Victoria Gowri: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

Supreme Court Hear Petition Against Victoria Gowri: ವಿಕ್ಟೋರಿಯಾ ಗೌರಿ ಸೇರಿ 13 ಮಂದಿ ವಕೀಲರು ಮತ್ತು ನ್ಯಾಯ ಅಧಿಕಾರಿಗಳು ವಿವಿಧ ಹೈಕೋರ್ಟ್​ಗಳಲ್ಲಿ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತ್ತ, ವಿಕ್ಟೋರಿಯಾ ಗೌರಿ ನೇಮಕಾತಿ ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ.

Victoria Gowri: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ
ವಿಕ್ಟೋರಿಯಾ ಗೌರಿ
Follow us
|

Updated on: Feb 07, 2023 | 11:27 AM

ಚೆನ್ನೈ: ವಿವಾದಕ್ಕೆ ಒಳಗಾಗಿರುವ ವಕೀಲೆ ಎಲ್ ವಿಕ್ಟೋರಿಯಾ ಗೌರಿ (L Victoria Gowri) ಇಂದು ಮದ್ರಾಸ್ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮದ್ರಾಸ್ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ (Madras HC Acting Chief Justice) ಅವರಿಂದ ಬೆಳಗ್ಗೆ 10:30ಕ್ಕೆ ವಿಕ್ಟೋರಿಯಾ ಗೌರಿ ಸೇರಿದಂತೆ ಐದು ಮಂದಿಗೆ ಪ್ರಮಾಣ ವಚನ ಬೋಧಿಸಲಾಗುತ್ತದೆ ಎಂದು ನ್ಯಾಯಾಲಯದ ಸುತ್ತೋಲೆ ಹೊರಟಿತ್ತು. ಇದೇ ವೇಳೆ, ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ಈಗ ನಡೆಯುತ್ತಿದೆ.

ಭಾರತೀಯ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಕೊಲೇಜಿಯಂ ವ್ಯವಸ್ಥೆ ಮೂಲಕ 11 ಮಂದಿ ವಕೀಲರು ಮತ್ತು ಇಬ್ಬರು ನ್ಯಾಯ ಅಧಿಕಾರಿಗಳನ್ನು ಮದ್ರಾಸ್, ಕರ್ನಾಟಕ ಮತ್ತು ಅಲಹಾಬಾದ್ ಹೈಕೋರ್ಟ್​ಗಳಿಗೆ ನ್ಯಾಯಾಧೀಶರಾಗಿ ಜನವರಿ 17ರಂದು ಶಿಫಾರಸು ಮಾಡಲಾಗಿತ್ತು. ಅವರಲ್ಲಿ ವಿಕ್ಟೋರಿಯಾ ಗೌರಿ ಹಾಗೂ ನಾಲ್ವರು ಇತರರು ಮದ್ರಾಸ್ ಹೈಕೋರ್ಟ್​ಗೆ ನ್ಯಾಯಾಧೀಶ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: Oommen Chandy: ನ್ಯುಮೋನಿಯಾದಿಂದ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಆಸ್ಪತ್ರೆಗೆ ದಾಖಲು

ವಿಕ್ಟೋರಿಯಾ ಗೌರಿ ಆಯ್ಕೆ ಯಾಕೆ ವಿವಾದ?

ವಕೀಲೆಯಾಗಿ ವಿಕ್ಟೋರಿಯಾ ಗೌರಿ ಬಹಳಷ್ಟು ಲವ್ ಜಿಹಾದ್ ಪ್ರಕರಣಗಳಲ್ಲಿ ಕೆಲಸ ಮಾಡಿದ್ದಾರೆ. ಈ ಕೇಸ್​ಗಳ ಮೂಲಕವೇ ಅವರು ಹೆಸರುವಾಸಿಯಾಗಿದ್ದಾರೆ. ಹಾಗೆಯೇ ವಿವಾದಾತ್ಮಕ ಎಂತಲೂ ಎನಿಸಿದ್ದಾರೆ.

ವಿಕ್ಟೋರಿಯಾ ಗೌರಿ ವಕೀಲೆಯಾಗಿ ಕೆಲವಾರು ವಿವಾದ ಮತ್ತು ಟೀಕೆಗೆ ಗುರಿಯಾಗಿದ್ದವರು. ಇವರು ಮಾಜಿ ಬಿಜೆಪಿ ನಾಯಕಿಯೂ ಒಂದು. ಧಾರ್ಮಿಕ ಹಿನ್ನೆಲೆಯಲ್ಲಿ ಇವರು ಜನರನ್ನು ಅಳೆದುತೂಗುತ್ತಾರೆ. ಇವರಿಂದ ನ್ಯಾಯಯುತ ತೀರ್ಪು ಸಿಗುವುದಿಲ್ಲ ಎಂಬುದು ಅವರ ವಿರೋಧಿಗಳ ಅನಿಸಿಕೆ.

ಲಕ್ಷ್ಮಣಚಂದ್ರ ವಿಕ್ಟೋರಿಯಾ ಗೌರಿ ಅವರ ಸಮರ್ಥಕರೂ ಹಲವರಿದ್ದಾರೆ. ವಕೀಲೆಯಾಗಿ ಅವರು ಬಹಳ ಶ್ರಮ ಪಟ್ಟು ಮೇಲೆ ಬಂದಿದ್ದಾರೆ. ತಮ್ಮ ವೃತ್ತಿಗೆ ಬಹಳ ಬದ್ಧತೆ ತೋರಿದ್ದಾರೆ. ಹೀಗಾಗಿ, ಅವರನ್ನು ನ್ಯಾಯಧೀಶ ಸ್ಥಾನಕ್ಕೆ ಏರಿಸಿರುವುದು ತಪ್ಪ ಎಂದು ಹಲವು ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ಜಸ್ಟಿಸ್ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವಂತೆಯೇ, ಅತ್ತ ನವದೆಹಲಿಯಲ್ಲಿ ಅವರ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ.

ಇದನ್ನೂ ಓದಿ: India Help: ಟರ್ಕಿಗೆ ಭಾರತದ ಪರಿಹಾರ ಸಾಮಗ್ರಿ ರವಾನೆ; ಕಷ್ಟಕ್ಕಾಗುವವನೇ ಸ್ನೇಹಿತ ಎಂದು ಮಿಡಿದ ರಾಯಭಾರಿ

ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ವಿಕ್ಟೋರಿಯಾ ಗೌರಿ ಬಿಜೆಪಿ ಸದಸ್ಯೆಯಾಗಿದ್ದು ಸಮಸ್ಯೆಯಲ್ಲ, ಆದರೆ ನಿರ್ದಿಷ್ಟ ಸಮುದಾಯಗಳ ವಿರುದ್ಧ ಅವರು ಹೊಂದಿರುವ ದ್ವೇಷದ ನಿಲುವುಗಳು ಆಕ್ಷೇಪಾರ್ಹ. ಪೂರ್ವಗ್ರಹಪೀಡಿತ ವಿಚಾರಧಾರೆಗಳ ವ್ಯಕ್ತಿಯು ನ್ಯಾಯಾಧೀಶ ಸ್ಥಾನದಲ್ಲಿ ಇರುವುದು ಶೋಭೆ ಅಲ್ಲ ಎಂದು ದೂರುದಾರರ ಪರ ವಕೀಲರು ವಾದ ಮುಂದಿಟ್ಟಿದ್ದಾರೆ.

ಅತ್ತ, ವಿಕ್ಟೋರಿಯಾ ಗೌರಿ ಅವರು ವಕೀಲೆಯಾಗಿ ಬಹಳ ಶುದ್ಧ ವ್ಯಕ್ತಿತ್ವ ಹೊಂದಿದ್ದಾರೆ. ಯಾವ ವಿವಾದಗಳಲ್ಲೂ ಸಿಲುಕಿಲ್ಲ ಎಂಬುದು ಅವರ ಪರ ವಕೀಲರ ವಾದ.

ತಾಜಾ ಸುದ್ದಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಸಿಗರೇಟು ಸೇದುತ್ತೇವೆ: ಸಿಎಂ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?