ಬ್ರಹ್ಮಾಂಡದಲ್ಲಿ ಭೂಮಿಯಂತಹ ಗ್ರಹಗಳಿಗೆ ಹುಡುಕಾಟ ಮುಂದುವರಿದಿದೆ. ಭೂಮಿಯನ್ನೇ ಹೋಲುವ ಸಾವಿರಾರು ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ಗ್ರಹವೊಂದನ್ನ ಪತ್ತೆ ಮಾಡಲಾಗಿದೆ. ಈ ಗ್ರಹದಲ್ಲಿ ಅಂತರ್ಜಲ ಇರುವ ಬಗ್ಗೆ ಸುಳಿವು ಸಿಕ್ಕಿದ್ದು, ಬಾಹ್ಯಾಕಾಶ ವಿಜ್ಞಾನಿಗಳು ಹೆಚ್ಚಿನ ಅಧ್ಯಯನಕ್ಕೆ ಮುಂದಾಗಿದ್ದಾರೆ.
‘ಟೈಟಾನ್’ ಮ್ಯಾಪ್ ರೆಡಿ
ಸೌರ ಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿದರೆ ಹೈಡ್ರೋಕಾರ್ಬನ್ಗಳು ಇರೋದು ಶನಿಗ್ರಹದ ಉಪಗ್ರಹ ಟೈಟಾನ್ನಲ್ಲಿ ಮಾತ್ರ. ಇಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದ್ದು, ಟೈಟಾನ್ ಮೇಲೆ ವಿಶೇಷ ಕಾಳಜಿ ತೋರಲಾಗುತ್ತಿದೆ. ಇದೀಗ ಟೈಟಾನ್ನ ಸಂಪೂರ್ಣ ಮ್ಯಾಪ್ ಅನ್ನ ಬಾಹ್ಯಾಕಾಶ ವಿಜ್ಞಾನಿಗಳು ರಚಿಸಿದ್ದು, ಅಧ್ಯಯನಕ್ಕೆ ಪೂರಕವಾಗಿದೆ.
ಇಂದು ಶಿವಸೇನೆ ಜತೆ ಮಾತುಕತೆ:
ಮಹರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ಮಾತುಕತೆ ಅಂತಿಮಗೊಂಡಿದ್ದು, ಇಂದು ಮುಂಬೈನಲ್ಲಿ ಶಿವಾಸೇನಾ ಜತೆ ಮಾತುಕತೆ ನಡೆಸಿ ಮೈತ್ರಿ ಅಂತಿಮಗೊಳಿಸಲಾಗುವುದು ಎಂದು ಕಾಂಗ್ರೆಸ್ – ಎನ್ ಸಿಪಿ ತಿಳಿಸಿವೆ.
‘2021ರಲ್ಲಿ ಮಹಾ ಅದ್ಭುತ’
2021ರ ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡು ರಾಜಕಾರಣದಲ್ಲಿ ಮಹಾ ಅದ್ಭುತ ನಡೆಯಲಿದೆ ಅಂತಾ ಸೂಪರ್ ಸ್ಟಾರ್ ರಜಿನಿಕಾಂತ್ ಹೇಳಿದ್ದಾರೆ. ಚೆನ್ನೈನಲ್ಲಿ ಮಾತನಾಡಿದ ಅವರು, 2021ರ ಚುನಾವಣೆಯಲ್ಲಿ ಶೇ.100ರಷ್ಟು ತಮಿಳು ಜನತೆ ರಾಜಕೀಯದಲ್ಲಿ ದೊಡ್ಡ ಅದ್ಭುತ ಸೃಷ್ಟಿಸಲಿದ್ದಾರೆ ಅಂದ್ರು.
ಟಿಲಿಕಾಂ ವಲಯಕ್ಕೆ ಕೇಂದ್ರ ರಿಲೀಫ್:
ತೀವ್ರ ಆರ್ಥಿಕ ಸಂಕಷ್ಟ ಎದುರಿಸುತಿರುವ ಟೆಲಿಕಾಂ ವಲಯಕ್ಕೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿದೆ. ದೂರಸಂಪರ್ಕ ಸೇವಾ ಸಂಸ್ಥೆಗಳಾದ ಏರ್ ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್ ಐಡಿಯಾ ಸೇರಿ ಅನೇಕ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ತರಂಗಗುಚ್ಚ ಬಾಕಿ ಮೊತ್ತ ಪಾವತಿಗೆ 2 ವರ್ಷಗಳ ಕಾಲಾವಕಾಶ ನೀಡಿದೆ.
ಕಾರ್ಗೆ ಡಿಕ್ಕಿಯಾದ ಟ್ರೈನ್..!
ಅಮೆರಿಕದ ನ್ಯೂ ಜೆರ್ಸಿಯಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಟ್ರ್ಯಾಕ್ನಲ್ಲಿದ್ದ ಕಾರ್ಗೆ ಟ್ರೈನ್ ಡಿಕ್ಕಿಯಾಗಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಕಾರ್ನಲ್ಲಿದ್ದ ಡ್ರೈವರ್ಗೆ ಯಾವುದೇ ತೊಂದರೆ ಸಂಭವಿಸಿಲ್ಲ ಅಂತಾ ಪೊಲೀಸರು ತಿಳಿಸಿದ್ದು, ಕಾರು ಹೇಗೆ ಟ್ರ್ಯಾಕ್ ಮೇಲೆ ನಿಂತಿತ್ತು ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದೆ.
ಹಿಮಪಾತಕ್ಕೆ ತತ್ತರಿಸಿದ ‘ದೊಡ್ಡಣ್ಣ’
ಭೀಕರ ಶಿತಗಾಳಿಗೆ ಅಮೆರಿಕ ತತ್ತರಿಸಿದೆ. ಕ್ಯಾಲಿಫೋರ್ನಿಯಾದಲ್ಲಿ ಶಿತಗಾಳಿಯಿಂದ ಭಾರಿ ಪ್ರಮಾಣದಲ್ಲಿ ಹಿಮಪಾತ ಆಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮತ್ತೊಂದು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ ಹಾವಳಿಗೆ ರಸ್ತೆಗಳು ಮುಳುಗಿ ಹೋಗಿವೆ.