Fact check: ಟೈರ್​​ ಒಳಗಡೆ ಕಂತೆ ನೋಟು, ಇದು ಕರ್ನಾಟಕ ಚುನಾವಣಾ ಖರ್ಚಿಗಾಗಿ ಬಿಜೆಪಿ ಸಾಗಿಸುತ್ತಿರುವ ಹಣ ಎಂಬುದು ಸುಳ್ಳು ಸುದ್ದಿ

ಐಎನ್‌ಸಿ ಕರ್ನಾಟಕದ ವಕ್ತಾರೆ ಲಾವಣ್ಯ ಬಲ್ಲಾಳ್ ನೀವು ಕೊನೆಯ ಬಾರಿಗೆ ಯಾವಾಗ ರೂ. 2000 ಕರೆನ್ಸಿ ನೋಡಿದ್ದು? ಚುನಾವಣಾ ವೆಚ್ಚಕ್ಕಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯವರು ಟೈರ್‌ಗೆ ತುಂಬುತ್ತಿದ್ದರು! ಎಂತಹ ಹೊಸ ಕಲ್ಪನೆ ಎಂದು ಸಿಟಿ ರವಿ ಅವರನ್ನು ಟ್ಯಾಗ್ ಮಾಡಿದ್ದರು. ಆಮೇಲೆ ಟ್ವೀಟ್ ಡಿಲೀಟ್ ಮಾಡಿದ್ದರು.

Fact check: ಟೈರ್​​ ಒಳಗಡೆ ಕಂತೆ ನೋಟು, ಇದು ಕರ್ನಾಟಕ ಚುನಾವಣಾ ಖರ್ಚಿಗಾಗಿ ಬಿಜೆಪಿ ಸಾಗಿಸುತ್ತಿರುವ ಹಣ ಎಂಬುದು ಸುಳ್ಳು ಸುದ್ದಿ
ವೈರಲ್ ಟ್ವೀಟ್
Follow us
ರಶ್ಮಿ ಕಲ್ಲಕಟ್ಟ
|

Updated on: May 09, 2023 | 8:51 PM

ಮೇ 10 ರಂದು  ನಡೆಯಲಿರುವ ಕರ್ನಾಟಕದ ಚುನಾವಣಾ (Karnataka Election) ವೆಚ್ಚವನ್ನು ಸರಿದೂಗಿಸಲು ಬಿಜೆಪಿ (BJP) ಅಕ್ರಮವಾಗಿ ಹಣವನ್ನು ಸಾಗಿಸುತ್ತಿದೆ ಎಂಬ ಬರಹದೊಂದಿಗೆ ಟೈರ್‌ನಲ್ಲಿ ತುಂಬಿದ ಹಣದ ಬಂಡಲ್‌ಗಳನ್ನು ಹೊರತೆಗೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಟ್ವಿಟರ್​​ನಲ್ಲಿ 4 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಐಎನ್‌ಸಿ ಕರ್ನಾಟಕದ ವಕ್ತಾರೆ ಲಾವಣ್ಯ ಬಲ್ಲಾಳ್ (@LavanyaBallal) “ನೀವು ಕೊನೆಯ ಬಾರಿಗೆ ಯಾವಾಗ ರೂ. 2000 ಕರೆನ್ಸಿ ನೋಡಿದ್ದು? ಚುನಾವಣಾ ವೆಚ್ಚಕ್ಕಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿಯವರು ಟೈರ್‌ಗೆ ತುಂಬುತ್ತಿದ್ದರು! ಎಂತಹ ಹೊಸ ಕಲ್ಪನೆ ಎಂದು ಸಿಟಿ ರವಿ ಅವರನ್ನು ಟ್ಯಾಗ್ ಮಾಡಿದ್ದರು. ನಂತರ ಈ ಟ್ವೀಟ್​​ನ್ನು ಡಿಲೀಟ್ ಮಾಡಿದ್ದಾರೆ. ಅನಂತ್ ರೂಪನಗುಡಿ (@Ananth_IRAS) ಎಂಬ ಬಳಕೆದಾರರೊಬ್ಬರು ಇದೇ ವಿಡಿಯೊವನ್ನು #KarnatakaAssemblyElection2023 ಹ್ಯಾಷ್ ಟ್ಯಾಗ್ ಜತೆ ಪೋಸ್ಟ್ ಮಾಡಿದ್ದಾರೆ.

ಅಬ್ದುಲ್ಲ ಮಾದುಮೂಲೆ ಎಂಬವರು 1,000 ರೂ ನೋಟುಗಳನ್ನು ಡಿಮೋನಿಟೈಸ್ ಮಾಡಿದ 2,000 ರೂ ನೋಟುಗಳನ್ನು ಏಕೆ ಪರಿಚಯಿಸಿದರು ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ತಲಾ 15 ಲಕ್ಷಗಳ ಸುಲಭ ವಿತರಣೆಗೆ. ಇಲ್ಲಿ ಸಿ.ಟಿ.ರವಿ ಅವರು 2014ರಲ್ಲಿ ನೀಡಿದ ಭರವಸೆಯಂತೆ ತಲಾ 15 ಲಕ್ಷಗಳನ್ನು ಹಂಚುತ್ತಿದ್ದಾರೆ ಎಂದಿದ್ದಾರೆ.

ಫ್ಯಾಕ್ಟ್ ಚೆಕ್

ವೈರಲ್ ವಿಡಿಯೊ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್  ಮಾಡಿದೆ. ಅದರ ಪ್ರಕಾರ ವಿಡಿಯೊದ ಕೀ ಫ್ರೇಮ್ ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2019 ರ ಎನ್‌ಡಿಟಿವಿ ವರದಿ ಸಿಕ್ಕಿದೆ. ‘Watch: ₹ 2.3 Crore Cash Seized From Car’s Spare Tire In Karnataka ಎಂಬ ಶೀರ್ಷಿಕೆಯ ಸುದ್ದಿ ಅದು. ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಕಾರಿನ ಬಿಡಿ ಟಯರ್‌ನಿಂದ ₹ 2.3 ಕೋಟಿ ನಗದು ವಶಕ್ಕೆ ತೆಗೆದುಕೊಂಡಿರುವುದು ಎಂದು ವರದಿ ಹೇಳಿದೆ. 2019ರ ಸಾರ್ವತ್ರಿಕ ಚುನಾವಣೆ ವೇಳೆ ಕರ್ನಾಟಕದ ಶಿವಮೊಗ್ಗದಲ್ಲಿ ಪತ್ತೆಯಾದ ನಗದು ಇದು.

ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ನಗದು ಸಾಗಿಸಲಾಗುತ್ತದೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಮೇಲೆ ನಗದು ಹ್ಯಾಂಡ್ಲರ್ ಅನ್ನು ತಡೆದು ಅವರ ವಾಹನವನ್ನು ತಪಾಸಣೆ ನಡೆಸಲಾಯಿತು. ವಾಹನದ ಚಕ್ರದಲ್ಲಿ ₹ 2,000 ಮುಖಬೆಲೆಯ ನಗದು ತುಂಬಿರುವುದು ಪತ್ತೆಯಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವರದಿಯಲ್ಲಿ ಐಟಿ ಇಲಾಖೆ ಈ ಹಣ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದೆ ಎಂದು ಉಲ್ಲೇಖಿಸಿಲ್ಲ.

ಇದನ್ನೂ ಓದಿ: Fact Check: ISIS ಎಂದು ಬರೆದ ಟಿ ಶರ್ಟ್ ಧರಿಸಿ ಬೆಂಬಲ ಸೂಚಿಸಿದ ಯುವಕರು; ವೈರಲ್ ಚಿತ್ರ ಕೇರಳದ್ದಲ್ಲ

ಏಪ್ರಿಲ್ 20, 2019 ರಂದು ಎಎನ್ಐ ಮೂಲ ವಿಡಿಯೊವನ್ನು ಟ್ವೀಟ್ ಮಾಡಿದೆ.

ಹಾಗಾಗಿ ವೈರಲ್ ಆಗಿರುವ ವಿಡಿಯೊ ಹಳೆಯದು ಎಂಬುದು ಸ್ಪಷ್ಟವಾಗಿದೆ. ಇಬ್ಬರು ವ್ಯಕ್ತಿಗಳು ಟೈರ್‌ನಲ್ಲಿ ತುಂಬಿದ ಹಣದ ಬಂಡಲ್‌ಗಳನ್ನು ಹೊರತೆಗೆಯುತ್ತಿರುವುದನ್ನು ತೋರಿಸುವ ವಿಡಿಯೊ2019 ರದ್ದು. ಇದನ್ನು ಬಿಜೆಪಿ ಮತ್ತು 2023 ರ ಕರ್ನಾಟಕ ರಾಜ್ಯ ಚುನಾವಣೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ