Monkeypox ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ

| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2022 | 1:03 PM

ಕೇರಳದಲ್ಲಿ ಪತ್ತೆಯಾಗಿರುವ ಐದನೇ ಪ್ರಕರಣ ಇದಾಗಿದ್ದು, 30ರ ಹರೆಯದ ರೋಗಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವ್ಯಕ್ತಿ ಯುಎಇಯಿಂದ ಜುಲೈ 27ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು

Monkeypox ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಕೇರಳದಲ್ಲಿ (Kerala) ಮತ್ತೊಂದು ಮಂಕಿಪಾಕ್ಸ್ (Monkeypox) ಪ್ರಕರಣ ಪತ್ತೆಯಾಗಿದೆ.ರಾಜ್ಯದಲ್ಲಿ ಪತ್ತೆಯಾಗಿರುವ ಐದನೇ ಪ್ರಕರಣ ಇದಾಗಿದ್ದು, 30ರ ಹರೆಯದ ರೋಗಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವ್ಯಕ್ತಿ ಯುಎಇಯಿಂದ ಜುಲೈ 27ರಂದು ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎಂದು ಕೇರದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಹೇಳಿದ್ದಾರೆ.ಈ ರೋಗಿಯ ಸಂಪರ್ಕದಲ್ಲಿದ್ದ ಅಪ್ಪ, ಅಮ್ಮ ಇಬ್ಬರು ಸ್ನೇಹಿತರ ಮೇಲೆ ಆರೋಗ್ಯ ಇಲಾಖೆ ನಿಗಾಇರಿಸಿದೆ. ಕೇರಳದಲ್ಲಿ ಈವರೆಗೆ ಐದು ಪ್ರಕರಣಗಳು ಪತ್ತೆಯಾಗಿದ್ದು, ಮೊದಲು ಆಸ್ಪತ್ರೆಗೆ ದಾಖಲಾಗಿದ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದ. ಇನ್ನುಳಿದ ರೋಗಿಗಳ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಇದೀಗ ಭಾರತದಲ್ಲಿ ಪತ್ತೆಯಾಗಿರುವ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ 7ಕ್ಕೇರಿದೆ.ಯುಎಇಯಿಂದ ಕೇರಳಕ್ಕೆ ಬಂದಿದ್ದ 22ರ ಹರೆಯದ ವ್ಯಕ್ತಿಯೊಬ್ಬರು ಮಂಕಿಪಾಕ್ಸ್ ನಿಂದ ಶನಿವಾರ ಮೃಮ ಮೃತಪಟ್ಟಿದ್ದರು. ವಿದೇಶದಲ್ಲಿಯೇ ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅವರು ಮೃತಪಟ್ಟನಂತರ ರೋಗಪತ್ತೆ ಪರೀಕ್ಷೆ ನಡೆಸಿದಾಗ ಮಂಕಿಪಾಕ್ಸ್ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು ಎಂದು ವೀಣಾ ಜಾರ್ಜ್ ಸೋಮವಾರ ಹೇಳಿದ್ದಾರೆ.

Published On - 12:44 pm, Tue, 2 August 22