AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಯಾಣಿ ಜತೆ ಇಲ್ಲ ಮೋಹನ್​ಲಾಲ್ ಪುತ್ರನ ಲವ್; ಪ್ರಣವ್ ಜೀವನಕ್ಕೆ ವಿದೇಶಿ ಮಹಿಳೆ ಎಂಟ್ರಿ

ನಟ ಪ್ರಣವ್ ಮೋಹನ್ ಲಾಲ್ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್ ನಡುವೆ ಪ್ರೀತಿ ಚಿಗುರಿಲ್ಲ ಎಂದು ಕುಟುಂಬದ ಆಪ್ತರು ಹೇಳಿದ್ದಾರೆ. ಆದರೆ ಪ್ರಣವ್ ಸಿಂಗಲ್ ಆಗಿಲ್ಲ. ಅವರು ಜರ್ಮನಿ ಮಹಿಳೆಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ‘ಹೃದಯಂ’ ಸಿನಿಮಾದ ಹೀರೋ ಬಾಳಿನಲ್ಲಿ ಪ್ರಿಯತಮೆಯ ಎಂಟ್ರಿ ಆಗಿದೆ. ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ಕಲ್ಯಾಣಿ ಜತೆ ಇಲ್ಲ ಮೋಹನ್​ಲಾಲ್ ಪುತ್ರನ ಲವ್; ಪ್ರಣವ್ ಜೀವನಕ್ಕೆ ವಿದೇಶಿ ಮಹಿಳೆ ಎಂಟ್ರಿ
Pranav Mohanlal, Kalyani Priyadarshan
ಮದನ್​ ಕುಮಾರ್​
|

Updated on: Apr 18, 2025 | 9:32 PM

Share

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಮೋಹನ್​ಲಾಲ್ (Mohanlal) ಅವರ ಪುತ್ರ ಪ್ರಣವ್ ಜೀವನ ತುಂಬ ಡಿಫರೆಂಟ್ ಆಗಿದೆ. ಬೇರೆ ಸ್ಟಾರ್​ ನಟರ ಮಕ್ಕಳು ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಬೇಕು ಎಂದು ಬಯಸುತ್ತಾರೆ. ಹಾಗಾಗಿ ಸಿಕ್ಕ ಅವಕಾಶಗಳನ್ನೆಲ್ಲ ಬಾಚಿಕೊಳ್ಳುತ್ತಾರೆ. ಆದರೆ ಪ್ರಣವ್ ಮೋಹನ್​ಲಾಲ್ (Pranav Mohanlal) ಹಾಗಲ್ಲ. ಚಿತ್ರರಂಗದಲ್ಲಿ ಅವರಿಗೆ ಸಿಕ್ಕಾಪಟ್ಟೆ ಆಫರ್​ಗಳಿವೆ. ಹಾಗಿದ್ದರೂ ಕೂಡ ಅವರು ಎಲ್ಲವನ್ನೂ ಪಕ್ಕಕ್ಕೆ ಇಟ್ಟು ದೇಶ-ವಿದೇಶ ಸುತ್ತುತ್ತಿದ್ದಾರೆ. ಈ ನಡುವೆ ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಸುದ್ದಿ ಆಗುತ್ತಿದೆ. ಅವರೀಗ ವಿದೇಶದ ಮಹಿಳೆಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಪ್ರಣವ್ ಮೋಹನ್​ಲಾಲ್ ಅವರ ಪ್ರೇಯಸಿ (Pranav Mohanlal Girlfriend)​ ಯಾರು ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಈ ಮೊದಲು ಪ್ರಣವ್ ಮೋಹನ್​ಲಾಲ್ ಮತ್ತು ನಟಿ ಕಲ್ಯಾಣಿ ಪ್ರಿಯದರ್ಶನ್ ಅವರ ನಡುವೆ ಪ್ರೀತಿ ಚಿಗುರಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ‘ಹೃದಯಂ’ ಸಿನಿಮಾದಲ್ಲಿ ಅವರಿಬ್ಬರ ನಡುವೆ ಆ ಪರಿ ಕೆಮಿಸ್ಟ್ರಿ ಇತ್ತು. ಅವರಿಬ್ಬರು ರಿಯಲ್ ಲೈಫ್​ನಲ್ಲೂ ಜೋಡಿ ಆಗಬೇಕು ಎಂದು ಫ್ಯಾನ್ಸ್ ಬಯಸಿದ್ದರು. ಆದ್ರೆ ಅಂಥದ್ದು ಏನೂ ಆಗಿಲ್ಲ.

ಪ್ರಣವ್ ಮೋಹನ್​ಲಾಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅವರು ಕೇವಲ ಫ್ರೆಂಡ್ಸ್ ಎಂದು ನಟಿಯ ಕುಟುಂಬದವರು ಹೇಳಿದ್ದಾರೆ. ಇದರ ಬೆನ್ನಲ್ಲೇ ಪ್ರಣವ್ ಅವರು ವಿದೇಶಿ ಮಹಿಳೆಯ ಜೊತೆ ಸುತ್ತಾಡುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆಕೆ ಜರ್ಮನಿಯವರು ಎಂಬುದು ಗೊತ್ತಾಗಿದೆ. ಆದರೆ ಈ ಬಗ್ಗೆ ಪ್ರಣವ್ ಮೋಹಲ್​ಲಾಲ್ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇದನ್ನೂ ಓದಿ
Image
ಮತ್ತೆ ದಕ್ಷಿಣ ಭಾರತದ ನಿರ್ದೇಶಕನೊಟ್ಟಿಗೆ ಕೈ ಜೋಡಿಸಲಿರುವ ಆಮಿರ್ ಖಾನ್
Image
‘ಕೇಸರಿ 2’ ಸಿನಿಮಾಗೆ ದೊಡ್ಡ ಪೆಟ್ಟು; ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ ಲೀಕ್
Image
‘ಶೀಘ್ರವೇ ನಿಮ್ಮ ವಿಚ್ಛೇದನ’ ಎಂದವನಿಗೆ ಖಡಕ್ ಉತ್ತರ ಕೊಟ್ಟ ಸೋನಾಕ್ಷಿ
Image
ಮೇ ಟು ಅಕ್ಟೋಬರ್.. ‘ರಾಮಾಯಣ 2’ ಶೂಟ್​ನಲ್ಲಿ ಬ್ಯುಸಿ ಆಗಲಿದ್ದಾರೆ ಯಶ್

ಸ್ಟಾರ್ ಹೀರೋ ಪುತ್ರನಾಗಿದ್ದರೂ ಕೂಡ ಪ್ರಣವ್ ಮೋಹನ್​ಲಾಲ್ ಅವರು ವಿದೇಶದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿ ಕೆಲವರ ಫಾರ್ಮ್​ಹೌಸ್, ಹೊಲ-ಗದ್ದೆ ಮುಂತಾದ ಕಡೆಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಹಣದ ಬದಲಿಗೆ ಕೇವಲ ಊಟ ಮತ್ತು ಆಶ್​ರಯ ಪಡೆಯುತ್ತಾರೆ. ಜೀವನದಲ್ಲಿ ಈ ರೀತಿಯ ಅನುಭವ ಬೇಕು ಎಂಬ ಕಾರಣಕ್ಕೆ ಅವರು ವಿದೇಶಕ್ಕೆ ಹೋಗಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್​ಲಾಲ್ ಪುತ್ರ ಪ್ರಣವ್

ಸದ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಮಾತ್ರ ಗೊತ್ತಾಗಿದೆ. ಮದುವೆ ಬಗ್ಗೆ ಅವರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದಷ್ಟು ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಲಿ ಎಂಬುದು ಅಭಿಮಾನಿಗಳ ಆಸೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು