Q Fever: ಹೈದರಾಬಾದ್ನಲ್ಲಿ Q ಜ್ವರ ಹೆಚ್ಚಳ, ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ಮಾರಾಟಗಾರರಿಗೆ ಸೂಚನೆ
ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ.
ತೆಲಂಗಾಣದಲ್ಲಿ ಕ್ಯೂ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿವೆ, ನಗರದ ಕಸಾಯಿಖಾನೆಗಳಿಂದ ದೂರವಿರುವಂತೆ ಮಾಂಸ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ. ದನ ಮತ್ತು ಮೇಕೆಗಳಿಂದ ಹರಡುವ ಈ ಬ್ಯಾಕ್ಟೀರಿಯಾದ ಸೋಂಕಿನಿಂದ, ರೋಗಿಗಳು ಜ್ವರ, ಆಯಾಸ, ತಲೆನೋವು, ಎದೆ ನೋವು ಮತ್ತು ಅತಿಸಾರದಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೈದರಾಬಾದ್ ಮೂಲದ ರಾಷ್ಟ್ರೀಯ ಸಂಶೋಧನಾ ಕೇಂದ್ರ (NRCM) 250 ಮಾದರಿಗಳ ಪೈಕಿ 5 ಮಾಂಸದ ವ್ಯಾಪಾರಿಗಳಿಗೆ ಕಾಕ್ಸಿಯೆಲ್ಲಾ ಬರ್ನೆಟೈ ಎಂಬ ಬ್ಯಾಕ್ಟೀರಿಯಂನಿಂದ Q ಜ್ವರ ಕಂಡುಬಂದಿದೆ ಎಂದು ಸಿರೊಲಾಜಿಕಲ್ ಪರೀಕ್ಷೆಗಳ ಮೂಲಕ ದೃಢಪಡಿಸಿದೆ.
ಶೇ.5 ಕ್ಕಿಂತ ಕಡಿಮೆ ಮಂದಿಯಲ್ಲಿ ರೋಗ ಪತ್ತೆಯಾದ ತಕ್ಷಣ ಅಧಿಕಾರಿಗಳು ಸೋಂಕಿತ ಮಾಂಸ ವ್ಯಾಪಾರಿಗಳನ್ನು ಕಸಾಯಿಖಾನೆಯಿಂದ ದೂರವಿಡುವಂತೆ ಆದೇಶಿಸಿದರು. ಇದರೊಂದಿಗೆ ಮುಂಗಡ ರೋಗನಿರ್ಣಯ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ. ಆದರೆ, ಇದುವರೆಗೆ ಕೆಲವೇ ಮಾಂಸ ವ್ಯಾಪಾರಿಗಳಿಗೆ ಸೋಂಕು ತಗುಲಿರುವುದರಿಂದ ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಎಚ್‌ಎಂಸಿ ಮುಖ್ಯ ಪಶುವೈದ್ಯಾಧಿಕಾರಿ ಅಬ್ದುಲ್ ವಕೀಲ್ ಸ್ಪಷ್ಟಪಡಿಸಿದ್ದಾರೆ.
ಈ ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಇರುವುದನ್ನು ಸಿರೊಪೊಸಿಟಿವ್ ಪರೀಕ್ಷೆ ತೋರಿಸುತ್ತದೆ ಎಂದು ವೈದ್ಯರು ಹೇಳಿದರು. ಸೈಟಾಕೋಸಿಸ್ ಮತ್ತು ಹೆಪಟೈಟಿಸ್ ಇ ನಂತಹ ಝೂನೋಟಿಕ್ ಕಾಯಿಲೆಗಳು ಕಂಡುಬಂದಿವೆ ಎಂದು ವರದಿ ಹೇಳುತ್ತದೆ. ಸೋಂಕಿತ ಗಿಳಿಗಳಿಂದ ಸಿಟ್ಟಾಕೋಸಿಸ್ ಮನುಷ್ಯರಿಗೆ ಹರಡುತ್ತದೆ. ಕಸಾಯಿ ಖಾನೆಗಳಿಗೆ ಗಾಳಿಯ ಮೂಲಕ ಸೋಂಕು ತಗುಲುವ ಭೀತಿ ಎದುರಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ