ಒಂದೇ ರೂಪಾಯಿ ವೇತನ ಪಡೆಯುವುದಾಗಿ ಹೇಳಿದ ಪಂಜಾಬ್​​​ನ ಹೊಸ ಅಡ್ವೋಕೇಟ್​ ಜನರಲ್​ ಸಿಧು

| Updated By: Lakshmi Hegde

Updated on: Mar 20, 2022 | 8:12 AM

2007ರಲ್ಲಿ ಇವರಿಗೆ ಸೀನಿಯರ್​ ಅಡ್ವೋಕೇಟ್​ ಹುದ್ದೆ ಸಿಕ್ಕಿತು. ನಂತರ 2008ರಿಂದ 2014ರವರೆಗೆ ಅಸಿಸ್ಟೆಂಟ್​​ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಆಗಿ ಕಾರ್ಯನಿರ್ವಹಿಸಿದರು.

ಒಂದೇ ರೂಪಾಯಿ ವೇತನ ಪಡೆಯುವುದಾಗಿ ಹೇಳಿದ ಪಂಜಾಬ್​​​ನ ಹೊಸ ಅಡ್ವೋಕೇಟ್​ ಜನರಲ್​ ಸಿಧು
ಅನ್ಮೋಲ್​ ರತ್ತನ್​ ಸಿಧು
Follow us on

ಪಂಜಾಬ್​ ರಾಜ್ಯ ಸರ್ಕಾರ ಹೊಸದಾಗಿ ನೇಮಕ ಮಾಡಿರುವ ಅಡ್ವೋಕೇಟ್ ಜನರಲ್​ ಅನ್ಮೋಲ್​ ರತ್ತನ್​ ಸಿಧು, ತಾವು ತಮ್ಮ ಕೆಲಸಕ್ಕೆ ಕೇವಲ 1 ರೂಪಾಯಿ ಸಂಬಳ ಪಡೆಯುವುದಾಗಿ ಹೇಳಿದ್ದಾರೆ. ಎಲ್ಲ ಕೇಸ್​​ಗಳನ್ನು ಪಾರದರ್ಶಕವಾಗಿ ನಡೆಸುತ್ತೇನೆ. ಆದರೆ ವೃಥಾ ಹೆಚ್ಚಿನ ವೇತನ ಪಡೆದು ಸರ್ಕಾರಕ್ಕೆ ಹೊರೆಯಾಗುವುದಿಲ್ಲ ಎಂದು ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಈ ಮಾಧ್ಯಮದೊಂದಿಗೆ ಅವರು ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನದಲ್ಲಿ ಅವರು ಅತ್ಯಂತ ಸೂಕ್ಷ್ಮ ಪ್ರಕರಣಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಖಾಸಗಿ ವ್ಯಕ್ತಿಗಳ ಕ್ರಿಮಿನಲ್​, ಸಿವಿಲ್​, ಸಾಂವಿಧಾನಿಕ, ಭೂಮಿಗೆ ಸಂಬಂಧಪಟ್ಟ ಪ್ರಕರಣಗಳನ್ನೂ ಕೈಗೆತ್ತಿಕೊಂಡು, ಗೆದ್ದಿದ್ದಾರೆ. ಇವರೊಬ್ಬ ಪ್ರತಿಭಾವಂತ ಹಿರಿಯ ವಕೀಲರು.

1958ರ ಮೇ 1ರಂದು, ಕಾರ್ಮಿಕ ದಿನದಂದೇ ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್​ ರತ್ತನ್​ ಸಿಧು, 1975ರವರೆಗೆ ಹಳ್ಳಿಶಾಲೆಯಲ್ಲೇ ಕಲಿಸಿದ್ದಾರೆ. ನಂತರ ಚಂಡಿಗಢ್​​ಗೆ ತೆರಳಿ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಬಳಿಕ ಪಂಜಾಬ್​ ಯೂನಿವರ್ಸಿಟಿಯಲ್ಲಿ ಕಾನೂನು ಓದಿದ್ದಾರೆ. ಸೋಶಿಯೋ-ಪೊಲಿಟಿಕಲ್​​ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ ಅವರು, 1981-1982ರವರೆಗೆ ಪಂಜಾಬ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಂಡಳಿ ಅಧ್ಯಕ್ಷರಾಗಿದ್ದರು. 1985ರಲ್ಲಿ ಈ ಕಾನೂನು ವೃತ್ತಿ ಪ್ರವೇಶಿಸಿದರು. 1993ರಲ್ಲಿ ಪಂಜಾಬ್​​ನ ಡೆಪ್ಯೂಟಿ ಅಡ್ವೋಕೇಟ್​ ಜನರಲ್​ ಆಗಿ ನೇಮಕಗೊಂಡರು. 2005ರಲ್ಲಿ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​​ನಲ್ಲಿ ಹೆಚ್ಚುವರಿ ಅಡ್ವೋಕೇಟ್​ ಜನರಲ್​ ಆಗಿದ್ದರು. ಈ ವೇಳೆ ಹಲವು ಖಾಸಗಿ ಕೇಸ್​​ಗಳನ್ನು ಅವರು ನಿಭಾಯಿಸುತ್ತಿದ್ದರು.

2007ರಲ್ಲಿ ಇವರಿಗೆ ಸೀನಿಯರ್​ ಅಡ್ವೋಕೇಟ್​ ಹುದ್ದೆ ಸಿಕ್ಕಿತು. ನಂತರ 2008ರಿಂದ 2014ರವರೆಗೆ ಅಸಿಸ್ಟೆಂಟ್​​ ಸಾಲಿಸಿಟರ್​ ಜನರಲ್​ ಆಫ್​ ಇಂಡಿಯಾ ಆಗಿ ಕಾರ್ಯನಿರ್ವಹಿಸಿದರು. ಪಂಜಾಬ್​ ಮತ್ತು ಹರ್ಯಾಣ ಕೋರ್ಟ್​​ನಲ್ಲಿ, ಸಿಬಿಐನ ಪಬ್ಲಿಕ್​ ಪ್ರಾಸಿಕ್ಯೂಟರ್​ ಆಗಿಯೂ ಕೆಲಸ ಮಾಡಿದ್ದಾರೆ.  ಅನ್ಮೋಲ್​ ರತ್ತನ್​ ಸಿಧು ಅವರು ಪಂಜಾಬ್​​ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪರ್ಮಾನ್​ ಪಾತ್ರಾಕ್ಕೂ ಭಾಜನರಾಗಿದ್ದಾರೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇವರನ್ನು ಸರ್ಕಾರದ ಪರ ಅಡ್ವೋಕೇಟ್ ಜನರಲ್​ ಆಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: World Sparrow Day 2022 : ಇಂದು ವಿಶ್ವ ಗುಬ್ಬಚ್ಚಿ ದಿನ: ಈ ದಿನವನ್ನು ಹೇಗೆ ಆಚರಿಸುವುದು? ಇಲ್ಲಿದೆ ಮಾಹಿತಿ