AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓರ್ವ ಮನುಷ್ಯ ಎಷ್ಟೇ ವರ್ಷ ಆದರೂ ಹೀಗೆ ಇರೋಕಾಗುತ್ತಾ? ಸುಧಾರಾಣಿ ಯೌವ್ವನದ ಬಗ್ಗೆ  ಪ್ರಶ್ನೆ

ಸುಧಾರಾಣಿ ಅವರು ತಮ್ಮ 51ನೇ ವಯಸ್ಸಿನಲ್ಲೂ ಸುಂದರವಾಗಿ ಕಾಣುತ್ತಾರೆ. ನಿತ್ಯ ವ್ಯಾಯಾಮ ಮತ್ತು ಯೋಗ ಅವರ ಸೌಂದರ್ಯದ ರಹಸ್ಯ. ಅವರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದು, ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು ರೀಲ್ಸ್‌ಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ.

ಓರ್ವ ಮನುಷ್ಯ ಎಷ್ಟೇ ವರ್ಷ ಆದರೂ ಹೀಗೆ ಇರೋಕಾಗುತ್ತಾ? ಸುಧಾರಾಣಿ ಯೌವ್ವನದ ಬಗ್ಗೆ  ಪ್ರಶ್ನೆ
ಸುಧಾರಾಣಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 19, 2025 | 6:30 AM

ನಟಿ ಸುಧಾರಾಣಿ (Sudharani) ಅವರು ಎಲ್ಲರ ಫೇವರಿಟ್ ನಟಿ. ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಆ ಬಳಿಕ 1986ರಲ್ಲಿ ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಆ ಬಳಿಕ ಸುಧಾರಾಣಿ ಸಾಲು ಸಾಲು ಚಿತ್ರಗಳನ್ನು ಮಾಡಿದರು. ಅವರು ಮಾಡದೇ ಇರುವ ಪಾತ್ರಗಳಿಲ್ಲ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಈಗ ಅವರು ‘ಮಜಾ ಟಾಕೀಸ್​’ಗೆ ಆಗಮಿಸಿದ್ದಾರೆ. ಅವರ ಯೌವನದ ಬಗ್ಗೆ ಇಲ್ಲಿ ಮಾತನಾಡಲಾಗಿದೆ ಅನ್ನೋದು ವಿಶೇಷ.

ಸುಧಾರಾಣಿ ಅವರು ಜನಿಸಿದ್ದು 1973ರಲ್ಲಿ. ಅವರಿಗೆ ಈಗ 51 ವರ್ಷ. ಅವರು ಈಗಲೂ ಯಂಗ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಅವರು ನಿತ್ಯ ವ್ಯಾಯಾಮ, ಯೋಗ ಮಾಡುತ್ತಾರೆ. ಇದು ಅವರ ಸೌಂದರ್ಯದ ಹಿಂದಿನ ಗುಟ್ಟು. ಅವರು ಶಿವರಾಜ್​ಕುಮಾರ್ ಸೇರಿದಂತೆ ಕನ್ನಡದ ಅನೇಕ ಹೀರೋಗಳ ಜೊತೆ ನಟಿಸಿದ್ದಾರೆ. ‘ಫೈರ್ ಫ್ಲೈ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ತಂಡ ಸಿನಿಮಾ ಪ್ರಚಾರಕ್ಕಾಗಿ ‘ಮಜಾ ಟಾಕೀಸ್’ ವೇದಿಕೆಗೆ ಬಂದಿದೆ.

ಇದನ್ನೂ ಓದಿ
Image
ಪ್ರಿಯಾಂಕಾ ಪತಿ ನಿಕ್ ಜೋನಸ್​ನ ಭೇಟಿ ಮಾಡಿದ ಸಿತಾರಾ ಕುಟುಂಬ
Image
ಪೂಜಾ ಹೆಗ್ಡೆಗೆ ಕರ್ನಾಟಕದ ಕನೆಕ್ಷನ್ ಹೇಗೆ? ನಿಜಕ್ಕೂ ಅವರು ಇಲ್ಲಿಯವರಾ?
Image
ವೆಬ್ ಸೀರಿಸ್​ಗೆ ಗುಡ್ ಬೈ ಹೇಳಿದ ಸಮಂತಾ; ಹುಟ್ಟಿಕೊಂಡ ಅಸಮಾಧಾನ ಏನು?
Image
ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಸಿನಿಮಾ

ಮಜಾ ಟಾಕೀಸ್ ಸದಸ್ಯರು ಸುಧಾರಾಣಿ ಇನ್ನೂ ಯಂಗ್ ಆಗಿ ಕಾಣೋ ಬಗ್ಗೆ ಮಾತನಾಡಿದ್ದಾರೆ. ‘ಓರ್ವ ಮನುಷ್ಯ ಎಷ್ಟೇ ವರ್ಷ ಆದರೂ ಹೀಗೆ ಇರೋಕಾಗುತ್ತಾ? ನನ್ನ ಗಂಡ ರೊಮ್ಯಾಂಟಿಕ್ ಇರಲಿಲ್ಲ. ಆದರೆ, ಮನೆ ದೇವ್ರು ರಿಲೀಸ್ ಆಗಿ 100 ದಿನ ಕಳೆಯೋದರೊಳಗೆ ನನಗೆ ಮೂರು ತಿಂಗಳು’ ಎಂದು ಹಾಸ್ಯ ಚಟಾಕಿ ಹಾರಿಸಲಾಗಿದೆ.

ಸುಧಾರಾಣಿ ಅವರು ಈಗಲೂ ನಟನಾ ಲೋಕದ ಜೊತೆ ನಂಟು ಹೊಂದಿದ್ದಾರೆ. ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು

ಇನ್ನು, ಸುಧಾರಾಣಿ ಅವರು ಈಗಿನ ಜನರೇಶನ್ ರೀತಿ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್​ಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಅವರ ಮಗಳ ಜೊತೆಯೂ ರೀಲ್ಸ್ ಮಾಡುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.