ಆ ಶಾಲೆಯ ಹೆಡ್ ಮಾಸ್ಟರ್ ಕತ್ತರಿ ತಗೊಂಡು ಸ್ವತಃ ತಾವೇ ವಿದ್ಯಾರ್ಥಿಗಳಿಗೆ ಹೇರ್​ ಕಟ್​​ ಮಾಡ್ತಾರೆ!

ಸರ್ಕಾರಿ ಶಾಲೆಗಳಲ್ಲಿ ಕೆಲವು ಶಿಕ್ಷಕರು ಕಾಲಕಳೆಯಲು ಬಿಡುವಿನ ಸಮಯಕ್ಕಾಗಿ ಕಾಯುತ್ತಾರೆ. ಆದರೆ ಮುಖ್ಯೋಪಾಧ್ಯಾಯರಾದ ಬಾಲಾಜಿ ಅವರು ಬಿಡುವಿನ ವೇಳೆಯಲ್ಲಿ ಹೆಚ್ಚಿನ ಸಮಯವನ್ನು ಶಾಲೆಯಲ್ಲಿರುವ ಮಕ್ಕಳ ಸೇವೆಯಲ್ಲಿ ಕಳೆಯುತ್ತಾರೆ. ಮುಖ್ಯೋಪಾಧ್ಯಾಯ ಬಾಲಾಜಿ ಅವರ ಈ ಸೇವೆಗೆ ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರೂ ತಲೆದೂಗುತ್ತಾರೆ.

ಆ ಶಾಲೆಯ ಹೆಡ್ ಮಾಸ್ಟರ್ ಕತ್ತರಿ ತಗೊಂಡು ಸ್ವತಃ ತಾವೇ ವಿದ್ಯಾರ್ಥಿಗಳಿಗೆ ಹೇರ್​ ಕಟ್​​ ಮಾಡ್ತಾರೆ!
ಶಾಲಾ ಮಕ್ಕಳಿಗಾಗಿ ಕತ್ತರಿ ಪ್ರಯೋಗ - ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರೂ ತಲೆದೂಗುತ್ತಾರೆ
Follow us
ಸಾಧು ಶ್ರೀನಾಥ್​
|

Updated on: Dec 20, 2023 | 4:21 PM

ಅಲ್ಲೂರಿ ಜಿಲ್ಲೆ ಹುಕುಂಪೇಟೆ ಗಿರಿಜನ ಕಲ್ಯಾಣ ಬಾಲಕರ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದೂರ ಪ್ರದೇಶದ ಆದಿವಾಸಿ ಮಕ್ಕಳು ಆ ಶಾಲೆಯಲ್ಲಿ ಓದುತ್ತಿದ್ದು, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಶಿಕ್ಷಕರು ಮತ್ತು ಸಿಬ್ಬಂದಿ ಕೂಡ ಹತ್ತು ಜನರಿದ್ದಾರೆ. ಅವರೆಲ್ಲಾ ತಮ್ಮ ತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಆದರೆ ಎಲ್ಲರನ್ನೂ ಮುನ್ನಡೆಸುವ ಹೊಣೆಹೊತ್ತಿರುವ ಹೆಡ್ ಮಾಸ್ಟರ್ (Headmaster) ಅಲ್ಲಿ ವಿಶೇಷವೆನಿಸಿದ್ದಾರೆ. ಅವರು ತಮ್ಮ ವೃತ್ತಿಪರ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ವಿದ್ಯಾರ್ಥಿಗಳ (Students) ಬಗ್ಗೆ ವಿಶೇಷ ಕಾಳಜಿಯನ್ನೂ ವಹಿಸಿದ್ದಾರೆ.

ಆ ಮಕ್ಕಳಿಗಾಗಿ ಕತ್ತರಿ ಪ್ರಯೋಗ

ಬಾಲಾಜಿ ಹುಕುಂಪೇಟೆ ಗಿರಿಜನ ಬಾಲಕರ ಕಲ್ಯಾಣ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯೋಪಾಧ್ಯಾಯರಾಗಿದ್ದರೂ ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಆ ಶಾಲಾ ಮಕ್ಕಳ ಪೋಷಕರು ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ಅನುಗುಣವಾಗಿ, ಅವರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯಗಳನ್ನು ಖಾತ್ರಿಪಡಿಸುವ ಜೊತೆಗೆ ಕುಟುಂಬದ ಹಿರಿಯ ತಲೆಯಾಗಿ ಹಿರಿಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಾರೆ. ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುವುದಲ್ಲಿಂತ ಭಿನ್ನವಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಸೇವೆ ಮಾಡಲು ತಮ್ಮ ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.

ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರೂ ತಲೆದೂಗುತ್ತಾರೆ

ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ಶಿಸ್ತನ್ನು ಕಲಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ತಮ್ಮ ವಿದ್ಯಾರ್ಥಿಗಳನ್ನು ತಿದ್ದಿತೀಡುತ್ತಿದ್ದಾರೆ ಮುಖ್ಯ ಶಿಕ್ಷಕ ಬಾಲಾಜಿ. ಅದಕ್ಕಾಗಿ ಅವರೇ ಸ್ವತಃ ರಂಗ ಪ್ರವೇಶಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಮವಸ್ತ್ರ ಮತ್ತು ಹೇರ್ ಸ್ಟೈಲ್ ಪಾಲಿಸುವುದರಲ್ಲೂ ಶಿಸ್ತಿಗೆ ಪ್ರಾಧಾನ್ಯತೆ ನೀಡಲು ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಾರೆ. ಒಂದು ವೇಳೆ ಕ್ಷೌರಿಕ ಬಾರದಿದ್ದರೆ ಹಲವಾರು ವಿದ್ಯಾರ್ಥಿಗಳಿಗೆ ಇವರೇ ಹೇರ್​ ಕಟ್​ ಮಾಡುತ್ತಾರೆ. ಕೈಯಲ್ಲಿ ಕತ್ತರಿ ಹಿಡಿದು.. ವಿದ್ಯಾರ್ಥಿಗಳಿಗೆ ಇಷ್ಟವಾಗುವಂತೆ ಮುಖ್ಯೋಪಾಧ್ಯಾಯರೇ ಸಂದರ್ಭಕ್ಕೆ ತಕ್ಕಂತೆ, ಕಲಕ್ಕೆ ತಕ್ಕಂತೆ ಕ್ಷೌರಿಕ ಸೇವೆ ಮಾಡುತ್ತಿದ್ದಾರೆ. ಶಾಲಾ ಬಿಡುವಿನ ವೇಳೆಯಲ್ಲಿ ಕತ್ತರಿ ಹಿಡಿದು ಮಕ್ಕಳ ತಲೆಗೂದಲನ್ನು ಕತ್ತರಿಸುತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ – ನಾನು ನಿಮ್ಮ ಸೋದರಮಾವನೆಂದು ಪ್ರಭಾರಿ ಮುಖ್ಯೋಪಾಧ್ಯಾಯನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

ಸರ್ಕಾರಿ ಶಾಲೆಗಳಲ್ಲಿ ಕೆಲವು ಶಿಕ್ಷಕರು ಕಾಲಕಳೆಯಲು ಬಿಡುವಿನ ಸಮಯಕ್ಕಾಗಿ ಕಾಯುತ್ತಾರೆ. ಆದರೆ ಮುಖ್ಯೋಪಾಧ್ಯಾಯರಾದ ಬಾಲಾಜಿ ಅವರು ಬಿಡುವಿನ ವೇಳೆಯಲ್ಲಿ ಹೆಚ್ಚಿನ ಸಮಯವನ್ನು ಶಾಲೆಯಲ್ಲಿರುವ ಮಕ್ಕಳ ಸೇವೆಯಲ್ಲಿ ಕಳೆಯುತ್ತಾರೆ. ಮುಖ್ಯೋಪಾಧ್ಯಾಯ ಬಾಲಾಜಿ ಅವರ ಈ ಸೇವೆಗೆ ವಿದ್ಯಾರ್ಥಿಗಳಷ್ಟೇ ಅಲ್ಲ, ಪೋಷಕರೂ ತಲೆದೂಗುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್