ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು: ಆಳಕ್ಕೆ ಅಗೆದು ನೋಡಿದಾಗ ದಂಗುಬಡಿದ ರೈತರು

12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು, ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. ಇವುಗಳಷ್ಟೇ ಅಲ್ಲ.. ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿವೆ.

ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು: ಆಳಕ್ಕೆ ಅಗೆದು ನೋಡಿದಾಗ ದಂಗುಬಡಿದ ರೈತರು
ತೋಟದಲ್ಲಿ ಸಮತಟ್ಟು ಮಾಡುವಾಗ ಕೇಳಿ ಬಂತು ಭಾರಿ ಸದ್ದು
Edited By: ಸಾಧು ಶ್ರೀನಾಥ್​

Updated on: Jan 30, 2023 | 10:57 AM

ಭೂಮಿ ಅಗೆಯುವಾಗ ಹೊಲ ಅಥವಾ ತೋಟಗಳಲ್ಲಿ ಆಗಾಗ ಐತಿಹಾಸಿಕ ಪಳೆಯುಳಿಕೆಗಳು, ವಸ್ತುಗಳು ಕಂಡುಬರುತ್ತಿರುತ್ತವೆ. ಇಂತಹ ಸುದ್ದಿಗಳು ಜಗತ್ತಿನ ನಾನಾನ ಭಾಗಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಅಂಥದ್ದೇ ಒಂದು ಅಪರೂಪದ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ. ರೈತರು ತಮ್ಮ ಹೊಲಗಳನ್ನು ಸಮತಟ್ಟುಗೊಳಿಸುವಾಗ, 12ನೇ ಶತಮಾನದಷ್ಟು ಹಿಂದಿನ ಪುರಾತನ ಹೆಗ್ಗುರುತುಗಳು ಕಂಡುಬಂದಿವೆ. ವಿವರಗಳಿಗೆ ಹೋಗುವುದಾದರೆ.. ಕಾಕಿನಾಡ (Kakinada) ಜಿಲ್ಲೆಯ ತುನಿ ಸಮೀಪದ ಗೊಂಪಕೊಂಡ ಪ್ರದೇಶದಲ್ಲಿ ರೈತರು ತಮ್ಮ ಹೊಲಗಳನ್ನು ಸಮತಟ್ಟು ಮಾಡುತ್ತಿದ್ದಾಗ.. 12ನೇ ಶತಮಾನದ ಯಲಮಂಚಿಲಿ ಚಾಲುಕ್ಯರ ಕಾಲದ ಕಲ್ಲಿನ ಕುಂಡಗಳು (treasure), ಪಿರಮಿಡ್‌ಗಳು, ಶಿಲಾಶಾಸನಗಳು, ಕಲ್ಲು ಚಪ್ಪಡಿಗಳು ಪತ್ತೆಯಾಗಿವೆ. ಇವುಗಳಷ್ಟೇ ಅಲ್ಲ.. ಪುರಾತನವಾದ ಇಟ್ಟಿಗೆಗಳು, ದೇವಾಲಯದ ಅವಶೇಷಗಳು (antiquity) ಮತ್ತು ಶಿಲಾಶಾಸನಗಳೂ ಆ ಪ್ರದೇಶದಲ್ಲಿ ಕಂಡುಬಂದಿವೆ.

ಈ ಗೊಂಪಕೊಂಡ ಪ್ರದೇಶದ ಸಮೀಪದಲ್ಲಿ ಒಂದು ಊರು ಇತ್ತೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲಿನ ಜನ ಬೆಂಕಿ ಅವಘಡದಿಂದಲೋ ಅಥವಾ ಸಿಡುಬಿನಂತಹ ಭಯಾನಕ ಕಾಯಿಲೆಯಿಂದಲೋ ವಲಸೆ ಹೋಗಿರಬೇಕು. ಆದ್ದರಿಂದ ಕಾಲಾಂತರದಲ್ಲಿ ಅಲ್ಲಿನ ದೇವಾಲಯವು ಮಣ್ಣಿನಲ್ಲಿ ಹೂತು ಹೋಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇಲ್ಲಿ ವಾಸಿಸುತ್ತಿರುವ ರೈತರು ತಮ್ಮ ಹೊಲದ ಕೆಲಸದಲ್ಲಿ ದೊರೆತಿರುವ ಈ ದೇವಾಲಯದ ಕಲ್ಲುಗಳನ್ನು ತೋಟಕ್ಕೆ ಗಡಿ ಬೇಲಿಯಾಗಿ, ಉತ್ಖನನದಲ್ಲಿ ದೊರೆತ ದೇವರ ವಿಗ್ರಹಗಳನ್ನು ದೇವಸ್ಥಾನಗಳಲ್ಲಿಟ್ಟು ಪೂಜಿಸುತ್ತಿದ್ದೇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Also Read:

ಚಂದ್ರಬಾಬು ನಾಯ್ಡು ಸಮಾವೇಶದಲ್ಲಿ ಮತ್ತೊಂದು ಅಹಿತಕರ ಘಟನೆ, ಸೀರೆ ಪಡೆಯಲು ನೂಕು ನುಗ್ಗಲು ಉಂಟಾಗಿ 3 ಮಹಿಳೆಯರು ಸಾವು

ಏತನ್ಮಧ್ಯೆ, ಉತ್ಖನನದಲ್ಲಿ ದೊರೆತ ಈ ಶಿಲ್ಪಕಲಾ ನಿಧಿಯು ಕ್ರಿ.ಶ. 800-1240 ರ ನಡುವೆ ಪ್ರವರ್ಧಮಾನಕ್ಕೆ ಬಂದ ದೇವಾಲಯ ಎಂದು ಪುರಾತತ್ವಶಾಸ್ತ್ರಜ್ಞರು ಹೇಳಿದ್ದಾರೆ. ಯಲಮಂಚಿಲಿ ಚಾಲುಕ್ಯರ ಆಳ್ವಿಕೆಯಲ್ಲಿ ಆ ಪ್ರದೇಶದಲ್ಲಿ ‘ಜನನಾಧಪಟ್ಟಣ’ ಎಂಬ ಪಟ್ಟಣವಿತ್ತು ಎಂದು ಹೇಳಲಾಗುತ್ತದೆ. ನಂತರ ‘ಜಗನ್ನಾಥಪುರ’ ಎಂಬ ಗ್ರಾಮವಾಗಿ ಅದು ಚಲಾವಣೆಗೆ ಬಂದಿದೆ.

ಪ್ರಮುಖ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us