ಕ್ಯಾನ್ಸರ್ ಮುಕ್ತರಾದ ಬಳಿಕ ಎನರ್ಜಿ ಹೆಚ್ಚಿಸಿಕೊಂಡ ಶಿವಣ್ಣ; ಇಲ್ಲಿದೆ ವಿಡಿಯೋ ಸಾಕ್ಷಿ
ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅವರ ಹೊಸ ಚಿತ್ರ ‘45’ರ ಪ್ರಚಾರ ಕಾರ್ಯಕ್ರಮದಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಈ ಎಲ್ಲಾ ಘಟನೆಗಳು ಅವರ ಸಂಪೂರ್ಣ ಚೇತರಿಕೆಯನ್ನು ತೋರಿಸುತ್ತವೆ.

ಶಿವರಾಜ್ಕುಮಾರ್ (Shiva Rajkumar) ಅವರು ಕ್ಯಾನ್ಸರ್ಗೆ ಒಳಗಾಗಿದ್ದರು. ಅವರಿಗೆ ಕ್ಯಾನ್ಸರ್ ಇರೋ ವಿಚಾರ ಸಾಕಷ್ಟು ಆತಂಕ ಮೂಡಿಸಿತ್ತು. ಆದರೆ, ಶಿವರಾಜ್ಕುಮಾರ್ ಅವರು ಈಗ ಸಂಪೂರ್ಣ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಅವರು ಅಮೆರಿಕದಲ್ಲಿ ಆಪರೇಷನ್ಗೆ ಒಳಗಾಗಿ, ಭಾರತಕ್ಕೆ ಬಂದರು. ಈಗ ಅವರನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ಈಗ ಮೊದಲಿನ ಎನರ್ಜಿಗೆ ಬಂದಿದ್ದಾರೆ. ಅವರ ಎನರ್ಜಿ ಮತ್ತಷ್ಟು ಹೆಚ್ಚಾದಂತೆ ಕಾಣುತ್ತಿದೆ. ಇದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ.
ಶಿವಣ್ಣ ಹಾಗೂ ಜೀ ಕನ್ನಡದ ಮಧ್ಯೆ ಅವಿನಾಭಾವ ಸಂಬಂಧ ಇದೆ. ಶಿವರಾಜ್ಕುಮಾರ್ ಅವರು ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದರು. ಈಗ ಅವರು ‘ಸರಿಗಮಪ’ ವೇದಿಕೆ ಮೇಲೆ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ಜೊತೆ ಮಗಳು ನಿವೇದಿತಾ ಕೂಡ ಇದ್ದರು. ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದ ಪ್ರಚಾರ ಮಾಡಲಾಗಿದೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಶಿವಣ್ಣ ಅವರು ಮೊದಲಿನ ಎನರ್ಜಿಯಲ್ಲೇ ಡ್ಯಾನ್ಸ್ ಮಾಡಿರೋದು ವಿಶೇಷ.
View this post on Instagram
ಶಿವರಾಜ್ಕುಮಾರ್ ವೇದಿಕೆ ಏರಿದರು ಎಂದರೆ ಅವರಿಂದ ಎಲ್ಲರೂ ಡ್ಯಾನ್ಸ್ನ ನಿರೀಕ್ಷೆ ಮಾಡುತ್ತಾರೆ. ಆದರೆ, ಅವರಿಗೆ ಆಪರೇಷನ್ ಆಗಿದೆ. ಈಗ ಅವರ ಬಳಿ ಡ್ಯಾನ್ಸ್ ಮಾಡಿಸಬೇಕೋ ಅಥವಾ ಬೇಡವೋ ಎನ್ನುವ ಪ್ರಶ್ನೆ ಮೂಡಬಹುದು. ಆದರೆ, ಶಿವರಾಜ್ಕುಮಾರ್ ಮೊದಲಿನ ಎನರ್ಜಿಗೆ ಮರಳಿದ್ದಾರೆ. ‘ಸರಿಗಮಪ’ ವೇದಿಕೆ ಮೇಲೆ ಅವರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಶಿವಣ್ಣ ಅವರನ್ನು ನೋಡಿ ಆ್ಯಂಕರ್ ಅನುಶ್ರೀ, ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಖುಷಿ ಆಗಿದ್ದಾರೆ.
ಇದನ್ನೂ ಓದಿ: ‘ನನ್ನ ಸುದೀಪ್ ಮಧ್ಯೆ ಸಣ್ಣಪುಟ್ಟ ಮನಸ್ತಾಪ ಆಗಿರಬಹುದು, ಆದರೆ ವೈರತ್ವ ಬೆಳೆದಿಲ್ಲ’; ಶಿವರಾಜ್ಕುಮಾರ್
ಅರ್ಜುನ್ ಜನ್ಯ ಅವರು ಸಿನಿಮಾ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಅವರು ‘45’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಶಿವರಾಜ್ಕುಮಾರ್ ಅವರು ಹೀರೋ. ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ಈ ಸಿನಿಮಾ ರಿಲೀಸ್ಗಾಗಿ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಚಿತ್ರ್ಕೆ ಉತ್ತಮ ಪ್ರಚಾರ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:03 am, Fri, 18 April 25