AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ISIS ಎಂದು ಬರೆದ ಟಿ ಶರ್ಟ್ ಧರಿಸಿ ಬೆಂಬಲ ಸೂಚಿಸಿದ ಯುವಕರು; ವೈರಲ್ ಚಿತ್ರ ಕೇರಳದ್ದಲ್ಲ

ಈ ಫೋಟೊ ಕೇರಳದ್ದು ಅಲ್ಲ ತಮಿಳುನಾಡಿನ ರಾಮನಾಥಪುರದ್ದು. ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಹಳೆಯ ವರದಿಗಳು ಪತ್ತೆಯಾಗಿವೆ.

Fact Check: ISIS ಎಂದು ಬರೆದ ಟಿ ಶರ್ಟ್ ಧರಿಸಿ ಬೆಂಬಲ ಸೂಚಿಸಿದ ಯುವಕರು; ವೈರಲ್ ಚಿತ್ರ ಕೇರಳದ್ದಲ್ಲ
ವೈರಲ್ ಆಗಿರುವ ಸ್ಕ್ರೀನ್ ಶಾಟ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: May 08, 2023 | 8:58 PM

Share

ಮುಖ್ಯಾಂಶಗಳು

  • ಈ ಚಿತ್ರವು ತಮಿಳುನಾಡಿನ ರಾಮನಾಥಪುರಂನ ತೊಂಡಿ ಪಟ್ಟಣದ್ದು, ಇದನ್ನು 2014ರ ಈದ್ ದಿನದಂದು ಕ್ಲಿಕ್ ಮಾಡಲಾಗಿದೆ
  • 6 ಆಗಸ್ಟ್ 2014 ರ ಹಿಂದೂ ವರದಿಯ ಪ್ರಕಾರ, ಫೋಟೋದಲ್ಲಿರುವ ಯಾವುದೇ ಯುವಕರು ಐಸಿಸ್ ಜತೆ ಸಂಪರ್ಕ ಹೊಂದಿಲ್ಲ
  • ಈ ವಿವಾದಕ್ಕೆ ಸಂಬಂಧಿಸಿದಂತೆಟಿ ಶರ್ಟ್‌ಗಳನ್ನು ಖರೀದಿಸಿದ ತಿರುಪುರ್ ಮೂಲದ ಇಮಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ

ಮುಸ್ಲಿಂ ಪುರುಷರ ಗುಂಪೊಂದು ಐಸಿಸ್  ಎಂದು ಬರೆದ ಟೀ-ಶರ್ಟ್‌ಗಳನ್ನು ಧರಿಸಿರುವ ಚಿತ್ರವನ್ನು ಶೆಫಾಲಿ ವೈದ್ಯ (Shefali Vaidya) ಟ್ವೀಟ್ ಮಾಡಿದ್ದರು. ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿವಾದಾತ್ಮಕ ಚಿತ್ರವಾದ ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದ ನಂತರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಗೆ ತಮ್ಮ ಬೆಂಬಲವನ್ನು ತೋರಿಸುತ್ತಿರುವ ಈ ಜನರು ಕೇರಳದವರು ಎಂದು ಶೆಫಾಲಿ ಟ್ವೀಟ್ ನಲ್ಲಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಬಗ್ಗೆ ಅಪ್ ಡೇಟ್ ಮಾಡಿದ ವೈದ್ಯ ಈ ಚಿತ್ರ ಕೇರಳದದ್ದಲ್ಲ ಎಂದು ಹೇಳಿದ್ದಾರೆ.

ಫ್ಯಾಕ್ಟ್ ಚೆಕ್

ಈ ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್ ಡಾಟ್ ಕಾಮ್ ಇದು 2014ರಲ್ಲಿ ಚಿತ್ರ. ಈ ಫೋಟೊ ಕೇರಳದ್ದು ಅಲ್ಲ ತಮಿಳುನಾಡಿನ ರಾಮನಾಥಪುರದ್ದು ಎಂದು ಹೇಳಿದೆ. ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಹಳೆಯ ವರದಿಗಳು ಪತ್ತೆಯಾಗಿವೆ.

ದಿ ಹಿಂದೂ, ದಿ ಸ್ಕ್ರಾಲ್ ಮತ್ತು ಎನ್‌ಡಿಟಿವಿಯಂತಹ ಹಲವಾರು ಸುದ್ದಿ ಮಾಧ್ಯಮಗಳು ವೈರಲ್ ಫೋಟೊ ಬಗ್ಗೆ ಸುದ್ದಿ ಮಾಡಿದೆ. 26 ಮುಸ್ಲಿಂ ಯುವಕರ ಗುಂಪು “ಐಸಿಸ್” ಎಂದು ಬರೆಯಲಾದ ಕಪ್ಪು ಟೀ ಶರ್ಟ್‌ಗಳಲ್ಲಿ ಪೋಸ್ ನೀಡಿದ್ದರಿಂದ ಉಂಟಾದ ಈ ವಿವಾದದ ಬಗ್ಗೆ ಈ ಮಾಧ್ಯಮಗಳು ವರದಿ ಮಾಡಿದೆ.

ಈ ಚಿತ್ರವು ತಮಿಳುನಾಡಿನ ರಾಮನಾಥಪುರಂನ ತೊಂಡಿ ಪಟ್ಟಣದ್ದು, ಇದನ್ನು 2014ರ ಈದ್ ದಿನದಂದು ಕ್ಲಿಕ್ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

6 ಆಗಸ್ಟ್ 2014 ರ ಹಿಂದೂ ವರದಿಯ ಪ್ರಕಾರ, ಫೋಟೋದಲ್ಲಿರುವ ಯಾವುದೇ ಯುವಕರು ಐಸಿಸ್ ಜತೆ ಸಂಪರ್ಕ ಹೊಂದಿಲ್ಲ. ಈ ವಿವಾದಕ್ಕೆ ಸಂಬಂಧಿಸಿದಂತೆಟಿ ಶರ್ಟ್‌ಗಳನ್ನು ಖರೀದಿಸಿದ ತಿರುಪುರ್ ಮೂಲದ ಇಮಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: Fact Check: ಮಣಿಪುರದಲ್ಲಿ ಬುಡಕಟ್ಟು ಜನರು ಅಂಗಡಿ ಲೂಟಿ ಮಾಡುತ್ತಿರುವುದು ಎಂಬ ವೈರಲ್ ವಿಡಿಯೊ ಫಿಲಿಪೈನ್ಸ್​​​ನದ್ದು

ಇರಾಕ್‌ನಲ್ಲಿ ಸೆರೆಯಲ್ಲಿದ್ದ ಭಾರತೀಯ ನರ್ಸ್ ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಐಸಿಸ್‌ಗೆ ಧನ್ಯವಾದ ಅರ್ಪಿಸಲು ಈ ರೀತಿ ಫೋಟೊ ತೆಗೆಯಲಾಗಿದೆ ಎಂದು ಫೋಟೊದಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.

ಇದೇ ಚಿತ್ರವು 2019 ರ ಲೋಕಸಭಾ ಚುನಾವಣೆಯ ನಂತರ ಕೇರಳದ ವಯನಾಡಿನಲ್ಲಿ ತೆಗೆದದ್ದು ಎಂಬ ಹೇಳಿಕೆಯೊಂದಿಗೆ 2019 ರಲ್ಲಿ ವೈರಲ್ ಆಗಿತ್ತು.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್