹೋಗಿ
ಮಕ್ಕಳ ಆಧಾರ್ ಕಾರ್ಡ್ ಪಡೆಯಲಿರುವ ನಿರ್ದಿಷ್ಟ ಅರ್ಜಿ ತುಂಬಿರಿ
ಪೋಷಕರ ಆಧಾರ್ ಕಾರ್ಡ್ ಮತ್ತು ಮಗುವಿನ ಜನನ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಕೆ ಮಾಡಿ.
ಪೋಷಕರ ಆಧಾರ್ ಕಾರ್ಡ್ ಮಾಹಿತಿ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯ.
ದೃಢೀಕರಣ ಪ್ರಕ್ರಿಯೆಗಾಗಿ ಮಗುವಿನ ಫೋಟೊ ತೆಗೆಯಲಾಗುತ್ತದೆ. ಐದು ವರ್ಷದ ಕೆಳಗಿನ ಮಕ್ಕಳ ಬಯೋಮೆಟ್ರಿಕ್ ತೆಗೆಯಲಾಗುವುದಿಲ್ಲ
ಮಗು ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವರ್ಷದ್ದಾಗಿದ್ದರೆ ಫೋಟೊ ಮತ್ತು ಬಯೋಮೆಟ್ರಿಕ್ ಡೇಟಾ ಸಂಗ್ರಹಿಸಲಾಗುತ್ತದೆ.
ನೋಂದಣಿ ಕೇಂದ್ರದಲ್ಲಿ ನೀಡಿದ ಸ್ವೀಕೃತಿ ಚೀಟಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಿ
60 ದಿನಗಳೊಳಗೆ ನಿಮಗೆ ಸಂದೇಶ ಬರುತ್ತದೆ ಮತ್ತು ಬಾಲ್ ಆಧಾರ್ ಕಳುಹಿಸಿಕೊಡಲಾಗುತ್ತದೆ.
ಆನ್ಲೈನ್ನಲ್ಲಿ ನೋಂದಣಿ ಹೇಗೆ?
UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಬಾಲ್ ಆಧಾರ್ ಕಾರ್ಡ್ ಗೆ ನೋಂದಣಿ ಮಾಡಿ
ಆಧಾರ್ ಕಾರ್ಡ್ ನೋಂದಣಿ ಪೇಜ್ ಗೆ ಹೋಗಿ ಕ್ಲಿಕ್ ಮಾಡಿ
ಮಗುವಿನ ಹೆಸರು, ಪೋಷಕರ ಫೋನ್ ನಂಬರ್, ಇಮೇಲ್ ಐಡಿ ಸೇರಿದಂತೆ ಅಗತ್ಯ ಮಾಹಿತಿ ತುಂಬಿ
ವೈಯಕ್ತಿಕ ಮಾಹಿತಿ ತುಂಬಿದ ನಂತರ ಸ್ಥಳದ ಮಾಹಿತಿ ತುಂಬಿ
ಮುಂದುವರಿಯಲು ಫಿಕ್ಸ್ ಅಪಾಯಿಂಟ್ಮೆಂಟ್ ಕ್ಲಿಕ್ ಮಾಡಿ. ಆಧಾರ್ ಕಾರ್ಡ್ ನೋಂದಣಿಗೆ ಇರುವ ದಿನಾಂಕ ಸೆಟ್ ಮಾಡಿ
ಹತ್ತಿರದ ನೋಂದಣಿ ಕೇಂದ್ರವನ್ನು ಆಯ್ಕೆ ಮಾಡಿ ನೋಂದಣಿ ಪ್ರಕ್ರಿಯೆ ಮುಂದುವರಿಸಿ
ಹತ್ತಿರದ ಆಧಾರ್ ಕಾರ್ಡ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ
ಮಗುವಿನ ಜನನ ಸರ್ಟಿಫಿಕೇಟ್ ಜತೆಗೆ ಪೋಷಕರ ಆಧಾರ್ ಕಾರ್ಡ್ ಸಲ್ಲಿಸಿ
ಪೋಷಕರ ಆಧಾರ್ ಕಾರ್ಡ್ ಮಾಹಿತಿ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯ.
ದೃಢೀಕರಣ ಪ್ರಕ್ರಿಯೆಗಾಗಿ ಮಗುವಿನ ಫೋಟೊ ತೆಗೆಯಲಾಗುತ್ತದೆ. ಐದು ವರ್ಷದ ಕೆಳಗಿನ ಮಕ್ಕಳ ಬಯೋಮೆಟ್ರಿಕ್ ತೆಗೆಯಲಾಗುವುದಿಲ್ಲ
ಮಗು ಐದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವರ್ಷದ್ದಾಗಿದ್ದರೆ ಫೋಟೊ ಮತ್ತು ಬಯೋಮೆಟ್ರಿಕ್ ಡೇಟಾ ಸಂಗ್ರಹಿಸಲಾಗುತ್ತದೆ.
ನೋಂದಣಿ ಕೇಂದ್ರದಲ್ಲಿ ನೀಡಿದ ಸ್ವೀಕೃತಿ ಚೀಟಿಯನ್ನು ಸೇವ್ ಮಾಡಿಟ್ಟುಕೊಳ್ಳಿ