Beauty Parlour woman: ಫೇಸ್ ಬುಕ್ ನಲ್ಲಿ ಪರಿಚಯವಾಯ್ತ.. ಮುಂದೆ ಕ್ಲೋಸ್ ಆದರು.. ಅಲ್ಲಿಗೆ ಆ ಬ್ಯೂಟಿಷಿಯನ್ ಕತೆಯೂ ಕ್ಲೋಸ್ ಆಯ್ತು!
ಬ್ಯೂಟಿಷಿಯನ್ ಹತ್ಯೆ ಪ್ರಕರಣ ಬೇಧಿಸಲು ವಿಶೇಷ ಪೊಲೀಸ್ ಟೀಂ ಕಾರ್ಯಪ್ರವೃತ್ತವಾಗಿದೆ. ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಅಥವಾ... ಚಕ್ರವರ್ತಿ ಮೊದಲು ಚಾಕುವಿನಿಂದ ದುರ್ಗಾ ಪ್ರಶಾಂತಿಯನ್ನು ಕೊಂದನಾ?
ಚಿತ್ತೂರಿನಲ್ಲಿ (Chittoor) ಅಮಾನುಷ ಘಟನೆ ನಡೆದಿದೆ. ವೆಲ್ಲೂರು ರಸ್ತೆಯ ಆನಂದ್ ಥಿಯೇಟರ್ ಸಮೀಪ ಬ್ಯೂಟಿ ಪಾರ್ಲರ್ (Beauty Parlour) ನಡೆಸುತ್ತಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ. ಯುವತಿಯ ಮೃತದೇಹದ ಪಕ್ಕದಲ್ಲಿ ಯುವಕನೊಬ್ಬ (Boy Friend) ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕೊನೆಯ ಉಸಿರೆಳೆಯುತ್ತಿದ್ದ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ.. ಆಕೆಯ ಮೈಮೇಲೆ ಯಾವುದೇ ಗಾಯಗಳು ಇಲ್ಲದಿರುವುದು ಅನುಮಾನಕ್ಕೆ (Mystery) ಎಡೆಮಾಡಿಕೊಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಚಿತ್ತೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿರುವ ನಾಗರಾಜು ಅವರ ಪುತ್ರಿ ದುರ್ಗಾ ಪ್ರಶಾಂತಿ ಕೆಲ ತಿಂಗಳ ಹಿಂದೆ ಫೇಸ್ ಬುಕ್ ಮೂಲಕ ಭದ್ರಾದ್ರಿ ಜಿಲ್ಲೆಯ ಚಕ್ರವರ್ತಿ ಎಂಬ ಯುವಕನ ಸಂಪರ್ಕಕ್ಕೆ ಬಂದಿದ್ದಳು. ಆಗ ಚಕ್ರವರ್ತಿ ಹೈದರಾಬಾದ್‌ನ ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಆದರೆ.. ಎರಡು ತಿಂಗಳ ಹಿಂದೆಯೇ ಚಕ್ರವರ್ತಿ ಕುಟುಂಬ ಸಮೇತ ಚಿತ್ತೂರಿನ ದುರ್ಗಾ ಪ್ರಶಾಂತಿ ಅವರ ಮನೆ ಬಳಿ ಬಾಡಿಗೆ ಮನೆ ಮಾಡಿಕೊಂಡು ಬಂದಿದ್ದರು. ಅದರೊಂದಿಗೆ.. ಎರಡು ಕುಟುಂಬಗಳ ನಡುವೆ ನಿಕಟ ಸಂಪರ್ಕ ಏರ್ಪಟ್ಟಿದೆಯಂತೆ.
Also Read:
ಬ್ಯೂಟಿ ಪಾರ್ಲರ್ ಆಂಟಿಗಾಗಿ ಪತ್ನಿಯನ್ನೆ ಕೊಲೆ ಮಾಡಿದನಾ ಗಂಡ? ಮದುವೆಯಾಗಿ ಮಗುವಿದ್ದರೂ ಗಂಡನಿಗೆ ಬೇರೊಂದು ಲವ್ವಿಡವ್ವಿ!
ಇಲ್ಲಿಯವರೆಗೆ ಎಲ್ಲವೂ ಚೆನ್ನಾಗಿದೆ.. ಮುಂದೇನಾಯ್ತು ಅಂದರೆ ನಿನ್ನೆ ಮಂಗಳವಾರ ಸಂಜೆ.. ತಾನು ನಡೆಸುತ್ತಿರುವ ಬ್ಯೂಟಿ ಪಾರ್ಲರ್ ಶಾಪ್ನಲ್ಲಿ ಯುವತಿ ನಿರ್ಜೀವವಾಗಿ ಮಲಗಿದ್ದಾಳೆ. ಆಕೆಯ ಮೃತದೇಹದ ಪಕ್ಕದಲ್ಲಿ ಚಕ್ರವರ್ತಿ ಸಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಆಕೆಯ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಪ್ರಾಥಮಿಕ ವಿಚಾರಣೆ ಬಳಿಕ ಪೊಲೀಸರು ಯುವತಿಯ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯೂಟಿಷಿಯನ್ ಹತ್ಯೆ ಪ್ರಕರಣ ಬೇಧಿಸಲು ವಿಶೇಷ ಪೊಲೀಸ್ ಟೀಂ ಕಾರ್ಯಪ್ರವೃತ್ತವಾಗಿದೆ. ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರಾ? ಅಥವಾ… ಚಕ್ರವರ್ತಿ ಮೊದಲು ಚಾಕುವಿನಿಂದ ದುರ್ಗಾ ಪ್ರಶಾಂತಿಯನ್ನು ಕೊಂದನಾ? ತದನಂತರ… ಬ್ಲೇಡ್‌ನಿಂದ ಕತ್ತು ಕೊಯ್ದುಕೊಂಡನಾ? ಪೊಲೀಸ್ ತಂಡ ಸಾಕ್ಷ್ಯ ಸಂಗ್ರಹಿಸಿದ ನಂತರ ತನಿಖೆಯಲ್ಲಿ ಏನೆಲ್ಲಾ ಬಯಲಾಗುತ್ತೋ ನೋಡೋಣ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:25 pm, Wed, 19 April 23