ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಇಂದು ಮತ್ತೆ 62 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಆಂಧ್ರದಲ್ಲಿ ಕೊರೊನಾ ಸೋಂಕು ಒಟ್ಟು ಪ್ರಕರಣಗಳು 955ಕ್ಕೇರಿದ್ದು ಸಾವಿರದ ಗಡಿಯತ್ತ ದಾಪುಗಾಲು ಹಾಕಿದೆ. 145 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇದೇ ವೇಳೆ ಇಬ್ಬರು ಕೊರೊನಾ ಸೋಂಕಿತ ವ್ಯಕ್ತಿಗಳು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 29ಕ್ಕೆ ಏರಿದೆ. ನಿನ್ನೆ 80 ಕೊರೊನಾ ಪಾಸಿಟೀವ್ ವ್ಯಕ್ತಿಗಳು ಪತ್ತೆಯಾಗಿದ್ದರು. ಮೂವರು ಸಾವನ್ನಪ್ಪಿದ್ದರು. ಆಂಧ್ರದಲ್ಲಿ ದಿನೇ ದಿನೆ ಭಾರಿ ಪ್ರಮಾಣದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಆಂಧ್ರದ ಜನತೆ ಭಯ ಭೀತರಾಗಿದ್ದಾರೆ.
ಪಕ್ಕದ ತೆಲಂಗಾಣದಲ್ಲಿಯೂ ಇಂದು ಮತ್ತೆ 13 ಪ್ರಕರಣಗಳು ಪತ್ತೆಯಾಗಿವೆ. ತೆಲಂಗಾಣದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣಗಳು 983 ಕ್ಕೆ ಏರಿವೆ.
ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1,755ಕ್ಕೆ ಏರಿಕೆ:
ತಮಿಳುನಾಡಿನಲ್ಲಿ ಇಂದು ಹೊಸದಾಗಿ 72 ಜನರಿಗೆ ಸೋಂಕು ತಗುಲಿದೆ. ಚೆನ್ನೈನಲ್ಲಿ ಇಂದು ಹೊಸದಾಗಿ 52 ಜನರಲ್ಲಿ ಸೋಂಕು ಪತ್ತೆಯಾಗಿದೆ. ಚೆನ್ನೈ ಮಹಾನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 452 ಕ್ಕೆ ಏರಿದೆ. ತಮಿಳುನಾಡಿನಲ್ಲಿ ಇದುವರೆಗೆ ಕೊರೊನಾಗೆ 22 ಜನ ಬಲಿಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಇಂದು 3 ಮಂದಿ ಕೊರೊನಾ ಪಾಸಿಟೀವ್ ವ್ಯಕ್ತಿಗಳು ಮೃತಪ್ಪಟಿದ್ದಾರೆ. ಬಂಗಾಳದಲ್ಲಿ ಕೊರೊನಾ ಮೃತರ ಸಂಖ್ಯೆ ಒಟ್ಟು 18ಕ್ಕೆ ಏರಿದೆ ಎಂದು ಪ. ಬಂಗಾಳ ಚೀಫ್ ಸೆಕ್ರೆಟರಿ ರಾಜೀವ್ ಸಿನ್ಹಾ ಹೇಳಿದ್ದಾರೆ.
Published On - 5:41 pm, Fri, 24 April 20