ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿಯವರ ಆರೋಪ ಆಧಾರರಹಿತ: ರವಿಶಂಕರ್ ಪ್ರಸಾದ್

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಧಾರರಹಿತ, ನಾಚಿಕೆಯಿಲ್ಲದ ಮತ್ತು ವ್ಯಥಾರೋಪಗಳನ್ನು ಮಾಡಿದ್ದಾರೆ ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಹೇಳಿದ್ದಾರೆ. "ಕಾಂಗ್ರೆಸ್ ಮತ್ತು ಅದರ ನಾಯಕರು ಭಾರತದ ಪ್ರತಿಷ್ಠೆಗೆ ಕಳಂಕ ತಂದ ಎಲ್ಲಾ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದಾರೆ" ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿಯವರ ಆರೋಪ ಆಧಾರರಹಿತ: ರವಿಶಂಕರ್ ಪ್ರಸಾದ್
ರವಿ ಶಂಕರ್ ಪ್ರಸಾದ್
Follow us
ರಶ್ಮಿ ಕಲ್ಲಕಟ್ಟ
|

Updated on: Feb 07, 2023 | 9:05 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi)ವಿರುದ್ಧ ರಾಹುಲ್ ಗಾಂಧಿ (Rahul Gandhi) ಅವರು ಆಧಾರರಹಿತ, ನಿರ್ಲಜ್ಜ ಮತ್ತು ವ್ಯಥಾರೋಪಗಳನ್ನು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ (Ravi Shankar Prasad ), ಕಾಂಗ್ರೆಸ್ ಸ್ವತಃ ‘ದೊಡ್ಡ ಹಗರಣ’ಗಳಲ್ಲಿ ಭಾಗಿಯಾಗಿದ್ದು, ದೇಶದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, ಉದ್ಯಮಿ ಗೌತಮ್ ಅದಾನಿಯವರ ವ್ಯಾಪಾರ ಸಂಪತ್ತು ಮತ್ತು ವೈಯಕ್ತಿಕ ಸಂಪತ್ತಿನ ಭಾರೀ ಏರಿಕೆಗೆ 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಾರಣ ಎಂದಿದ್ದರು.

ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಆಧಾರರಹಿತ, ನಾಚಿಕೆಯಿಲ್ಲದ ಮತ್ತು ವ್ಯಥಾರೋಪಗಳನ್ನು ಮಾಡಿದ್ದಾರೆ ಎಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಸಾದ್ ಹೇಳಿದ್ದಾರೆ. “ಕಾಂಗ್ರೆಸ್ ಮತ್ತು ಅದರ ನಾಯಕರು ಭಾರತದ ಪ್ರತಿಷ್ಠೆಗೆ ಕಳಂಕ ತಂದ ಎಲ್ಲಾ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಅದಾನಿ ವ್ಯಾಪಾರ ಸಾಮ್ರಾಜ್ಯಕ್ಕೆ ಮೋದಿ ಸಹಾಯ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ

ಗಾಂಧಿ ಕುಟುಂಬದ ಮೇಲೆ ದಾಳಿ ಮಾಡಲು ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತು ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಪ್ರಕರಣವನ್ನೂ ಪ್ರಸಾದ್ ಉಲ್ಲೇಖಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ರಾಹುಲ್ ಗಾಂಧಿಯವರ ತಮ್ಮ ನೆನಪು ಕೆದಕುವ ಸಮಯ ಇದು. ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ ಮತ್ತು ಅವರ ಅಳಿಯ ರಾಬರ್ಟ್ ವಾದ್ರಾ ಜಾಮೀನಿನ ಮೇಲೆ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಅವಳಿ ಸ್ತಂಭಗಳ ಮೇಲೆ ನಿಂತಿದ್ದು ಇದು ಭ್ರಷ್ಟರನ್ನು ರಕ್ಷಿಸುತ್ತಿದೆ. ಭ್ರಷ್ಟಾಚಾರ ಮತ್ತು ಭ್ರಷ್ಟರಿಗೆ ರಕ್ಷಣೆ ನೀಡುವುದು ರಾಹುಲ್ ಗಾಂಧಿ ಮತ್ತು ಅವರ ಕುಟುಂಬದ ಇತಿಹಾಸ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮೋದಿ ವಿರುದ್ಧ ಮಾಡಿದ ಆರೋಪಗಳೇನು?

2014 ಮತ್ತು 2022 ರ ನಡುವೆ ಅದಾನಿ ನಿವ್ವಳ ಮೌಲ್ಯವು $ 8 ಶತಕೋಟಿಯಿಂದ 140 ಶತಕೋಟಿಗೆ ಹೇಗೆ ಹೆಚ್ಚಾಯಿತು ಎಂದು ಜನರು ನನ್ನನ್ನು ಕೇಳಿದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಉದ್ಯಮಿ ಅದಾನಿ 600 ನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಹೋದರು ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿನಾವು ಯಾರ ಬಿ ಟೀಮ್ ಅಲ್ಲ, ನಾವು ಯಾರ ಮುಂದೆಯೂ ತಲೆಬಾಗಲ್ಲ: ಅಮಿತ್ ಶಾಗೆ ತಿಪ್ರಾ ಮೋಥಾ ಮುಖ್ಯಸ್ಥರ ಪ್ರತಿಕ್ರಿಯೆ

“ಪುನರುತ್ಥಾನ ಗುಜರಾತ್” (resurgent Gujarat) ಎಂಬ ಕಲ್ಪನೆಯನ್ನು ನಿರ್ಮಿಸಲು ಅದಾನಿ ಪ್ರಧಾನಿ ಮೋದಿಯವರಿಗೆ ಸಹಾಯ ಮಾಡಿದರು. ನಂತರ ಅವರು ದೇಶದ ಪ್ರಧಾನ ಮಂತ್ರಿಯಾಗಿ ಉನ್ನತೀಕರಣದಿಂದ ಲಾಭ ಪಡೆದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಸಂಬಂಧಗಳು ಪ್ರಾರಂಭವಾದವು .ಒಬ್ಬ ವ್ಯಕ್ತಿ ಪ್ರಧಾನಿ ಮೋದಿಯ ಭುಜಕ್ಕೆ ಭುಜದಿಂದ ನಿಂತರು, ಅವರು ಪ್ರಧಾನಿಗೆ ನಿಷ್ಠರಾಗಿದ್ದರು ಮತ್ತು ‘ಪುನರುತ್ಥಾನ ಗುಜರಾತ್’ ಕಲ್ಪನೆಯನ್ನು ನಿರ್ಮಿಸಲು ಮೋದಿಗೆ ಸಹಾಯ ಮಾಡಿದರು. 2014 ರಲ್ಲಿ ಪ್ರಧಾನಿ ಮೋದಿ ರಾಷ್ಟ್ರ ರಾಜಧಾನಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ