AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh: ಅಣ್ಣನ ಮಗಳನ್ನು ಮದುವೆಯಾದ ವ್ಯಕ್ತಿ, ಗ್ರಾಮಸ್ಥರಿಂದ ವಿರೋಧ

ಅಣ್ಣನ ಮಗಳನ್ನು ಮದುವೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on:Jul 29, 2023 | 4:49 PM

Share

ಜೌನ್‌ಪುರ, ಜು.26: ತನ್ನ ಸ್ವಂತ ಅಣ್ಣನ ಮಗಳನ್ನು ಕುಟುಂಬದ ಸದಸ್ಯರ ಮುಂದೆ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶ(Uttar Pradesh) ಜೌನ್‌ಪುರ ಜಿಲ್ಲೆಯ ತಾಜುದ್ದೀನ್‌ಪುರ ಗ್ರಾಮದಲ್ಲಿ ನಡೆದಿದೆ. ಇದೀಗ ಈ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಇಬ್ಬರೂ ತಮ್ಮ ಕುಟುಂಬದ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಶುಭಂ ಎಂಬ ವ್ಯಕ್ತಿ ತನ್ನ ಅಣ್ಣನ ಮಗಳಾದ ರಿಯಾಳನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಮೊದಲು ಈ ವಿವಾಹಕ್ಕೆ ಇಬ್ಬರ ಮನೆಯವರು ಕೂಡ ವಿರೋಧ ವ್ಯಕ್ತಪಡಿಸಿದ್ದರು, ಆದರೆ ಶುಭಂ ಮತ್ತು ರಿಯಾ ಈ ಮೊದಲೇ ನಾವು ಪ್ರೀತಿ ಮಾಡುತ್ತಿದ್ದೇವೆ, ಮದುವೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಗಟ್ಟಿ ತೀರ್ಮಾನವನ್ನು ಮಾಡಿಕೊಂಡಿದ್ದರು.  ಈ ಕಾರಣಕ್ಕೆ ಮನೆಯವರು ಕೂಡ ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ.

ಇದನ್ನೂ ಓದಿ: ನಿನ್ನ ಲಿಂಗ ಬದಲಿಸುತ್ತೇನೆ ಎಂದು ಹೇಳಿ ಮಹಿಳೆಯ ಪ್ರಾಣವನ್ನೇ ತೆಗೆದ ಮಂತ್ರವಾದಿ

ಇನ್ನೂ ಮದುವೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಮದುವೆಯನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಭಂ ಮತ್ತು ರಿಯಾ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇದೀಗ ನಾವು ಸ್ವಇಚ್ಫೆಯಿಂದ ಮದುವೆಯಾಗಿದ್ದೇವೆ, ಆಕೆ ನನ್ನ ಅಣ್ಣನ ಮಗಳು, ನಾನು ಅವಳಿಗೆ ಚಿಕ್ಕಪ್ಪ ಆಗಬೇಕು ಎಂದು ಶುಭಂ ಹೇಳಿದ್ದಾರೆ.

ಈ ಮದುವೆಗೆ ಆ ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಧರ್ಮಕ್ಕೆ ಇದು ವಿರುದ್ಧವಾಗಿದೆ, ನಮ್ಮ ಧರ್ಮದ ಪ್ರಕಾರ ಅಣ್ಣನ ಮಗಳು ಆತನಿಗೂ ಮಗಳು, ಇದು ಪಾಪ ಮದುವೆ, ಇದನ್ನು ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Wed, 26 July 23