ವಿಜಯವಾಡದಲ್ಲಿದೆ ಗೂಗಲ್​ಗೂ ಗೊತ್ತಿರದ ವಿಳಾಸ; ಇದು ನಮ್ಮ ದೇಶದ ಪಾಕಿಸ್ತಾನ!

|

Updated on: Dec 13, 2024 | 3:40 PM

ಸಾಮಾನ್ಯವಾಗಿ ನಮಗೆ ಗೊತ್ತಿಲ್ಲದ ವಿಷಯಗಳಿದ್ದರೆ ನಾವು ಮೊದಲು ಆ ವಿಚಾರದ ಬಗ್ಗೆ ಜ್ಞಾನವಿರುವ ಬೇರೆಯವರ ಬಳಿ ಕೇಳುತ್ತಿದ್ದೆವು. ಆದರೀಗ ನಮಗೆ ಅನುಮಾನವಿದ್ದ ಪ್ರತಿಯೊಂದನ್ನೂ ಗೂಗಲ್‌ನಲ್ಲಿ ಹುಡುಕುತ್ತೇವೆ. ಗೂಗಲ್​ನಲ್ಲಿ ಯಾವುದೇ ವಿಷಯವನ್ನು ಟೈಪ್ ಮಾಡಿದರೂ ಅದು ನಿಮಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚು ಮಾಹಿತಿಯನ್ನು ನೀಡುತ್ತದೆ. ಆದರೆ, ಗೂಗಲ್‌ಗೆ ಕೂಡ ತಿಳಿದಿಲ್ಲದ ವಿಷಯಗಳು ಯಾವುವು? ಈ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆಂಧ್ರಪ್ರದೇಶದ ವಿಜಯವಾಡದಲ್ಲಿ ಪಾಕಿಸ್ತಾನವಿದೆ ಎಂಬುದು ಗೂಗಲ್​ಗೂ ತಿಳಿದಿಲ್ಲ.

ವಿಜಯವಾಡದಲ್ಲಿದೆ ಗೂಗಲ್​ಗೂ ಗೊತ್ತಿರದ ವಿಳಾಸ; ಇದು ನಮ್ಮ ದೇಶದ ಪಾಕಿಸ್ತಾನ!
ವಿಜಯವಾಡ
Follow us on

ವಿಜಯವಾಡ: ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಸರ್ಚ್ ಇಂಜಿನ್‌ಗಳಿಗೆ ಸಹ ವಿಳಾಸ ಗೊತ್ತಿರದ ಸ್ಥಳ ಒಂದಿದೆ. ಅದರ ಹೆಸರು ಪಾಕಿಸ್ತಾನ! ಅದೂ ಈ ಪಾಕಿಸ್ತಾನ ಇರುವುದು ನೆರೆಯ ರಾಜ್ಯವಾದ ಆಂಧ್ರಪ್ರದೇಶದಲ್ಲಿ. ಇದು ಎಲ್ಲಿದೆ ಅಂತ ಯೋಚಿಸುತ್ತಿದ್ದೀರಾ? ಆಂಧ್ರಪ್ರದೇಶದ ಬೆಜವಾಡದ ಒಂದು ಕಾಲೋನಿಗೆ ಪಾಕಿಸ್ತಾನ ಅಂತ ಹೆಸರಿಟ್ಟಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಳ್ವಿಕೆಯಲ್ಲಿ ನಿರ್ಮಿಸಿದ ಈ ಕಾಲೋನಿ ಗೂಗಲ್‌ನಲ್ಲಿಯೂ ನಿಮಗೆ ಸಿಗುವುದಿಲ್ಲ.

ಪಾಕಿಸ್ತಾನದ ಹೆಸರು ಕೇಳಿದಾಗ ಅಲ್ಲಿ ವಾಸಿಸುವವರೆಲ್ಲರೂ ಪಾಕಿಸ್ತಾನಿ ಎಂದು ಭಾವಿಸಬೇಡಿ. ಅಲ್ಲಿರುವವರೆಲ್ಲರೂ ನಮ್ಮವರೇ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಅವರು ಬಡವರು. 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ಗೆದ್ದಿತ್ತು. ಅದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಪ್ರತ್ಯೇಕತೆಯೊಂದಿಗೆ ಎರಡು ದೇಶಗಳ ಗಡಿಯಲ್ಲಿದ್ದ ಹಲವು ಕುಟುಂಬಗಳು ನಿರಾಶ್ರಿತರಾದರು. ಅವರಿಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ನಾನಾ ಭಾಗಗಳಲ್ಲಿ ಆಶ್ರಯ ಕಲ್ಪಿಸಿದರು.

ಇದನ್ನೂ ಓದಿ: ಗೂಗಲ್ ಸರ್ಚ್​ನಲ್ಲಿರೋ ಟಾಪ್ 10 ಸಿನಿಮಾಗಳಿವು; ಕನ್ನಡದ ಯಾವ ಚಿತ್ರಕ್ಕೆ ಸ್ಥಾನ?

1984ರಲ್ಲಿ ಈ ನಗರದ ಪಾಯಕಪುರಂ ಪ್ರದೇಶದಲ್ಲಿ 40 ಮನೆಗಳನ್ನು ಹೊಂದಿರುವ ಕಾಲೋನಿಯನ್ನು ಸ್ಥಾಪಿಸಲಾಯಿತು. ಅದಕ್ಕೆ ಪಾಕಿಸ್ತಾನ ಕಾಲೋನಿ ಎಂದು ಹೆಸರಿಸಲಾಯಿತು. ಇಂದಿರಾ ಗಾಂಧಿ ಆಳ್ವಿಕೆಯಲ್ಲಿ ಪಾಕಿಸ್ತಾನಿ ಜವಳಿ ವ್ಯಾಪಾರಿಗಳಿಗಾಗಿ ಈ ವಸಾಹತು ನಿರ್ಮಿಸಲಾಗಿದೆ ಎಂದು ತೋರುತ್ತದೆ. ಆದರೆ, ಈ ಕಾಲೋನಿಯಲ್ಲಿ ಪಾಕಿಸ್ತಾನಿಗಳೇ ಇಲ್ಲ, ಅವರು ಬಂದೂ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: ವಿಜಯವಾಡ ಭೇಟಿ ವೇಳೆ ಕೂದಲೆಳೆ ಅಂತರದಲ್ಲಿ ರೈಲು ಅಪಘಾತದಿಂದ ಪಾರಾದ ಸಿಎಂ ಚಂದ್ರಬಾಬು ನಾಯ್ಡು

ಆ ಸಮಯದಲ್ಲಿ ಭೀಕರ ಪ್ರವಾಹದಿಂದಾಗಿ ಅನೇಕ ನಿರಾಶ್ರಿತರು ಇಲ್ಲಿಗೆ ಬಂದು ಈ ಪ್ರದೇಶದಲ್ಲಿ ಆಶ್ರಯ ಪಡೆದರು ಎಂದು ಹೇಳಲಾಗುತ್ತದೆ. ಆಗ ಬಂದವರಲ್ಲಿ ಕೆಲವರು ಈಗಲೂ ಆ ಕಾಲೋನಿಯಲ್ಲಿ ವಾಸ ಮಾಡುತ್ತಿದ್ದರೆ, ಕೆಲವರು ಜಮೀನು ಮಾರಿ ಬೇರೆ ಪ್ರದೇಶಕ್ಕೆ ತೆರಳಿದ್ದಾರೆ. ವಿಚಿತ್ರವೆಂದರೆ ಪೊಲೀಸ್ ಠಾಣೆ ಬಳಿ ಇರುವ ಈ ಪಾಕಿಸ್ತಾನ ಕಾಲೋನಿಯ ಬಗ್ಗೆ ಹೊರಗಿನವರಿಗೆ ಗೊತ್ತಿಲ್ಲ. ಬೆಜವಾಡದ ಅನೇಕರಿಗೆ ಈ ಪ್ರದೇಶದ ಬಗ್ಗೆ ತಿಳಿದಿಲ್ಲ ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ