Delhi Crime: ಸಮಾಲೋಚನೆ ವೇಳೆ ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ರೋಗಿ
ರೋಗಿಯ ಸೋಗಿನಲ್ಲಿ ಬಂದು ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಗಾರಾಮ್ ಆಸ್ಪತ್ರೆಯಲ್ಲಿ ಹಿರಿಯ ನ್ಯೂರೋಸರ್ಜನ್ ಅವರನ್ನು ಭೇಟಿಯಾಗಲು ಬಂದಿದ್ದ ರೋಗಿಯು ಚಾಕುವಿನಿಂದ ವೈದ್ಯರ ಮೇಲೆ ದಾಳಿ ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದೆಹಲಿ, ಜುಲೈ 26: ರೋಗಿಯ ಸೋಗಿನಲ್ಲಿ ಬಂದು ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಗಂಗಾರಾಮ್ ಆಸ್ಪತ್ರೆಯಲ್ಲಿ ಹಿರಿಯ ನ್ಯೂರೋಸರ್ಜನ್ ಅವರನ್ನು ಭೇಟಿಯಾಗಲು ಬಂದಿದ್ದ ರೋಗಿಯು ಚಾಕುವಿನಿಂದ ವೈದ್ಯರ ಮೇಲೆ ದಾಳಿ ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
21 ವರ್ಷದ ರೋಗಿಯು ಆಸ್ಪತ್ರೆಯ ಡಾ. ಸತ್ನಾಮ್ ಸಿಂಗ್ ಚಬ್ಬಾ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಚಿಕಿತ್ಸಕರನ್ನು ಭೇಟಿಯಾಗ ಸಮಾಲೋಚನೆ ನಡೆಸುವ ವೇಳೆ ಜೇಬಿನಲ್ಲಿ ಅಡಗಿಸಿಟ್ಟಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಮತ್ತಷ್ಟು ಓದಿ: Bengaluru News: ಲಾರಿಗಳ ಡೀಸೆಲ್ ಕದಿಯಲು ಬಂದಿದ್ದ ಇಬ್ಬರು ಕಳ್ಳರಿಗೆ ಥಳಿಸಿದ ಚಾಲಕರು; ಓರ್ವ ಸಾವು
ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಮಯೋಚಿತವಾಗಿ ಮಧ್ಯ ಪ್ರವೇಶಿಸಿ ವೈದ್ಯರಿಗೆ ಯಾವುದೇ ಗಂಭೀರ ಗಾಯವಾಗದಂತೆ ತಡೆದಿದ್ದಾರೆ. ಘಟನೆಯಲ್ಲಿ ಶಸ್ತ್ರಚಿಕಿತ್ಸಕನ ಹೆಬ್ಬೆರಳಿಗೆ ಸಣ್ಣ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸಕರ ದೂರಿನ ಮೇರೆಗೆ ರೋಗಿಯ ವಿರುದ್ಧ ವೈದ್ಯರು, ವೈದ್ಯಕೀಯ ವೃತ್ತಿಪರರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲಿನ ದೌರ್ಜನ್ಯ ತಡೆ ಮಸೂದೆ 2018 ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ