ಕೇರಳದಲ್ಲಿ ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ ವೇಳೆ ಹಿಂದೂ ವಿರೋಧಿ ಘೋಷಣೆ; ಕಾಂಗ್ರೆಸ್, ಸಿಪಿಎಂ ಈ ಬಗ್ಗೆ ಏನು ಹೇಳುತ್ತದೆ?: ಅನಿಲ್ ಆಂಟನಿ

| Updated By: ನಯನಾ ರಾಜೀವ್

Updated on: Jul 27, 2023 | 10:48 AM

I.N.D.I.A ಒಕ್ಕೂಟದಲ್ಲಿರುವ ಮುಸ್ಲಿಂ ಲೀಗ್, ಕಾಂಗ್ರೆಸ್, ಸಿಪಿಎಂ, ಕೇರಳದ ಸಿಪಿಐಎಂನ ಪ್ರತಿಕ್ರಿಯೆ ಏನು ? ಇದರ ಬಗ್ಗೆ ಕೇರಳದ ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆ? ಈ ರೀತಿಯ ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ಕೇರಳ ಮತ್ತು ಭಾರತದಲ್ಲಿ ಸಾಮಾನ್ಯ ಸಂಗತಿ ಎಂದು ಅಂದುಕೊಂಡಿದ್ದೀರಾ?

ಕೇರಳದಲ್ಲಿ ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ ವೇಳೆ ಹಿಂದೂ ವಿರೋಧಿ ಘೋಷಣೆ; ಕಾಂಗ್ರೆಸ್, ಸಿಪಿಎಂ ಈ ಬಗ್ಗೆ ಏನು ಹೇಳುತ್ತದೆ?: ಅನಿಲ್ ಆಂಟನಿ
ಅನಿಲ್ ಆ್ಯಂಟನಿ
Follow us on

ದೆಹಲಿ ಜುಲೈ 26: ಕೇರಳದಲ್ಲಿ (Kerala) ನಿನ್ನೆ ಆಘಾತಕಾರಿ ಘಟನೆಯೊಂದು ನಡೆದಿದೆ. ಹಿಂಸಾಚಾರ ಪೀಡಿತ ಮಣಿಪುರದಲ್ಲಿನ (Manipur) ಜನರಿಗೆ ಬೆಂಬಲ ವ್ಯಕ್ತಪಡಿಸಲು ಮುಸ್ಲಿಂ ಯೂತ್ ಲೀಗ್ ಆಯೋಜಿಸಿದ ಮೆರವಣಿಗೆ ಅದಾಗಿತ್ತು. ‘ನಿಮಗೆ ರಾಮಾಯಣ ಪಠಿಸಲು ಸಾಧ್ಯವಾಗುವುದಿಲ್ಲ. ನಾವು ನಿಮ್ಮನ್ನು ನಿಮ್ಮ ದೇವಾಲಯಗಳಲ್ಲಿ ನೇತು ಹಾಕುತ್ತೇವೆ. ನಿಮ್ಮನ್ನು ಸಜೀವ ದಹನ ಮಾಡುತ್ತೇವೆ ಎಂದು ಮೆರವಣಿಗೆಯಲ್ಲಿ ಸಾಗುತ್ತಿರುವ ಜನರು ಈ ರೀತಿ ಘೋಷಣೆಗಳನ್ನು ಕೂಗುತ್ತಿದ್ದಾರೆ .I.N.D.I.A ಒಕ್ಕೂಟದಲ್ಲಿರುವ ಮುಸ್ಲಿಂ ಲೀಗ್, ಕಾಂಗ್ರೆಸ್, ಸಿಪಿಎಂ, ಕೇರಳದ ಸಿಪಿಐಎಂನ ಪ್ರತಿಕ್ರಿಯೆ ಏನು ? ಇದರ ಬಗ್ಗೆ ಕೇರಳದ ಕಾಂಗ್ರೆಸ್ ಪಕ್ಷ ಏನು ಹೇಳುತ್ತದೆ? ಈ ರೀತಿಯ ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವುದು ಕೇರಳ ಮತ್ತು ಭಾರತದಲ್ಲಿ ಸಾಮಾನ್ಯ ಸಂಗತಿ ಎಂದು ಅಂದುಕೊಂಡಿದ್ದೀರಾ? ಎಂದು ಅನಿಲ್ ಕೆ.ಆಂಟನಿ (Anil K Antony) ಟ್ವೀಟ್ ಮಾಡಿದ್ದಾರೆ.

ಕಾಞಂಗಾಡ್ ಪ್ರತಿಭಟನೆಯ ಆಘಾತಕಾರಿ ದೃಶ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಂ ಲೀಗ್‌ನ “ನಿಮ್ಮನ್ನು ದೇವಾಲಯಗಳಲ್ಲಿ ನೇತು ಹಾಕುತೇತೇವೆ, “ನಿಮ್ಮನ್ನು ಸಜೀವ ದಹನ ಮಾಡುತ್ತೇವೆ ಎಂಬ ಘೋಷಣೆಗಳು ಖಂಡನೀಯ ಮತ್ತು ಸಮರ್ಥನೀಯವಲ್ಲ. ರಾಹುಲ್ ಗಾಂಧಿ ಅವರು ‘ಜಾತ್ಯತೀತ’ ಎಂದು ಕರೆಯುವ ಪಕ್ಷದ ಕಾರ್ಯಗಳಿಗೆ ಜವಾಬ್ದಾರರಾಗಿರಬೇಕು. ಈ ನಿದರ್ಶನವು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡಿರುವ ಆತಂಕಕಾರಿ ಸೂಚಕವಾಗಿದೆ ಎಂದು ಬಿಜೆಪಿ ವಿಡಿಯೊ ಟ್ವೀಟ್ ಮಾಡಿದೆ.

ಏನಿದು ಪ್ರಕರಣ?

ಕೇರಳದ ಕಾಸರಗೋಡು   ಜಿಲ್ಲೆಯ ಕಾಞಂಗಾಡ್‌ನಲ್ಲಿ ಮುಸ್ಲಿಂ ಲೀಗ್‌, ಮಣಿಪುರದ ಹಿಂಸಾಚಾರ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಲೀಗ್ ಸದಸ್ಯರು ದ್ವೇಷದ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದ  ಕಾಞಂಗಾಡ್ ನಗರಸಭೆಯ ಅಬ್ದುಲ್ ಸಲಾಂ ಎಂಬ ವ್ಯಕ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಫಿರೋಜ್ ಹೇಳಿದ್ದಾರೆ.


ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ 300 ಕ್ಕೂ ಹೆಚ್ಚು ವ್ಯಕ್ತಿಗಳು, ಹೆಚ್ಚಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನ ಯುವ ಘಟಕದ ಸದಸ್ಯರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ.  ಬಿಜೆಪಿ ಕಾಞಂಗಾಡ್ ಮಂಡಲಂ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಯೂತ್ ಲೀಗ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ 300 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೊಸದುರ್ಗ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಸರಗೋಡು: ಮಣಿಪುರ ಹಿಂಸಾಚಾರ ಖಂಡಿಸಿ ಮುಸ್ಲಿಂ ಲೀಗ್ ಪ್ರತಿಭಟನೆ; ದ್ವೇಷದ ಘೋಷಣೆ ಕೂಗಿದ ಸದಸ್ಯ ಅಮಾನತು

ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪಡಿಸುವ ಕೃತ್ಯಗಳನ್ನು ಮಾಡುವ ಐಪಿಸಿಯ ಸೆಕ್ಷನ್ 153 ಎ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಪಕ್ಷ ಎಂದಿದ್ದ ರಾಹುಲ್ ಗಾಂಧಿ
ರಾಹುಲ್ ಗಾಂಧಿ ಕಳೆದ ತಿಂಗಳು ಅಮೆರಿಕ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಭಾರತೀಯ ಸಮುದಾಯಗಳ ಜತೆ ಮಾತನಾಡುತ್ತಿರುವಾಗ, ದೇಶದ ಆರ್ಥಿಕತೆ, ಏಕತೆ ಇಲ್ಲಿನ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು ಆ ಸಂದರ್ಭದಲ್ಲಿ ‘‘ಮುಸ್ಲಿಂ ಲೀಗ್ ಸಂಪೂರ್ಣ ಜಾತ್ಯತೀತ ಪಕ್ಷವಾಗಿದೆ, ಅದರಲ್ಲಿ ಜಾತ್ಯತೀತವಲ್ಲದ ಯಾವುದೂ ಇಲ್ಲ’’ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಬಿಜೆಪಿಯು ಲೋಕಸಭಾ ಕ್ಷೇತ್ರವಾದ ವಯನಾಡಿನಲ್ಲಿ ಸ್ವೀಕಾರಾರ್ಹವಾಗಿ ಉಳಿಯಲು ರಾಹುಲ್ ಗಾಂಧಿಯು ಮುಸ್ಲಿಂ ಲೀಗ್​ ಅನ್ನು ಜಾತ್ಯತೀಯ ಪಕ್ಷ ಎಂದು ಕರೆದಿದ್ದಾರೆ ಎಂದು ಜರಿದಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Wed, 26 July 23