Cheetah Death: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ದಕ್ಷ ಎಂಬ ಹೆಸರಿನ ಹೆಣ್ಣು ಚೀತಾ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ

Cheetah Death: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು, 3 ತಿಂಗಳಲ್ಲಿ ಮೂರನೇ ಘಟನೆ
ಚೀತಾ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 09, 2023 | 5:54 PM

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Kuno National Park) ದಕ್ಷಿಣ ಆಫ್ರಿಕಾದಿಂದ ತಂದು ಇರಿಸಲಾಗಿದ್ದ ದಕ್ಷ ಎಂಬ ಹೆಸರಿನ ಹೆಣ್ಣು ಚೀತಾ ಉದ್ಯಾನವನದೊಳಗೆ ಇತರ ಚೀತಾಗಳೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದೆ. ಮೂಲಗಳ ಪ್ರಕಾರ, ವಾಯು ಮತ್ತು ಅಗ್ನಿಯನ್ನು ಒಳಗೊಂಡಿರುವ ಮತ್ತು ವೈಟ್ ವಾಕರ್ಸ್ ಎಂದೂ ಕರೆಯಲ್ಪಡುವ ಗಂಡು ಚೀತಾಗಳ ಜತೆಗೆ ಕಾದಡುವ ಸಮಯದಲ್ಲಿ ದಕ್ಷ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ ನಂತರ ಕುನೊದಲ್ಲಿ ಸಾವನ್ನಪ್ಪಿದ ಮೂರನೇ ಚಿರತೆ ಇದಾಗಿದೆ.

ಕಳೆದ ವರ್ಷದಿಂದ ಇಪ್ಪತ್ತು ಚಿರತೆಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಎರಡು ಚಿರತೆಗಳು ಸಾವನ್ನಪ್ಪಿವೆ. ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು ಜನವರಿ 23ರಂದು ಅದು ತುಂಬಾ ಆಯಾಸದಿಂದಾ ಅದಕ್ಕೆ ಚಿಕಿತ್ಸೆಗಾಗಿ ಕ್ವಾರಂಟೈನ್ ಆವರಣಕ್ಕೆ ಸ್ಥಳಾಂತರಿಸಿದರು. ಎಪ್ರಿಲ್‌ನಲ್ಲಿ ಎರಡನೇ ಚಿರತೆ ಉದಯ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡಿದ್ದು ಚಿಕಿತ್ಸೆ ವೇಳೆ ಸಾವನ್ನಪ್ಪಿತ್ತು.

ಇಂದು ಮುಂಜಾನೆ, ಕೇಂದ್ರ ಪರಿಸರ ಸಚಿವಾಲಯವು ಜೂನ್‌ನಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲು ಐದು ಚೀತಾಗಳು ಮೂರು ಹೆಣ್ಣು ಮತ್ತು ಎರಡು ಗಂಡು ಚೀತಾವನ್ನು ಕುನೋ ರಾಷ್ಟ್ರೀಯ ಉದ್ಯಾನವನದಿಂದ (ಕೆಎನ್‌ಪಿ) ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

ಇದನ್ನೂ ಓದಿ:Cheetah: ಚೀತಾಗಳ ಮೇಲೆ ಬೇಟೆಗಾರರ ಕಣ್ಣು, ಒಬ್ಬ ವ್ಯಕ್ತಿಯ ಬಂಧನ

ಚೀತಾಗಳನ್ನು ಕೆಎನ್‌ಪಿಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗುವುದು ಮತ್ತು ಇದರ ಜತೆಗೆ ಅದಕ್ಕೆ ಅಪಾಯವಾಗದ ಜಾಗಕ್ಕೆ ಬಿಡಲಾಗುವುದು. ಮತ್ತೆ ಅದನ್ನು ಯಾವುದೇ ಕಾರಣಕ್ಕೂ ವಶಪಡಿಸಿಕೊಳ್ಳಲಾಗುವುದಿಲ್ಲ.

ಇಲ್ಲಿಯವರೆಗೆ, ನಮೀಬಿಯಾದಿಂದ ತರಲಾದ ಎಂಟು ಚೀತಾಗಳಲ್ಲಿ ನಾಲ್ಕನ್ನು KNP ಯಲ್ಲಿ ಮುಕ್ತಗೊಳಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ ವಿಶೇಷ ಆವರಣಕ್ಕೆ ನಮೀಬಿಯಾದಿಂದ ಬಂದ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ