ಚುನಾವಣೆಗೆ 8 ದಿನ ಇರುವಾಗಲೇ ನಕ್ಸಲ್ ದಾಳಿ, ನಾಲ್ವರು ಪೊಲೀಸರು ಹುತಾತ್ಮ
ನಕ್ಸಲ್ ಪೀಡಿತ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ದಾಳಿ ನಡೆಸಿದ್ದಾರೆ. ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದು, ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ರಾಂಚಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ. ಉದ್ಧವ್ ಠಾಕ್ರೆಯೇ ‘ಮಹಾ’ ಸಿಎಂ..! ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಎನ್ಸಿಪಿ ಹಾಗೂ ಕಾಂಗ್ರೆಸ್ ಗ್ರೀನ್ ಸಿಗ್ನಲ್ ಕೊಟ್ಟಿವೆ. ಜೊತೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯೇ 5 ವರ್ಷ ಅವಧಿಗೆ ಸಿಎಂ ಆಗಲು […]
ನಕ್ಸಲ್ ಪೀಡಿತ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೇವಲ 8 ದಿನಗಳು ಬಾಕಿ ಇರುವಾಗಲೇ ನಕ್ಸಲೀಯರು ದಾಳಿ ನಡೆಸಿದ್ದಾರೆ. ಪೊಲೀಸ್ ಗಸ್ತು ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದು, ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ರಾಂಚಿ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಗುಂಡಿನ ದಾಳಿ ನಡೆಸಿದ್ದಾರೆ.
ಉದ್ಧವ್ ಠಾಕ್ರೆಯೇ ‘ಮಹಾ’ ಸಿಎಂ..! ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳಲು ಎನ್ಸಿಪಿ ಹಾಗೂ ಕಾಂಗ್ರೆಸ್ ಗ್ರೀನ್ ಸಿಗ್ನಲ್ ಕೊಟ್ಟಿವೆ. ಜೊತೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯೇ 5 ವರ್ಷ ಅವಧಿಗೆ ಸಿಎಂ ಆಗಲು ಒಪ್ಪಿಕೊಂಡಿವೆ. ಇಂದು ಕೊನೇ ಹಂತದ ಮಾತುಕತೆ ನಡೆಯಲಿದ್ದು ಅಧಿಕೃತ ಘೋಷಣೆ ಹೊರಬೀಳಲಿದೆ.
ಜೆಸಿಬಿ ಹಿಡಿದು ಪ್ರತಿಯೋಧ: ರಾಜಸ್ಥಾನದ ಜಲೋರ್ನನಲ್ಲಿ ಅಕ್ರಮ ಕಟ್ಟಡವನ್ನ ತೆರವು ಮಾಡಲು ಬಂದಾಗ ಮಹಿಳೆಯೊಬ್ಬಳು ತನ್ನ ಪ್ರಾಣದ ಹಂಗು ತೊರೆದು ಪ್ರತಿರೋಧ ಒಡ್ಡಿದ್ದಾಳೆ. ರೇಖಾ ದೇವಿ ಎಂಬ ಮಹಿಳೆ ಕಟ್ಟಡ ತೆರವು ಮಾಡಲು ಬಂದ ಜೆಸಿಬಿ ಬಕೆಟ್‌ಗೆ ಹಿಡಿದು ಹತ್ತಲು ಯತ್ನಿಸಿ, ಕಟ್ಟಡ ತೆರವು ಮಾಡದಂತೆ ಆಗ್ರಹಿಸಿದ್ದಾರೆ.
ಆಸ್ಪತ್ರೆಯಲ್ಲಿ ‘ಹೊಗೆ’ ಬಿಟ್ಟ ಎಸ್‌ಪಿ ಶಾಸಕ: ಎಸ್‌ಪಿ ಶಾಸಕ ಹಾಜಿ ಇಕ್ರಂ ಖುರೇಷಿ ಜಿಲ್ಲಾಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಜನ್ಮದಿನದ ಅಂಗವಾಗಿ ಜಿಲ್ಲಾಸ್ಪತ್ರೆಗೆ ಹಣ್ಣು ವಿತರಿಸಲು ಹೋದಾಗ ಆಸ್ಪತ್ರೆ ಆವರಣದಲ್ಲಿ ನಿಂತು ಸಿಗರೇಟು ಸೇದಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಐಬಿಟಿಪಿ ಕಚೇರಿಗೆ ಮುಂದಿನ ವಾರ ಶಾ ಭೇಟಿ: ಇಂಡೋ-ಟಿಬೆಟ್ ಗಡಿ ಪೊಲೀಸ್ ಕಚೇರಿಗೆ ಗೃಹ ಸಚಿವ ಅಮಿತ್ ಶಾ ಮುಂದಿನ ವಾರ ಭೇಟಿ ನೀಡಲಿದ್ದಾರೆ. ನ. 26 ರಂದು ಲೋಧಿ ರಸ್ತೆಯಲ್ಲಿರುವ ಐಬಿಟಿಪಿ ಗೃಹ ಕಚೇರಿಗೆ ಶಾ ಭೇಟಿ ನೀಡಿ, ಎಲ್‌ಎಸಿಯಲ್ಲಿನ ಕಾರ್ಯಾಚರಣೆ ಸಿದ್ಧತೆಯನ್ನ ಪರಿಶೀಲನೆ ನಡೆಸಲಿದ್ದಾರೆ.