Cheetah Death: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, ನಾಲ್ಕು ತಿಂಗಳಲ್ಲಿ 8ನೇ ಘಟನೆ

ಚೀತಾ ಸಾವು: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. 20 ಚೀತಾಗಳಲ್ಲಿ 4 ತಿಂಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Cheetah Death: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, ನಾಲ್ಕು ತಿಂಗಳಲ್ಲಿ 8ನೇ ಘಟನೆ
ಚೀತಾ

Updated on: Jul 14, 2023 | 5:11 PM

ಭೋಪಾಲ್, ಜುಲೈ 14: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾಗಿದ್ದ, ಒಟ್ಟು 20 ಚೀತಾಗಳಲ್ಲಿ (Cheetah Death) 8 ಚೀತಾಗಳು ಸಾವನ್ನಪ್ಪಿದೆ. ಇದೀಗ ಮತ್ತೊಂದು ಚೀತಾ ಸಾವನ್ನಪ್ಪಿದ್ದು, ಇದು ಸೇರಿ 4 ತಿಂಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿರುವ ಚೀತಾವನ್ನು ಸೂರಜ್​ ಎಂದು ಗರುತಿಸಲಾಗಿದೆ. ಸೂರಜ್ ಎಂಬ ಚೀತಾದ ಸಾವಿಗೆ ಕಾರಣ ಏನು ಎಂಬದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ, ಮತ್ತೊಂದು ತೇಜಸ್ ಎಂಬ ಗಂಡು ಚೀತಾ ಸಾವನ್ನಪ್ಪಿದೆ. ಈ ಚೀತಾ ಆಂತರಿಕವಾಗಿ ದುರ್ಬಲವಾಗಿತ್ತು ಎಂದು ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ. ತೇಜಸ್ ಒಂದು ಹೆಣ್ಣು ಚೀತಾದೊಡನೆ ಕಾದಾಟದಲ್ಲಿ ತೋಡಗಿತ್ತು. ಇದರಿಂದ ತೇಜಸ್​​ಗೆ ಗಂಭೀರ ಗಾಯಗಳಾಗಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಸೆಪ್ಟೆಂಬರ್ 17, 2022 ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದಂದು ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು, ಅದನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ ಬಿಡಲಾಗಿತ್ತು. ನಂತರ ಐದು ತಿಂಗಳ ನಂತರ,ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತಂದು ಬಿಟ್ಟಿದ್ದಾರೆ. ಒಟ್ಟು 20 ಚೀತಾಗಳನ್ನು ಇಲ್ಲಿಗೆ ತರಲಾಗಿತ್ತು.

ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ

ಮಾರ್ಚ್‌ನಲ್ಲಿ, ನಮೀಬಿಯಾದ ಸಶಾ ಎಂಬ ಚೀತಾ ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪಿತ್ತು. ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದ ಉದಯ್ ಎಂಬ ಚೀತಾ ಹೃದಯ ವೈಫಲ್ಯದಿಂದ ಸಾವನ್ನಪ್ಪಿತ್ತು, ಇದರ ನಂತರ ಕೆಲವೇ ವಾರಗಳಲ್ಲಿ ದಕ್ಷಿಣ ಆಫ್ರಿಕಾದ ದಕ್ಷ ಚೀತಾ ಗಂಡು ಚೀತಾದೊಂದಿಗೆ ಹಿಂಸಾತ್ಮಕ ಕಾದಾಟ ಮಾಡಿ ಸಾವನ್ನಪ್ಪಿದೆ. ಭಾರತದಲ್ಲಿ ಚೀತಾಗಳು ನಾಶವಾಗುತ್ತಿದೆ ಎಂದು ಮತ್ತೆ ಅದನ್ನು ಇಲ್ಲಿ ಬೆಳೆಸಬೇಕು ಎಂಬ ಪ್ರಯತ್ನ ವಿಫಲವಾಗುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Fri, 14 July 23