AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Black Ticket Scam: ತಿಮ್ಮಪ್ಪನ ಸನ್ನಿಧಿಯಲ್ಲಿ ಟಿಕೆಟ್​​ ಹಗರಣ -ಶಾಸಕ ಶೇಖ್ ಸಾಬಿ ಅರೆಸ್ಟ್​, ಕರ್ನಾಟಕದ ಭಕ್ತರಿಗೆ ಲಕ್ಷಾಂತರ ರೂ ಗೆ ಬ್ಲಾಕ್ ಟಿಕೆಟ್ ಮಾರಾಟ!

Andhra Pradesh MLC Shaik Sabji: ಶೇಖ್ ಸಾಬಿ ಕಡೆಯ ಭಕ್ತರು ದರ್ಶನಕ್ಕೆ ಬಂದಾಗ ಅವರು ನೀಡಿದ ಆಧಾರ್ ಕಾರ್ಡ್ ನಕಲಿ ಎಂಬುದನ್ನು TTD ಜಾಗೃತ ದಳ ಪತ್ತೆ ಹಚ್ಚಿತ್ತು. ದರ್ಶನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ ಸಲ್ಲಿಸಿದ ಭಕ್ತರ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಹೈದರಾಬಾದ್ ಆಗಿದ್ದು, ಅವರು ಕರ್ನಾಟಕದವರು ಎಂದು ಕಂಡುಬಂದಿದೆ.

Black Ticket Scam: ತಿಮ್ಮಪ್ಪನ ಸನ್ನಿಧಿಯಲ್ಲಿ ಟಿಕೆಟ್​​ ಹಗರಣ -ಶಾಸಕ ಶೇಖ್ ಸಾಬಿ ಅರೆಸ್ಟ್​, ಕರ್ನಾಟಕದ ಭಕ್ತರಿಗೆ ಲಕ್ಷಾಂತರ ರೂ ಗೆ ಬ್ಲಾಕ್ ಟಿಕೆಟ್ ಮಾರಾಟ!
Black Ticket Scam: ತಿಮ್ಮಪ್ಪನ ಸನ್ನಿಧಿಯಲ್ಲಿ ಟಿಕೆಟ್​​ ಹಗರಣ!
ಸಾಧು ಶ್ರೀನಾಥ್​
|

Updated on:Apr 22, 2023 | 10:03 AM

Share

ತಿರುಮಲ: ತಿರುಮಲ ತಿಮ್ಮಪ್ಪನ (Tirupati) ದೇಗುಲದಲ್ಲಿ ಪ್ರೋಟೋಕಾಲ್ ದರ್ಶನಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಎಂಎಲ್‌ಸಿ ( Andhra Pradesh legislative council member) ಭಾಗಿಯಾಗಿರುವ ಪ್ರಕರಣ ಸಂಚಲನ ಮೂಡಿಸಿದೆ. ತಿರುಮಲ ತಿರುಪತಿ ದೇವಸ್ಥಾನದ ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಭಾಗವು ತಿರುಪತಿ ವೆಂಕಟರಮಣಸ್ವಾಮಿ ದೇಗುಲದ ಟಿಕೆಟ್ ಮಾರಾಟಕ್ಕೆ (Black Ticket Scam) ಸಂಬಂಧಿಸಿದಂತೆ ಪೂರ್ವ-ಪಶ್ಚಿಮ ಗೋದಾವರಿ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಶೇಖ್ ಸಾಬಿ (East-West Godavari teachers’ constituency Shaik Sabji) ಮತ್ತು ಅವರ ಸಹಚರರನ್ನು ಶುಕ್ರವಾರ ಬಂಧಿಸಿದೆ. ನಂತರ ವಿಜಿಲೆನ್ಸ್ ವಿಂಗ್ (TTD vigilance wing) ಅಧಿಕಾರಿಗಳ ದೂರಿನ ಮೇರೆಗೆ ತಿರುಪತಿ ಪೊಲೀಸರು ಎಫ್‌ಐಆರ್ ಅನ್ನು ಎಂಎಲ್‌ಸಿ ಆಪ್ತ ಸಹಾಯಕ ವೇಣುಗೋಪಾಲ್ ವಿರುದ್ಧ ಎ1, ದೇಗಾ ರಾಜು ಎ2, ಎಂಎಲ್‌ಸಿ ಶೇಖ್ ಸಾಬಿ ವಿರುದ್ಧ ಐಪಿಸಿ ಸೆಕ್ಷನ್ 420, 468, 472, ರೆಡ್ ವಿತ್ 34 ಅಡಿಯಲ್ಲಿ ಎ3 ಎಂದು ದಾಖಲಿಸಿದ್ದಾರೆ. ಈ ಪೈಕಿ ಎಂಎಲ್ ಸಿ ಶೇಖ್ ಸಾಬಿಗೆ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿದೆ. ದೇಗರಾಜು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಎಂಎಲ್ ಸಿ ಪಿಎ ವೇಣುಗೋಪಾಲ್ ಬಿಡುಗಡೆಗೆ ಶಾಸಕ ಪಟಾಲಂ ಹೋರಾಟ ನಡೆಸುತ್ತಿದೆ.

300 ರೂಪಾಯಿ ವಿಶೇಷ ಪ್ರವೇಶ ದರ್ಶನ ವಿಭಾಗ ವ್ಯವಸ್ಥೆಯಡಿ ಆರು ಭಕ್ತರಿಗೆ ದರ್ಶನ ನೀಡಲು ಎಂಎಲ್‌ಸಿ ಶೇಖ್ ಸಾಬಿ 1 ಲಕ್ಷ ರೂ. ವಸೂಲಿ ಮಾಡಿದ್ದು, ನಕಲಿ ಆಧಾರ್ ಕಾರ್ಡ್ ಬಳಸಿ ಅಕ್ರಮವಾಗಿ ತಿಮ್ಮಪ್ಪನ ದರ್ಶನದ (Tirumala in Tirupati ) ಟಿಕೆಟ್ ಪಡೆದಿದ್ದಾರೆ ಎಂದು ಟಿಟಿಡಿ ಜಾಗೃತ ವಿಭಾಗ ತಿಳಿಸಿದೆ.

14 ಮಂದಿಗೆ ಶಿಷ್ಟಾಚಾರದಡಿ ವಿಐಪಿ ಬ್ರೇಕ್ ದರ್ಶನ ನೀಡುವ ಕುರಿತು ಎಂಎಲ್‌ಸಿ ಅವರು ಜೆಇಒ ಕಚೇರಿಗೆ ಮುಂಗಡ ಮಾಹಿತಿ ರವಾನಿಸಿದ್ದಾರೆ ಎಂದು ಟಿಟಿಡಿ ವಿಜಿಲೆನ್ಸ್ ಇಲಾಖೆ ತಿರುಮಲ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ನೀಡಿದೆ. ತಿರುಮಲ ದೇಗುಲದಲ್ಲಿ ಜನ ಪ್ರತಿನಿಧಿಯೊಬ್ಬರು ದರ್ಶನ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟಿಂಗ್‌ನಲ್ಲಿ ತೊಡಗಿಸಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು.

ಇದಕ್ಕೂ ಮುನ್ನ ಶುಕ್ರವಾರ ಮುಂಜಾನೆ ಶೇಖ್ ಸಾಬಿ ಹಾಗೂ ಇತರ ಭಕ್ತರು ದರ್ಶನಕ್ಕೆ ಬಂದಾಗ ಭಕ್ತರು ನೀಡಿದ ಆಧಾರ್ ಕಾರ್ಡ್ (Aadhaar cards) ನಕಲಿ ಎಂಬುದನ್ನು ಜಾಗೃತ ದಳ ಪತ್ತೆ ಹಚ್ಚಿತ್ತು. ದರ್ಶನ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ ಸಲ್ಲಿಸಿದ ಭಕ್ತರ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಹೈದರಾಬಾದ್ ಆಗಿದ್ದು, ಅವರು ಕರ್ನಾಟಕದವರು ಎಂದು ಕಂಡುಬಂದಿದೆ.

ವಿಜಿಲೆನ್ಸ್ ಮತ್ತು ಸೆಕ್ಯುರಿಟಿ ವಿಂಗ್ ಅವರನ್ನು ವಶಕ್ಕೆ ಪಡೆದಾಗ, ಎಂಎಲ್‌ಸಿ ಶೇಖ್ ಸಾಬಿ 500 ರೂಪಾಯಿ ಮೌಲ್ಯದ ವಿಐಪಿ ದರ್ಶನ ಟಿಕೆಟ್‌ಗಾಗಿ 1 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ದರ್ಶನ ಟಿಕೆಟ್ ಬ್ಲಾಕ್ ಮಾರ್ಕೆಟಿಂಗ್ ಮೂಲಕ ಭಕ್ತರಿಂದ ಪಡೆದ ಅಕ್ರಮ ಹಣವೆಲ್ಲ ಎಂಎಲ್ ಸಿ ಕಾರು ಚಾಲಕನ ಬ್ಯಾಂಕ್ ಖಾತೆಗೆ ಸೇರಿರುವುದೂ ಸಹ ತನಿಖೆಯಿಂದ ಬೆಳಕಿಗೆ ಬಂದಿದೆ. ಏತನ್ಮಧ್ಯೆ, ಎಂಎಲ್‌ಸಿ ಶೇಖ್ ಸಾಬಿ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ತಿರುಮಲ ದೇವಸ್ಥಾನದಲ್ಲಿ ದರ್ಶನ ಟಿಕೆಟ್‌ಗಾಗಿ 19 ಶಿಫಾರಸು ಪತ್ರಗಳನ್ನು ನೀಡಿದ್ದಾರೆ. ಈ ಪೈಕಿ ಹೆಚ್ಚಿನ ಟಿಕೆಟ್‌ಗಳು ದುಬಾರಿ ಬೆಲೆಗೆ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.

 ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:03 am, Sat, 22 April 23