ಕಾಸರಗೋಡು: ಮಣಿಪುರ ಹಿಂಸಾಚಾರ ಖಂಡಿಸಿ ಮುಸ್ಲಿಂ ಲೀಗ್ ಪ್ರತಿಭಟನೆ; ದ್ವೇಷದ ಘೋಷಣೆ ಕೂಗಿದ ಸದಸ್ಯ ಅಮಾನತು
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಯುವ ಘಟಕವು ಕೇರಳದ ಕಾಸರಗೋಡಿನಲ್ಲಿ ರ‍್ಯಾಲಿ ನಡೆಸಿದ್ದು, ಅದರಲ್ಲಿ ಸದಸ್ಯರೊಬ್ಬರು ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಮುಸ್ಲಿ ಲೀಗ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಕಾಸರಗೋಡು ಜುಲೈ26: ಕೇರಳದ ಕಾಸರಗೋಡು (Kasaragod) ಜಿಲ್ಲೆಯ ಕಾಞಂಗಾಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಭಾಗವಾಗಿರುವ ಮುಸ್ಲಿಂ ಲೀಗ್‌ನ (Muslim League) ಸದಸ್ಯರು ‘ದ್ವೇಷ ಘೋಷಣೆ’ಗಳನ್ನು ಕೂಗಿದ್ದಾರೆ. ಮಣಿಪುರದ ಹಿಂಸಾಚಾರದ (Manipur Violence) ವಿರುದ್ಧದ ಪ್ರತಿಭಟನೆಯಲ್ಲಿ ಲೀಗ್ ಸದಸ್ಯರು ‘ದೇವಸ್ಥಾನಗಳ ಮುಂದೆ ನಿಮ್ಮನ್ನು ನೇತುಹಾಕಿ ಸುಟ್ಟು ಹಾಕುತ್ತೇನೆ’ ಎಂದು ಘೋಷಣೆ ಕೂಗಿರುವುದಾಗಿ ವರದಿ ಆಗಿದೆ.
ಘೋಷಣೆ ಕೂಗಿದ ವ್ಯಕ್ತಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಪಕ್ಷ ಹೇಳಿದೆ. ಕಾಞಂಗಾಡ್ ನಗರಸಭೆಯ ಅಬ್ದುಲ್ ಸಲಾಂ ಎಂಬ ವ್ಯಕ್ತಿಯನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ ಫಿರೋಜ್ ಹೇಳಿರುವುದಾಗಿ ಮಲಯಾಳ ಮನೋರಮಾ ವರದಿ ಮಾಡಿದೆ.
ಮುಸ್ಲಿಮ್ ಲೀಗ್‌ನ ವಿಚಾರಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದ್ದಕ್ಕಾಗಿ ಮತ್ತು ಪಕ್ಷವು ಮದ್ರಿತ ಪ್ರತಿಯಲ್ಲಿ ನೀಡಿರುವ ಘೋಷಣೆಗಿಂತ ವ್ಯತಿರಿಕ್ತವಾಗಿ ದ್ವೇಷದ ಘೋಷಣೆ ಕೂಗಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫಿರೋಜ್ ಹೇಳಿದ್ದಾರೆ. ಅಬ್ದುಲ್ ಸಲಾಂ ಮಾಡಿದ್ದು ಘೋರ ತಪ್ಪು ಎಂದು ಫಿರೋಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೇರಿದಂತೆ ವಿವಿಧ ಬಲಪಂಥೀಯ ವ್ಯಕ್ತಿಗಳು ಪ್ರಚೋದನಕಾರಿ ಘೋಷಣೆಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಕಾಂಗ್ರೆಸ್‌ನ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಯುವ ಘಟಕವು ಕೇರಳದ ಕಾಸರಗೋಡಿನಲ್ಲಿ ರ್ಯಾಲಿ ನಡೆಸಿ, ಹಿಂದೂ ವಿರೋಧಿ ಘೋಷಣೆಗಳನ್ನು ಕೂಗಿದರು, ಅವರನ್ನು (ಹಿಂದೂಗಳನ್ನು) ದೇವಾಲಯಗಳ ಮುಂದೆ ನೇತುಹಾಕಿ ಜೀವಂತವಾಗಿ ಸುಟ್ಟುಹಾಕುವುದಾಗಿ ಬೆದರಿಕೆ ಹಾಕಿದರು. ಪಿಣರಾಯಿ ಸರ್ಕಾರ ಅವರನ್ನು ಬೆಂಬಲಿಸದಿದ್ದರೆ ಅವರು ಇಲ್ಲಿಯವರೆಗೆ ಹೋಗಲು ಧೈರ್ಯ ಮಾಡುತ್ತಿರಲಿಲ್ಲ. ಕೇರಳದಲ್ಲಿ ಈಗ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಸುರಕ್ಷಿತವಾಗಿದ್ದಾರೆಯೇ? ಎಂದು ಮಾಳವಿಯಾ ಕೇಳಿದ್ದಾರೆ.
Youth wing of the Indian Union Muslim League, an ally of the Congress, held a rally in Kerala’s Kasargode, and raised vile anti-Hindu slogans, threatening to hang them (Hindus) in front of Temples and burn them alive…
They wouldn’t have dared to go this far had the Pinarayi… pic.twitter.com/lFV5caJ18C
— Amit Malviya (@amitmalviya) July 26, 2023
ಕೆಲವು ತಿಂಗಳ ಹಿಂದೆ ರ್ಯಾಲಿಯೊಂದರಲ್ಲಿ 7 ವರ್ಷದ ಬಾಲಕ ತನ್ನ ತಂದೆಯ ಭುಜದ ಮೇಲೆ ಕುಳಿತುಕೊಂಡು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ತಮ್ಮ ಅಂತಿಮ ವಿಧಿವಿಧಾನಗಳಿಗೆ ಅಕ್ಕಿ, ಹೂವು ಮತ್ತು ಕರ್ಪೂರವನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಘೋಷಣೆ ಕೂಗಿದ್ದ. ಕೇರಳ ಈಗ ಉಗ್ರ ಆಮೂಲಾಗ್ರೀಕರಣದ ಹೊಸ ಕೂಪವಾಗಿದೆ ಎಂದು ಮಾಳವಿಯಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುತ್ತಾರೆ, ಅಮಿತ್ ಶಾ ಪತ್ರ ಬರೆಯುತ್ತಾರೆ: ಮಲ್ಲಿಕಾರ್ಜುನ ಖರ್ಗೆ
ಘಟನೆಯನ್ನು ಖಂಡಿಸಿರುವ ಕೇರಳ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಕ್ಯುಲರ್ ಎಂದು ಕರೆಯುವ ಪಕ್ಷದ ಕ್ರಮಗಳಿಗೆ ಹೊಣೆಗಾರರಾಗಬೇಕು ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Wed, 26 July 23