Bihar News: ಪತಿಯ ಸಾವಿನಿಂದ ಖಿನ್ನತೆ, ಮಗನ ಜೊತೆ ನೇಣಿಗೆ ಶರಣಾದ ತಾಯಿ

| Updated By: ಆಯೇಷಾ ಬಾನು

Updated on: Feb 08, 2023 | 7:27 AM

ಈ ತಿಂಗಳ ಜನವರಿ 22 ರಂದು ಅವರು ಹೃದಯಾಘಾತದಿಂದ ನಿಧನರಾದರು. ಹೀಗಾಗಿ ಪತಿ ಸಾವು ಮಹಿಳೆಗೆ ಕಾಡಿದ್ದು ಖಿನ್ನತೆಗೆ ಒಳಗಾಗಿ ಮನನೊಂದು ತನ್ನ 9 ವರ್ಷದ ಮಗನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Bihar News: ಪತಿಯ ಸಾವಿನಿಂದ ಖಿನ್ನತೆ, ಮಗನ ಜೊತೆ ನೇಣಿಗೆ ಶರಣಾದ ತಾಯಿ
ಸಾಂದರ್ಭಿಕ ಚಿತ್ರ
Follow us on

ಗಯಾ: ಬಿಹಾರದ ಗಯಾದಲ್ಲಿ ಮಂಗಳವಾರ(ಫೆ.07) ಮಗನೊಂದಿಗೆ ತಾಯಿ ಆತ್ಮಹತ್ಯೆ(Mother Son Suicide) ಮಾಡಿಕೊಂಡ ಘಟನೆ ನಡೆದಿದೆ. ತಾಯಿ ವಿನಿತಾ ಸಿಂಗ್​(35), ಪುತ್ರ ರುದ್ರ ಪ್ರತಾಪ್(9)​ ಮೃತ ದೇಹಗಳು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪತಿ ಸಾವಿಗೆ ಮನನೊಂದು ಆತ್ಮಹತ್ಯೆ ನಿರ್ಧಾರ

ಇನ್ನು ಈ ಘಟನೆಗೆ ಖಿನ್ನತೆ ಕಾರಣ ಎನ್ನಲಾಗಿದೆ. ಮಹಿಳೆ ವಿನಿತಾಳ ಪತಿ ರಾಹುಲ್ ಸಿಂಗ್ ಹರ್ಷವರ್ಧನ್ ಉತ್ತರ ಪ್ರದೇಶದಲ್ಲಿ ವೈದ್ಯರಾಗಿದ್ದರು. ಈ ತಿಂಗಳ ಜನವರಿ 22 ರಂದು ಅವರು ಹೃದಯಾಘಾತದಿಂದ ನಿಧನರಾದರು. ಹೀಗಾಗಿ ಪತಿ ಸಾವು ಮಹಿಳೆಗೆ ಕಾಡಿದ್ದು ಖಿನ್ನತೆಗೆ ಒಳಗಾಗಿ ಮನನೊಂದು ತನ್ನ 9 ವರ್ಷದ ಮಗನೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Heart Attack: ತೆಂಗಿನಕಾಯಿ ಕೀಳಲು ಮರ ಏರಿದ್ದ ವ್ಯಕ್ತಿಗೆ ಮರದಲ್ಲೇ ಹೃದಯಾಘಾತ, ಸಾವು

ಎಫ್‌ಎಸ್‌ಎಲ್ ತಂಡ ತನಿಖೆಗೆ ಮುಂದಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಸದ್ಯ ಘಟನೆ ಬಗ್ಗೆ ಮಹಿಳೆಯ ಮಾವ ರಾಮ್‌ಜಿ ಸಿಂಗ್ ಮಾತನಾಡಿದ್ದು, ಮೊದಲು ಮಗ ಸತ್ತ ಮತ್ತೆ ಈಗ ಇಡೀ ಕುಟುಂಬವು ನಾಶವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಶ್ರದ್ಧಾಳ ಮೃತದೇಹವನ್ನು ಕತ್ತರಿಸಿ ಮೂಳೆಯನ್ನು ಗ್ರೈಂಡರ್​​ನಲ್ಲಿ ಪುಡಿ ಮಾಡಿ ವಿಲೇವಾರಿ ಮಾಡಿದ್ದ ಆರೋಪಿ ಅಫ್ತಾಬ್

ದೆಹಲಿ: ಅಫ್ತಾಬ್ ಪೂನಾವಾಲಾ(Aaftab Poonawala) ಲಿವ್-ಇನ್ ಸಂಗಾತಿ ಶ್ರದ್ಧಾ ವಾಕರ್​​ನ್ನು(Shraddha Walkar) ಕೊಂದು ಆಕೆಯ ಅವರ ಮೂಳೆಯನ್ನು ಗ್ರೈಂಡರ್ ಬಳಸಿ ಪುಡಿ ಮಾಡಿ ವಿಲೇವಾರಿ ಮಾಡಿದ್ದ. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಂಡಿನಲ್ಲಿ ಆಕೆಯ ತಲೆಯೂ ಒಂದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಈ ಬೆಚ್ಚಿಬೀಳಿಸುವ ಕೊಲೆಯ 6,600 ಪುಟಗಳ ಚಾರ್ಜ್‌ಶೀಟ್ ಭಯಾನಕ ವಿವರಗಳನ್ನು ಪಟ್ಟಿ ಮಾಡಿದೆ. ಇತರ ವಿಷಯಗಳ ಜೊತೆಗೆ, ಮೇ 18 ರಂದು, ಶ್ರದ್ಧಾಳನ್ನು ಕೊಂದ ನಂತರ, ಪೂನಾವಾಲಾ ಜೊಮಾಟೊದಿಂದ ಚಿಕನ್ ರೋಲ್‌ನಲ್ಲಿ ಆರ್ಡರ್ ಮಾಡಿ ತಿಂದಿದ್ದ. ಕಳೆದ ವರ್ಷ ಮೇ ತಿಂಗಳಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಸಂಬಂಧದಲ್ಲಿ ಆಗಲೇ ಬಿರುಕು ಉಂಟಾಗಿತ್ತು. ಇಬ್ಬರೂ ಖರ್ಚು ವೆಚ್ಚಗಳು ಮತ್ತು ಅಫ್ತಾಬ್ ಪೂನಾವಾಲಾನ ಗರ್ಲ್ ಫ್ರೆಂಡ್ಸ್ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಅಲ್ಲಿ ವಾಗ್ವಾದ ನಡೆದಿತ್ತು. ಆತನಿಗೆ ದೆಹಲಿಯಿಂದ ದುಬೈ ತನಕ ಗೆಳತಿಯರಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮೇ 18 ರಂದು ಇಬ್ಬರೂ ಮುಂಬೈಗೆ ಹೋಗಲು ಪ್ಲಾನ್ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಆಫ್ತಾಬ್ ಪೂನಾವಾಲಾ ಟಿಕೆಟ್ ರದ್ದು ಮಾಡಿದ್ದ. ಅದರ ನಂತರ ಮತ್ತೊಂದು ಖರ್ಚಿನ ಜಗಳವಾಯಿತು. ಆ ಹೊತ್ತಿನ ಸಿಟ್ಟಿನಲ್ಲಿ ಪೂನಾವಾಲಾ ಆಕೆಯ ಕತ್ತು ಹಿಸುಕಿದ್ದ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:27 am, Wed, 8 February 23