AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಸರಗೋಡು: ರೊಚ್ಚಿಗೆದ್ದು ತಿವಿಯಿತು ಕಸಾಯಿಖಾನೆಗೆ ತಂದ ಎಮ್ಮೆ: ಯುವಕ ಸಾವು, 25 ಮಂದಿಗೆ ಗಾಯ

ಕಸಾಯಿಖಾನೆಗೆ ತಂದಿದ್ದ ಎಮ್ಮೆ ಸಿಟ್ಟಿಗೆದ್ದು ಕಟ್ಟಿದ್ದ ಹಗ್ಗವನ್ನು ಕಟ್ ಮಾಡಿ ಯುವಕರ ಮೇಲೆ ದಾಳಿ ನಡೆಸಿದ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಕಾಸರಗೋಡು: ರೊಚ್ಚಿಗೆದ್ದು ತಿವಿಯಿತು ಕಸಾಯಿಖಾನೆಗೆ ತಂದ ಎಮ್ಮೆ: ಯುವಕ ಸಾವು, 25 ಮಂದಿಗೆ ಗಾಯ
ಕಸಾಯಿಖಾನೆ ಬಳಿ ಎಮ್ಮೆ ಹಿಡಿಯುತ್ತಿರುವ ಯುವಕರು (ಎಡಚಿತ್ರ) ಮತ್ತು ಎಮ್ಮೆ ಹಿಡಿಯುವ ಕಾರ್ಯಾಚರಣೆ (ಬಲಚಿತ್ರ)
Rakesh Nayak Manchi
|

Updated on:Mar 10, 2023 | 10:08 PM

Share

ಕಾಸರಗೋಡು: ಕಸಾಯಿಖಾನೆ ಬಳಿ ರೊಚ್ಚಿಗೆದ್ದ ಎಮ್ಮೆಯ ತಿವಿತಕ್ಕೆ ಒಳಗಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಸಾದೀಕ್ (22) ಮೃತ ಯುವಕ. ಸಾದೀಕ್ ಎಮ್ಮೆಯೊಂದನ್ನು ವಾಹನದ ಮೂಲಕ ಮೊಗ್ರಾಲ್ ಪುತ್ತೂರಿನಲ್ಲಿರುವ ಕಸಾಯಿಖಾನೆಗೆ ತಂದಿದ್ದ. ಬಳಿಕ ಯುವಕರ ತಂಡ ಎಮ್ಮೆಯನ್ನು ವಾಹನದಿಂದ ಕೆಳಗಿಳಿಸುವಾಗ ಹಗ್ಗ ತುಂಡಾಗಿದೆ. ಅಷ್ಟರಲ್ಲಿ ರೊಚ್ಚಿಗೆದ್ದ ಎಮ್ಮೆ ಯುವಕರ ಮೇಲೆ ದಾಳಿ ಮಾಡಿದ್ದು, ಹಿಡಿಯಲು ಹೋದ ಸಾದೀಕ್​ನ ಹೊಟ್ಟೆಗೆ ಕೊಂಬಿನಿಂದ ತಿವಿದು ಮೇಲಕ್ಕೆತ್ತಿ ಎಸೆದು ಸಾರ್ವಜನಿಕ ಪ್ರದೇಶಕ್ಕೆ ನುಗ್ಗಿದೆ.

ಎಮ್ಮೆಯ ತಿವಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಸಾದೀಕ್​ನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತಾದರೂ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಇತ್ತ, ರೊಚ್ಚಿಗೆದ್ದ ಎಮ್ಮೆ ದಾಂದಲೆ ನಡೆದಿದ್ದು, ವಾಹನ ಸವಾರರ ಮೇಲೆ ದಾಳಿ ನಡೆಸಿದೆ. ಇದನ್ನು ನೋಡಿ ಭೀತಿಗೊಂಡ ಪಾದಚಾರಿಗಳು ಓಡಿದ್ದಾರೆ. ಮಾತ್ರವಲ್ಲದೆ, ಎಮ್ಮೆ ಹಲವು ಅಂಗಡಿಗಳಿಗೆ ನುಗ್ಗಿದ್ದು, ವಸ್ತುಗಳಿಗೆ ಹಾನಿ ಮಾಡಿದೆ.

ಇದನ್ನೂ ಓದಿ: ಸಾಲ ಮಾಡಿ ತಲೆಮರೆಸಿಕೊಂಡ ತಂದೆ: ಡಿಸಿ ಕಚೇರಿ ಮುಂದೆ ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಎಮ್ಮೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಬ್ಬಂದಿಗೆ ಸಾರ್ವಜನಿಕರು ಕೂಡ ಸಾಥ್ ನೀಡಿದ್ದಾರೆ. ಅದರಂತೆ ಎಲ್ಲರು ಒಟ್ಟು ಸೇರಿ ಎಮ್ಮೆಯನ್ನು ಹಗ್ಗ ಹಾಕಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ 25 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಅಕ್ರಮವಾಗಿ ಸಾಗಿಸ್ತಿದ್ದ 750 ಕೆಜಿ ಗೋಮಾಂಸ ಜಪ್ತಿ

ಕಾರವಾರ: ಗೋವುಗಳನ್ನು ಹತ್ಯೆ ಮಾಡಿ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು 1.5 ಲಕ್ಷ ರೂಪಾಯಿ ಮೌಲ್ಯದ 750 ಕೆಜಿ ಗೋಮಾಂಸ ಜಪ್ತಿ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಡೊಂಗರಪಟ್ಟಿ ಕ್ರಾಸ್ ಬಳಿ ನಡೆದಿದೆ. ಅನುಮಾನ ಬಾರದಂತೆ ಗೋಮಾಂಸದ ಮೇಲೆ ಭತ್ತದ ಹುಲ್ಲನ್ನ ಹಾಕಿ ಬೊಲೆರೊ ವಾಹನದಲ್ಲಿ ಸಾಗಿಸುತ್ತಿದ್ದ ಮಾಹಿತಿ ತಿಳಿದ ಭಟ್ಕಳ ಪೊಲೀಸರು ಕಾರ್ಯಾಚರಣೆಗೆ ಇಳಿದು ಓರ್ವನ ಬಂಧಿಸಿ ಗೋಮಾಂಸ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Fri, 10 March 23