ಅತಿಕ್ರಮಣ ವಿರುದ್ಧ ಬುಲ್ಡೋಜರ್ ಕ್ರಮ; ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಅಫ್ಘಾನಿಸ್ತಾನವಾಗಿ ಪರಿವರ್ತಿಸುತ್ತಿದೆ: ಮುಫ್ತಿ

|

Updated on: Feb 07, 2023 | 8:04 PM

ಕೇಂದ್ರ ಸರ್ಕಾರವು ಜನರನ್ನು ನಿರಾಶ್ರಿತರನ್ನಾಗಿ ಮಾಡಿ ಅವರ ಜೀವನೋಪಾಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಅತಿಕ್ರಮಣಗಳನ್ನು ತೆಗೆದುಹಾಕಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಭೂಮಿಯನ್ನು ಹಿಂಪಡೆಯುವುದರ ಜೊತೆಗೆ, ಅನೇಕ ಕಟ್ಟಡಗಳನ್ನು ಕೆಡವಲಾಗಿದೆ.

ಅತಿಕ್ರಮಣ ವಿರುದ್ಧ ಬುಲ್ಡೋಜರ್ ಕ್ರಮ; ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು ಅಫ್ಘಾನಿಸ್ತಾನವಾಗಿ ಪರಿವರ್ತಿಸುತ್ತಿದೆ: ಮುಫ್ತಿ
ಜಮ್ಮು ಕಾಶ್ಮೀರದಲ್ಲಿ ಪ್ರತಿಭಟನೆ
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir)  ಆಡಳಿತ ನಡೆಸುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಬಡವರು ಮತ್ತು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಪ್ರದೇಶದಾದ್ಯಂತ ಬುಲ್ಡೋಜರ್ (Bulldozer)ಬಳಸಿ ತೆರವುಗೊಳಿಸುವ ಕ್ರಮಕ್ಕೆ ಹಲವಾರು ಸ್ಥಳಗಳಲ್ಲಿ ಪ್ರತಿಭಟನೆ ಮಾಡಲಾಗಿದೆ. ಇಲ್ಲಿನ ಆಡಳಿತವು ತಲೆಮಾರುಗಳಿಂದ ಸಾಗುವಳಿ ಮಾಡಲ್ಪಟ್ಟ ಮತ್ತು ಜನರು ವಾಸಿಸುತ್ತಿದ್ದ ಭೂಮಿಯನ್ನು ಅಕ್ರಮ ಅತಿಕ್ರಮಣ ಎಂದು ಘೋಷಿಸಿದ್ದರ ವಿರುದ್ಧ ಜನರು ಪ್ರತಿಭಟಿಸುತ್ತಿದ್ದಾರೆ. ಜಮ್ಮುವಿನಲ್ಲಿ, ಕಳೆದ ವಾರ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು.

ಕೇಂದ್ರ ಸರ್ಕಾರವು ಜನರನ್ನು ನಿರಾಶ್ರಿತರನ್ನಾಗಿ ಮಾಡಿ ಅವರ ಜೀವನೋಪಾಯವನ್ನು ಕಿತ್ತುಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಅತಿಕ್ರಮಣಗಳನ್ನು ತೆಗೆದುಹಾಕಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ. ಭೂಮಿಯನ್ನು ಹಿಂಪಡೆಯುವುದರ ಜೊತೆಗೆ, ಅನೇಕ ಕಟ್ಟಡಗಳನ್ನು ಕೆಡವಲಾಗಿದೆ.

ಧ್ವಂಸ ಕಾರ್ಯಾಚರಣೆಯು ಕಾಶ್ಮೀರದ ಪರಿಸ್ಥಿತಿಯನ್ನು “ಪ್ಯಾಲೆಸ್ತೀನ್‌ಗಿಂತ ಕೆಟ್ಟದಾಗಿ” ಪರಿವರ್ತಿಸುತ್ತಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರವನ್ನು ಅಫ್ಘಾನಿಸ್ತಾನವಾಗಿ ಪರಿವರ್ತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

“ಈ ಹಿಂದೆ, ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ಏನು ಮಾಡುತ್ತಿದೆ ಎಂಬುದರ ಬಗ್ಗೆ ಬಿಜೆಪಿ ಸೂಚನೆಯನ್ನು ತೆಗೆದುಕೊಂಡಿದೆ ಎಂದು ನಾವು ಭಾವಿಸುತ್ತಿದ್ದೆವು. ಆದರೆ ಈಗ ಅವರು ಅದನ್ನು ಪ್ಯಾಲೆಸ್ತೀನ್‌ಗಿಂತ ಕೆಟ್ಟದಾಗಿ ಮಾಡಿದ್ದಾರೆ. ಅವರು ಜಮ್ಮು ಮತ್ತು ಕಾಶ್ಮೀರವನ್ನು ಅಫ್ಘಾನಿಸ್ತಾನದಂತೆ ಮಾಡಲು ಬಯಸುತ್ತಾರೆ” ಎಂದು ಮುಫ್ತಿ ಹೇಳಿದ್ದಾರೆ.

ಇದನ್ನೂ ಓದಿ:ಅದಾನಿ ವ್ಯಾಪಾರ ಸಾಮ್ರಾಜ್ಯಕ್ಕೆ ಮೋದಿ ಸಹಾಯ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ

1950 ರಲ್ಲಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭೂರಹಿತ ರೈತರಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಿದ್ದ ಶೇಖ್ ಅಬ್ದುಲ್ಲಾ ಅವರ ಆಮೂಲಾಗ್ರ ‘ಭೂಮಿಗೆ ಉಳುವವ’ ಸುಧಾರಣೆಯನ್ನು ಕೇಂದ್ರವು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ ಮತ್ತು ಜನರು ಒತ್ತುವರಿ ಮಾಡಿಕೊಂಡಿರುವ ಭೂಮಿಯಿಂದ ಹೊರಹಾಕಲು ಕೇಂದ್ರಾಡಳಿತ ಪ್ರದೇಶದ ಆಡಳಿತದ ಮೊದಲ ಪ್ರತಿಕ್ರಿಯೆಯಾಗಿ ಬುಲ್ಡೋಜರ್ ಮಾರ್ಪಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಜನವರಿಯಲ್ಲಿ ಪ್ರಾರಂಭವಾದ ಈ ಅಭಿಯಾನವು ರಾಜಕಾರಣಿಗಳು ಮತ್ತು ರಾಜ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರು ಅತಿಕ್ರಮಿಸಿಕೊಂಡಿರುವ ರಾಜ್ಯದ ಭೂಮಿಯನ್ನು ಹಿಂಪಡೆಯಲು ಉದ್ದೇಶಿಸಲಾಗಿತ್ತು. ಆದೇಶದ ಬಗ್ಗೆ ಆಕ್ರೋಶ ವ್ಯಕ್ತವಾದಾಗ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಅವರ ಆಡಳಿತದ ಅಧಿಕಾರಿಗಳು “ಉನ್ನತ ಮತ್ತು ಪ್ರಬಲ” ಅತಿಕ್ರಮಣಗಳನ್ನು ಮಾತ್ರ ಡ್ರೈವ್‌ನಲ್ಲಿ ಗುರಿಯಾಗಿಸುತ್ತಾರೆ ಎಂದು ಹೇಳಿದರು. ಆದರೆ ಯಾವುದೇ ಔಪಚಾರಿಕ ಆದೇಶ ಅಥವಾ ಮೂಲ ಆದೇಶದ ತಿದ್ದುಪಡಿಯ ಅನುಪಸ್ಥಿತಿಯಲ್ಲಿ, ಕೇಂದ್ರಾಡಳಿತ ಪ್ರದೇಶದಾದ್ಯಂತ ಸಾಮೂಹಿಕ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಕಳೆದ ತಿಂಗಳು ಕಂದಾಯ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಸರ್ಕಾರಿ ಭೂಮಿ, ಗುತ್ತಿಗೆ ಭೂಮಿ, ಸಾಮಾನ್ಯ ಬಳಕೆಯ ಭೂಮಿ ಮತ್ತು ಜನರು ಒತ್ತುವರಿ ಮಾಡಿಕೊಂಡಿರುವ ಗೋಮಾಳ ಭೂಮಿಯನ್ನು ಹಿಂಪಡೆಯಲು ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಬುಲ್ಡೋಜರ್‌ಗಳನ್ನು ಕೋಮುವಾದದ ಆಧಾರದ ಮೇಲೆ ಬಳಸಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಬುಲ್ಡೋಜರ್ ಕ್ರಮಗಳ ಮೂಲಕ ಕೇಂದ್ರ ಸರ್ಕಾರವು ನಿರಾಶ್ರಿತರನ್ನು ಸೃಷ್ಟಿಸುತ್ತಿದೆ. ಈ ಕ್ರಮಕ್ಕೆ ಗುರಿಯಾದ 90% ಕ್ಕಿಂತ ಹೆಚ್ಚು ಜನರು ಮುಸ್ಲಿಮರು. ಈ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಪೀಪಲ್ಸ್ ಕಾನ್ಫರೆನ್ಸ್‌ನ ಅಧ್ಯಕ್ಷ ಸಜಾದ್ ಲೋನ್ ಮನವಿ ಮಾಡಿದ್ದಾರೆ.

“ನಾನು ನನ್ನ ಪ್ರಧಾನಿಗೆ ಮನವಿ ಮಾಡುತ್ತೇನೆ, ನೀವು ಎಲ್ಲರ ಪ್ರಧಾನಿ ಎಂದು ನಾನು ತಪ್ಪು ಕಲ್ಪನೆ ಹೊಂದಿದ್ದೇನೆ, ದಯವಿಟ್ಟು ನನ್ನ ಪ್ರಧಾನಿ ಯಾರು ಎಂದು ನನಗೆ ತಿಳಿಸಿ. ನೀವು ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿರುವ ಬಡ ಜನರ ಪ್ರಧಾನಿ ಯಾರು” ಎಂದು ಅವರು ಕೇಳಿದ್ದಾರೆ.

“ಈ ಡ್ರೈವ್‌ನಲ್ಲಿ ಶೇ 90-95ಅತಿಕ್ರಮಣದಾರರು ಮುಸ್ಲಿಮರು. ಅವರು (ಆಡಳಿತ) ಪ್ರತಿಯೊಬ್ಬರ ವಿರುದ್ಧವಾಗಿ ವರ್ತಿಸುತ್ತಾರೆ ಎಂದು ತೋರಿಸಲು, ಇತರ ಸಮುದಾಯಗಳ ಕೆಲವು ಜನರನ್ನು ಗುರಿಯಾಗಿಸಲಾಗುತ್ತಿದೆ. ಆದರೆ ಉಳಿದವರು ಮುಸ್ಲಿಮರು ಎಂದಿದ್ದಾರೆ ಲೋನ್.

2007 ರಲ್ಲಿ, ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯು ಅಂಗೀಕರಿಸಿದ 2001 ರ ರೋಶ್ನಿ ಕಾಯಿದೆಯ ಅಡಿಯಲ್ಲಿ, ರಾಜ್ಯ ಸರ್ಕಾರವು ಸರ್ಕಾರಿ ಭೂಮಿಯನ್ನು ಹೊಂದಿರುವವರಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಿತು. ಕೃಷಿ ಭೂಮಿಯನ್ನು ಉಳುಮೆ ಮಾಡುತ್ತಿದ್ದವರಿಗೆ ಉಚಿತವಾಗಿ ನೀಡಿದರೆ, ಕೃಷಿಯೇತರ ಭೂಮಿಯನ್ನು ನಾಮಮಾತ್ರ ಶುಲ್ಕಕ್ಕೆ ಬಿಟ್ಟುಕೊಡಲಾಗಿದೆ. 2018 ರಲ್ಲಿ ಕೇಂದ್ರ ಆಡಳಿತವನ್ನು ಹೇರಿದ ನಂತರ ಅದನ್ನು ರಾಜ್ಯಪಾಲರು ರದ್ದುಗೊಳಿಸಿದರು. ಅಂತಿಮವಾಗಿ, 2020 ರಲ್ಲಿ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರೋಶ್ನಿ ಯೋಜನೆಯನ್ನು ಕಾನೂನುಬಾಹಿರ ಎಂದು ಘೋಷಿಸಿತು.