ನಾವು ಯಾರ ಬಿ ಟೀಮ್ ಅಲ್ಲ, ನಾವು ಯಾರ ಮುಂದೆಯೂ ತಲೆಬಾಗಲ್ಲ: ಅಮಿತ್ ಶಾಗೆ ತಿಪ್ರಾ ಮೋಥಾ ಮುಖ್ಯಸ್ಥರ ಪ್ರತಿಕ್ರಿಯೆ

ನಾವು ನಿಜವಾಗಿಯೂ ಬಿ-ಟೀಮ್ ಆಗಿದ್ದರೆ ನೀವು ನಮ್ಮನ್ನು ದೆಹಲಿಗೆ ಮಾತುಕತೆಗೆ ಆಹ್ವಾನಿಸಿದ್ದು ಯಾಕೆ. ಯಾವುದೇ ಒಪ್ಪಂದವಿಲ್ಲ, ಯಾವುದೇ ರಾಜಿ ಇಲ್ಲ ಮತ್ತು ಅದಕ್ಕಾಗಿಯೇ ನೀವು ನಮ್ಮನ್ನು ಬಿ-ಟೀಮ್ ಎಂದು ಕರೆಯುತ್ತಿದ್ದೀರಾ? ಈ ಪಕ್ಷ 2023 ರಲ್ಲಿ ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ಅನ್ನು ಸೋಲಿಸುತ್ತದೆ" ಎಂದು ದೆಬ್ಬರ್ಮಾ ಹೇಳಿದ್ದಾರೆ.

ನಾವು ಯಾರ ಬಿ ಟೀಮ್ ಅಲ್ಲ, ನಾವು ಯಾರ ಮುಂದೆಯೂ ತಲೆಬಾಗಲ್ಲ: ಅಮಿತ್ ಶಾಗೆ ತಿಪ್ರಾ ಮೋಥಾ ಮುಖ್ಯಸ್ಥರ ಪ್ರತಿಕ್ರಿಯೆ
ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on:Feb 07, 2023 | 2:22 PM

ಕೋಲ್ಕತ್ತಾ: ತ್ರಿಪುರಾದ(Tripura Election) 60 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು ಮಂಗಳವಾರ ಬಿಜೆಪಿ, ರಾಜ್ಯದ ಹೊಸ ರಾಜಕೀಯ ಘಟಕವಾದ ತಿಪ್ರಾ ಮೋಥಾ (Tipra Motha) ವಿರುದ್ಧ ವಾಗ್ದಾಳಿ ನಡೆಸಿದೆ. ತ್ರಿಪುರಾದಲ್ಲಿ ಸರಣಿ ರ್ಯಾಲಿ ನಡೆಸಿದ, ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ತಿಪ್ರಾ ಮೋಥಾ ಸಿಪಿಎಂ ಮತ್ತು ಕಾಂಗ್ರೆಸ್‌ನೊಂದಿಗೆ ಸೇರಿದೆ ಎಂದು ಆರೋಪಿಸಿದ್ದಾರೆ. “ಹಿಂದೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಜಗಳವಾಡುತ್ತಿದ್ದರು. ಈ ಬಾರಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಒಗ್ಗೂಡಿದ್ದಾರೆ ಮತ್ತು ತಿಪ್ರಾ ಮೋಥಾ ಅವರೊಂದಿಗೆ ಇದೆ” ಎಂದು ಶಾ ಸಂತೀರ್‌ಬಜಾರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ. ನಾನು ನನ್ನ ಆದಿವಾಸಿ ಸಹೋದರ ಸಹೋದರಿಯರಿಗೆ ಒಂದು ಮಾತು ಹೇಳಲು ಬಯಸುತ್ತೇನೆ.ಸುಳ್ಳು ಭರವಸೆಗಳನ್ನು ನೀಡಿ ನಿಮ್ಮ ಮತವನ್ನು ಪಡೆಯಲು ಬಯಸುವವರು ಕಮ್ಯುನಿಸ್ಟರ ಜೊತೆಗಿದ್ದಾರೆ, ಅವರ ಬಲೆಗೆ ಬೀಳಬೇಡಿ, ಯಾರಾದರೂ ಆದಿವಾಸಿಗಳ ಪ್ರಗತಿಯನ್ನು ತರಲು ಸಾಧ್ಯವಾದರೆ, ಅದು ಬಿಜೆಪಿ ಮತ್ತು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಬೇರೆ ಯಾರಿಂದಲೂ ಆಗಲ್ಲ ಎಂದು ಶಾ ಹೇಳಿದ್ದಾರೆ.

ಬಿಜೆಪಿಯನ್ನು ಎದುರಿಸಲು ಎಡಪಕ್ಷಗಳು ಮತ್ತು ಕಾಂಗ್ರೆಸ್ ವಿರೋಧ ಪಕ್ಷಗಳಾಗಿ ಮೈತ್ರಿ ಮಾಡಿಕೊಂಡಿವೆ. ಆದರೆ ತಿಪ್ರಾ ಮೋಥಾ ಅದರ ಭಾಗವಾಗಿಲ್ಲ. ಅಮಿತ್ ಶಾ ಆರೋಪಕ್ಕೆ ಪ್ರತಿಕ್ರಿಯಿಸಿದ ತಿಪ್ರಾ ಮೋಥಾದ ಮುಖ್ಯಸ್ಥರಾಗಿರುವ ಹಿಂದಿನ ರಾಜಮನೆತನದ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ, ನಮ್ಮ ದೇಶದ ಗೃಹ ಸಚಿವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಈ ಮಾಣಿಕ್ಯ ವಂಶ ಯಾರ ಮುಂದೆಯೂ ತಲೆಬಾಗುವುದಿಲ್ಲ, ನಾವು ಯಾರ ಬಿ-ಟೀಮ್ ಅಲ್ಲ. ನೀವು ನನ್ನ ಅಜ್ಜ ಮಹಾರಾಜ ಬೀರ್ ಬಿಕ್ರಂ ಹೆಸರನ್ನು ಹೇಳಿದ್ದೀರಿ. ಬೀರ್ ಬಿಕ್ರಮ್ ಅವರ ಮೊಮ್ಮಗ ತನ್ನ ಭೂಮಿಯನ್ನು, ತನ್ನ ಜನರನ್ನು ಯಾರಿಗೂ ಮಾರುವುದಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಾವು ಯಾರ ಬಿ-ಟೀಮ್ ಅಲ್ಲ ಎಂದಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬಿ-ಟೀಮ್, ಮೇಘಾಲಯ, ಶಿಲ್ಲಾಂಗ್ ಮತ್ತು ಗರೋ ಹಿಲ್ಸ್‌ನಲ್ಲಿ ಅವರು ಬೇರೆ ಪಕ್ಷದ ಬಿ-ಟೀಮ್, ಮಿಜೋರಾಂನಲ್ಲಿ ನೀವು ಇನ್ನೊಂದು ಪಕ್ಷದ ಬಿ-ಟೀಮ್, ತಮಿಳುನಾಡಿನಲ್ಲಿ ನೀವು ಎಐಎಡಿಎಂಕೆಯ ಬಿ-ಟೀಮ್. ಪಂಜಾಬ್‌ನಲ್ಲಿ, ನೀವು ಅಕಾಲಿದಳದ ಬಿ-ಟೀಮ್, ಬಿಜೆಪಿ ಭಾರತದ ಹಲವು ಪಕ್ಷಗಳ ಬಿ-ಟೀಮ್. ತಿಪ್ರಾ ಮೋಥಾ ಒಂದು ಸಣ್ಣ ಪಕ್ಷ. ಈ ಪಕ್ಷವು ತಲೆಬಾಗುವುದಿಲ್ಲ ಅಥವಾ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ ದೆಬ್ಬರ್ಮಾ.

ಇದನ್ನೂ ಓದಿ: Victoria Gowri: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

ನಾವು ನಿಜವಾಗಿಯೂ ಬಿ-ಟೀಮ್ ಆಗಿದ್ದರೆ ನೀವು ನಮ್ಮನ್ನು ದೆಹಲಿಗೆ ಮಾತುಕತೆಗೆ ಆಹ್ವಾನಿಸಿದ್ದು ಯಾಕೆ. ಯಾವುದೇ ಒಪ್ಪಂದವಿಲ್ಲ, ಯಾವುದೇ ರಾಜಿ ಇಲ್ಲ ಮತ್ತು ಅದಕ್ಕಾಗಿಯೇ ನೀವು ನಮ್ಮನ್ನು ಬಿ-ಟೀಮ್ ಎಂದು ಕರೆಯುತ್ತಿದ್ದೀರಾ? ಈ ಪಕ್ಷ 2023 ರಲ್ಲಿ ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ಅನ್ನು ಸೋಲಿಸುತ್ತದೆ” ಎಂದು ದೆಬ್ಬರ್ಮಾ ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಐಪಿಎಫ್‌ಟಿಯ ಬುಡಕಟ್ಟು ಬೆಂಬಲದ ಆಧಾರದ ಮೇಲೆ ತಿಪ್ರಾ ಮೋಥಾ ಬೆಳೆಯುತ್ತಿದೆ. ಕೆಲ ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿಯನ್ನು ಬದಲಾಯಿಸಲು ಬಿಜೆಪಿ ಮುಂದಾಗಿರುವುದು ಉನ್ನತ ನಾಯಕತ್ವದ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಬಿಜೆಪಿ ಮತ್ತು ಐಪಿಎಫ್‌ಟಿಗೆ ಸ್ಪಷ್ಟ ಬಹುಮತ ಸಿಗದಿದ್ದರೆ ತಿಪ್ರಾ ಮೋಥಾ ಕಿಂಗ್‌ಮೇಕರ್ ಆಗಿ ಹೊರಹೊಮ್ಮಬಹುದು. 2021 ರಲ್ಲಿ ಬುಡಕಟ್ಟು ಪ್ರದೇಶಗಳ ಜಿಲ್ಲಾ ಕೌನ್ಸಿಲ್ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಿದ್ದು, 30 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿದೆ. 60 ಸದಸ್ಯರ ಅಸೆಂಬ್ಲಿಯಲ್ಲಿ 20 ಬುಡಕಟ್ಟು ಪ್ರಾಬಲ್ಯದ ಸ್ಥಾನಗಳಲ್ಲಿ ಇದು ಪರವಾಗಿ ಸ್ಥಾನಗಳನ್ನು ಗಳಿಸಬಹುದು.

ದೆಬ್ಬರ್ಮಾ ಅವರನ್ನು ಸ್ಥಳೀಯರಲ್ಲಿ ‘ಬುಬಗ್ರಾ’ ಅಥವಾ ‘ಮಹಾರಾಜ’ ಎಂದು ಕರೆಯಲಾಗುತ್ತದೆ. ಇವರು ರಾಜ್ಯದಲ್ಲಿನ ಸ್ಥಳೀಯ ತ್ರಿಪುರಿ ಜನರ ಹಕ್ಕುಗಳ ಬಗ್ಗೆ ದನಿಯೆತ್ತುತ್ತಾರೆ. ಅವರ ಹೊಸ ರಾಜಕೀಯ ಪಕ್ಷವು ಗ್ರೇಟರ್ ಟಿಪ್ರಾಲ್ಯಾಂಡ್‌ನ ಪ್ರಮುಖ ಬೇಡಿಕೆಯೊಂದಿಗೆ ರಾಜಕೀಯ ಪ್ರವೇಶಿಸಿದೆ. ಅವರ ಪಕ್ಷವು ಬುಡಕಟ್ಟು ಮಂಡಳಿಯ ಆಡಳಿತದ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ. ಪಕ್ಷವು ಹಲವಾರು ಬುಡಕಟ್ಟು ಅಲ್ಲದ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಈ ಚುನಾವಣೆಗಳಲ್ಲಿ ಇದು ಪ್ರಮುಖ ಸ್ಪರ್ಧಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Tue, 7 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ