ಈ ರಾಜ್ಯದಲ್ಲಿ ಬಾಲ್ಯ ವಿವಾಹವಾದ್ರೆ, ಮಕ್ಕಳ ಪೋಷಕರಿಗೆ ಸರ್ಕಾರದ ಯಾವ ಯೋಜನೆಯೂ ಅನ್ವಯವಾಗುವುದಿಲ್ವಂತೆ

|

Updated on: Aug 19, 2023 | 9:37 AM

Child Marriage:ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡಿದರೆ,  ಪೋಷಕರಿಗೆ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನಗಳು ಕೂಡ ಸಿಗುವುದಿಲ್ಲ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಎಲ್ಲಿ ಬಾಲ್ಯವಿವಾಹಗಳು ನಡೆದರೂ, ಬಾಲ್ಯವಿವಾಹ ಮಾಡಿದರೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎಂಬ ಅರಿವು ಮೂಡಿಸಬೇಕು. ವಿಶೇಷವಾಗಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ಎಸ್.ಜವಾಹರ ರೆಡ್ಡಿ ತಿಳಿಸಿದ್ದಾರೆ.

ಈ ರಾಜ್ಯದಲ್ಲಿ ಬಾಲ್ಯ ವಿವಾಹವಾದ್ರೆ, ಮಕ್ಕಳ ಪೋಷಕರಿಗೆ ಸರ್ಕಾರದ ಯಾವ ಯೋಜನೆಯೂ ಅನ್ವಯವಾಗುವುದಿಲ್ವಂತೆ
ಆಂಧ್ರಪ್ರದೇಶ
Image Credit source: India Today
Follow us on

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಮಕ್ಕಳಿಗೆ ಮದುವೆ ಮಾಡಿದರೆ,  ಪೋಷಕರಿಗೆ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನಗಳು ಕೂಡ ಸಿಗುವುದಿಲ್ಲ ಎಂದು ಆಂಧ್ರಪ್ರದೇಶ ಸರ್ಕಾರ ಹೇಳಿದೆ. ಎಲ್ಲಿ ಬಾಲ್ಯವಿವಾಹಗಳು ನಡೆದರೂ, ಬಾಲ್ಯವಿವಾಹ ಮಾಡಿದರೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ಸಿಗುವುದಿಲ್ಲ ಎಂಬ ಅರಿವು ಮೂಡಿಸಬೇಕು. ವಿಶೇಷವಾಗಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುವ ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ಎಸ್.ಜವಾಹರ ರೆಡ್ಡಿ ತಿಳಿಸಿದ್ದಾರೆ.

ಇದಕ್ಕಾಗಿ ಅಂತರ್ ಇಲಾಖಾ ಸಭೆಯಲ್ಲಿ ಬಾಲ್ಯವಿವಾಹ ತಡೆಗೆ ನಡೆಸುವ ಕಾರ್ಯಕ್ರಮಗಳಿಗೆ ಅಧಿಕಾರಿ ಕಾರ್ಯತಂತ್ರ ಸಿದ್ಧಪಡಿಸಿದ್ದಾರೆ. ಆಂಧ್ರಪ್ರದೇಶ ಬಾಲ್ಯ ವಿವಾಹ ನಿಷೇಧ ನಿಯಮ 2012 ಮತ್ತು ಅಂತಹುದೇ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ನೋಂದಣಿ ಮಿತಿಯನ್ನು 60 ದಿನಗಳಿಂದ ಆರು ತಿಂಗಳಿಗೆ ಹೆಚ್ಚಿಸಲು ಕಾನೂನು ಮಾಡುತ್ತದೆ. ಅಲ್ಲದೆ, ತಮ್ಮ ಪ್ರದೇಶದಲ್ಲಿ ಬಾಲ್ಯವಿವಾಹ ತಡೆಯುವಲ್ಲಿ ವಿಫಲರಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮತ್ತಷ್ಟು ಓದಿ: Madhya Pradesh: ಹಣಕ್ಕಾಗಿ 12 ವರ್ಷದ ಮಗಳನ್ನೇ ಮಾರಾಟ ಮಾಡಿದ ಪೋಷಕರು, ಐವರ ಬಂಧನ

ಇದಲ್ಲದೆ, ಅಂತಹ ವಿವಾಹಗಳನ್ನು ನಡೆಸದಂತೆ ಮದುವೆಯನ್ನು ನಡೆಸುವ ಅರ್ಚಕಕರಿಗೆ ಕೂಡ ಸೂಚನೆ ನೀಡುವಂತೆ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಓರ್ವ ವ್ಯಕ್ತಿ ಬಾಲ್ಯ ವಿವಾಹ ಮಾಡಿಸಿದರೆ ಅಥವಾ ವಿವಾಹವಾಗುವಂತೆ ಪ್ರೇರೇಪಿಸಿದರೆ ಆತನಿಗೆ ಶಿಕ್ಷೆ ಜತೆಗೆ ದಂಡ ಸಹಿತ ವಿಧಿಸಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ