Bengaluru News: ಲಾರಿಗಳ ಡೀಸೆಲ್ ಕದಿಯಲು ಬಂದಿದ್ದ ಇಬ್ಬರು ಕಳ್ಳರಿಗೆ ಥಳಿಸಿದ ಚಾಲಕರು; ಓರ್ವ ಸಾವು
ಮಧ್ಯರಾತ್ರಿ ನಿಂತಿದ್ದ ಲಾರಿಗಳಲ್ಲಿ ಡೀಸೆಲ್ ಕದಿಯಲು ಬಂದವನನ್ನ ಲಾರಿ ಚಾಲಕರು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ ಘಟನೆ ಹೊಸಕೋಟೆ ಹೊರವಲಯದ ಮಾಲೂರು ರಸ್ತೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ, ಜು.26: ಮಧ್ಯರಾತ್ರಿ ನಿಂತಿದ್ದ ಲಾರಿಗಳಲ್ಲಿ ಡೀಸೆಲ್ ಕದಿಯಲು ಬಂದವನನ್ನ ಲಾರಿ ಚಾಲಕರು ಹಿಡಿದು ಹಿಗ್ಗಾಮುಗ್ಗ ಥಳಿಸಿ ಕೊಲೆ ಮಾಡಿದ ಘಟನೆ ಹೊಸಕೋಟೆ(Hoskote) ಹೊರವಲಯದ ಮಾಲೂರು ರಸ್ತೆಯಲ್ಲಿ ನಡೆದಿದೆ. ಹೌದು ಇಬ್ಬರು ಕಳ್ಳರನ್ನ ಡಿಸೆಲ್ ಕದಿಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಚಾಲಕರು ಹಿಡಿದುಕೊಂಡಿದ್ದಾರೆ. ಬಳಿಕ ಅವರ ಮೇಲೆ ಲಾರಿ ಚಾಲಕರು ಹಲ್ಲೆ ನಡೆಸಿದ್ದು, ಈ ವೇಳೆ ಓರ್ವ ಕಳ್ಳ ಅಸ್ವಸ್ಥನಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ನಂತರ ಚಾಲಕರು ಮೃತ ಕಳ್ಳನ ಮೃತದೇಹವನ್ನ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಿ, ಮರ್ತೋರ್ವ ಕಳ್ಳನನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ. ಇನ್ನು ಘಟನೆ ಕುರಿತು ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಯರ್ ಬಾಟಲ್ನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್
ಬೆಂಗಳೂರು: ಬಿಯರ್ ಬಾಟಲ್ನಿಂದ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಇದೀಗ ಅರೆಸ್ಟ್ ಆಗಿದ್ದಾರೆ. ಹೌದು ಮಾರಾಣಾಂತಿಕ ಹಲ್ಲೆ ನಡೆಸಿದ್ದ ಅಫ್ರೋಜ್, ರಾಕೇಶ್, ರಾಜು ಹಾಗೂ ಆದಿಲ್ ಪಾಷ ಬಂಧಿತ ಆರೋಪಿಗಳು. ಇನ್ನು ಈ ಘಟನೆ ಇದೇ ತಿಂಗಳ ಜುಲೈ16ರ ಮಧ್ಯರಾತ್ರಿಯಲ್ಲಿ ನಡೆದಿದ್ದು, ಮಿಥುನ್ ರಾಜ್ ಹಾಗೂ ಆತನ ಗೆಳೆಯನ ಮೇಲೆ ಹಲ್ಲೆ ಮಾಡಲಾಗಿತ್ತು. ತಡರಾತ್ರಿ ಮಿಲೇನಿಯಂ ಬಾರ್ ಬಳಿ ಆಟೋದಲ್ಲಿ ಕುಳಿತಿದ್ದ ಗೆಳೆಯರು, ಜೋರಾಗಿ ಸಾಂಗ್ ಹಾಕಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಎರಡು ಬೈಕ್ನಲ್ಲಿ ಬಂದ ನಾಲ್ವರು ದಾಳಿ ಮಾಡಿದ್ದರು. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:Dakshina Kannada: ಚಿನ್ನಕ್ಕಾಗಿ ಅಜ್ಜ-ಅಜ್ಜಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಂಗಳೂರಿನಲ್ಲಿ ಸಿಕ್ಕಿಬಿದ್ದ
ಬಾಟಲ್ನ ಕ್ಯಾಪ್ ಮೇಲಿನ ಬ್ಯಾಚ್ ನಂಬರ್ನಿಂದ ಆರೋಪಿಗಳು ಪತ್ತೆ
ಇನ್ನು ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿಯನ್ನ ಪರಿಶೀಲಿಸಿದ್ದಾರೆ. ಆದರೂ ಆರೋಪಿಗಳ ಚಹರೆಯ ಸ್ಪಷ್ಟತೆ ತಿಳಿದಿಲ್ಲ. ಬಳಿಕ ಘಟನಾ ಸ್ಥಳದ ಪರಿಶೀಲನೆ ವೇಳೆ ಸಿಕ್ಕ ಬಿಯರ್ ಬಾಟಲ್ಗಳ ಕ್ಯಾಪ್ ಮೇಲಿನ ಬ್ಯಾಚ್ ನಂಬರ್ ಪತ್ತೆಯಾಗಿದೆ. ಬಳಿಕ ಅದರ ಮೂಲಕ ಖರೀದಿಯಾದ ಬಾರ್ ಪತ್ತೆ ಹಚ್ಚಿದ ಪಿಎಸ್ಐ ರವೀಶ್ ಅವರು ಸಿಸಿಟಿವಿ ಪರಿಶೀಲನೆ ವೇಳೆ ಆರೋಪಿಗಳು ಬಿಯರ್ ಖರೀದಿ ಹಾಗೂ ಬೈಕ್ನಲ್ಲಿ ತೆರಳುವ ದೃಶ್ಯ ಲಭ್ಯವಾಗಿದೆ. ಬಳಿಕ ನಾಲ್ವರು ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ