ಗೋವಾದಲ್ಲಿ ಬೀದಿ ನಾಯಿ ದಾಳಿಯಿಂದ 18 ತಿಂಗಳ ಹೆಣ್ಣು ಮಗು ಸಾವು
ಗೋವಾದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಬಾಲಕಿ ತನ್ನ ಚಿಕ್ಕಪ್ಪನ ಮನೆಯ ಹೊರಗೆ ಆಟವಾಡುತ್ತಿದ್ದಾಗ 5 ಬೀದಿ ನಾಯಿಗಳ ಹಿಂಡು ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿತು. ಆ ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದರು.

ಪಣಜಿ, ಏಪ್ರಿಲ್ 18: ಇಂದು (ಏಪ್ರಿಲ್ 18) ಮನೆಯ ಹೊರಗೆ ಆಟವಾಡುತ್ತಿದ್ದಾಗ 18 ತಿಂಗಳ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿಗಳ ಹಿಂಡು ಕ್ರೂರವಾಗಿ ದಾಳಿ ಮಾಡಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಗೋವಾದ ಪೋಂಡಾ ಪಟ್ಟಣದ ದುರ್ಗಾಭಟ್ ವಾರ್ಡ್‌ನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಅನಾಬಿಯಾ ಶೇಖ್ ತನ್ನ ಚಿಕ್ಕಪ್ಪನ ಮನೆಯ ಹೊರಗೆ ಆಟವಾಡುತ್ತಿದ್ದಾಗ 4ರಿಂದ 5 ಬೀದಿ ನಾಯಿಗಳ ಹಿಂಡು ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿತು. ಮಗುವನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದರು.
ಬೀದಿ ನಾಯಿಗಳ ಕಾಟವನ್ನು ನಿಯಂತ್ರಿಸಲು ನಾಗರಿಕ ಸಂಸ್ಥೆಯು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಮತ್ತು ಪ್ರಾಣಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲು ಪೀಪಲ್ ಫಾರ್ ಅನಿಮಲ್ಸ್ ಎಂಬ ಎನ್‌ಜಿಒ ಜೊತೆ ಒಪ್ಪಂದ ಮಾಡಿಕೊಂಡಿದೆ. ಬೀದಿ ನಾಯಿಗಳ ಕಾಟವನ್ನು ನಿಯಂತ್ರಿಸಲು ಬೀದಿ ನಾಯಿಗಳಿಗೆ ಆಶ್ರಯ ಮನೆಯನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ: ನಾಯಿ ಮರಿ ತರಲು 200 ರೂ. ಕೊಡಲಿಲ್ಲವೆಂದು ಅಮ್ಮನಿಗೆ ಸುತ್ತಿಗೆಯಿಂದ ಹೊಡೆದು ಕೊಂದ ಮಗ!
ಇದೇ ವೇಳೆ ನಾಯಿ ಕಚ್ಚಿದ ನಂತರ 3 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ನಾಯಿ ಕಚ್ಚಿದ 45 ದಿನಗಳ ನಂತರ ಮೂರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಇತರ 10 ಮಕ್ಕಳ ಮೇಲೂ ಅದೇ ನಾಯಿ ದಾಳಿ ನಡೆಸಿದ್ದು, ಅವರು ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಬಾಲಕ ಅಂಶು ತನ್ನ ಗ್ರಾಮದ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ರೇಬೀಸ್ ರೋಗದಿಂದ ಮೃತಪಟ್ಟಿದ್ದಾನೆ. ಈ ಘಟನೆ ಚರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ನಾಥ್ಲು ಗ್ರಾಮದಲ್ಲಿ ನಡೆದಿದೆ. ಆತನ ಸಾವಿನ ನಂತರ ಸುಮಾರು 10 ಮಕ್ಕಳ ಮೇಲೆ ಅದೇ ನಾಯಿ ದಾಳಿ ನಡೆಸಿರುವುದು ಬೆಳಕಿಗೆ ಬಂದಿತು. ಇದರ ನಂತರ, ಆರೋಗ್ಯ ಅಧಿಕಾರಿಗಳ ತಂಡವು ಗ್ರಾಮಕ್ಕೆ ಧಾವಿಸಿತು. ತೀವ್ರ ಕಳವಳಕಾರಿ ಸಂಗತಿಯೆಂದರೆ, 2ರಿಂದ 12 ವರ್ಷ ವಯಸ್ಸಿನ ಇತರ 10 ಮಕ್ಕಳಲ್ಲಿ ಯಾರೂ ಆ ನಾಯಿಯಿಂದ ಕಚ್ಚಿದ ನಂತರ ಯಾವುದೇ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲಿಲ್ಲ ಎಂದು ವೈದ್ಯಕೀಯ ತಂಡವು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ