ಸಿನಿಮಾ ಪ್ರೇಮಿಗಳ ಕ್ಷಮೆ ಕೇಳಿದ ಕಮಲ್ ಹಾಸನ್: ಕಾರಣವೇನು?
Kamal Haasan: ಕಮಲ್ ಹಾಸನ್ ಭಾರತ ಚಿತ್ರರಂಗದ ದಿಗ್ಗಜ ನಟ. ಚಿತ್ರರಂಗಕ್ಕೆ ಅವರು ನೀಡಿರವ ಕೊಡುಗೆ ಅಪಾರವಾದುದು. 70 ವರ್ಷ ವಯಸ್ಸಾಗಿದ್ದರೂ ಸಿನಿಮಾ ಮೇಲೆ ಅಷ್ಟೇ ಪ್ರೇಮ ಇರಸಿಕೊಂಡಿದ್ದಾರೆ. ಅವರ ‘ಥಗ್ ಲೈಫ್’ ಸಿನಿಮಾ ಶೀಘ್ರವೇ ತೆರೆಗೆ ಬರಲಿದೆ. ಇದರ ನಡುವೆ ಕಮಲ್ ಹಾಸನ್ ಸಿನಿಮಾ ಪ್ರೇಮಿಗಳ ಕ್ಷಮೆ ಕೋರಿದ್ದಾರೆ.

ಭಾರತೀಯ ಚಿತ್ರರಂಗದ ದಿಗ್ಗಜ ನಟ ಕಮಲ್ ಹಾಸನ್ (Kamal Haasan). ಭಾರತೀಯ ಚಿತ್ರರಂಗಕ್ಕೆ ದೊಡ್ಡ ಕೊಡುಗೆಗಳನ್ನು ಅವರು ನೀಡಿದ್ದಾರೆ. 70ರ ವಯಸ್ಸಿನಲ್ಲಿ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಕಮಲ್ ಹಾಸನ್. ಇದೀಗ ಅವರ ನಟನೆಯ ‘ಥಗ್ ಲೈಫ್’ ಸಿನಿಮಾ ಇನ್ನೇನು ಕೆಲ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ. ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ಸಿನಿಮಾ ಪ್ರೇಮಿಗಳ ಕ್ಷಮೆ ಕೇಳಿದ್ದಾರೆ.
‘ಥಗ್ ಲೈಫ್’ ಸಿನಿಮಾ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್ ಹಾಸನ್, ತಾವು ಹಾಗೂ ನಿರ್ದೇಶಕ ಮಣಿರತ್ನಂ ಬಹಳ ಹಿಂದೆಯೇ ಒಟ್ಟಿಗೆ ಕೆಲಸ ಮಾಡಬೇಕಿತ್ತು. ಹಲವು ವರ್ಷಗಳಿಂದಲೂ ಅದು ಸಿನಿಮಾ ಪ್ರೇಮಿಗಳ ಬೇಡಿಕೆ ಆಗಿತ್ತು. ಆದರೆ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ನಾವು ಒಟ್ಟಿಗೆ ಕೆಲಸ ಮಾಡಲಿಲ್ಲ. ಅದು ನಮ್ಮ ತಪ್ಪು, ಅದಕ್ಕೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ಕಮಲ್ ಹಾಸನ್.
ಮಣಿರತ್ನಂ ನಿರ್ದೇಶನದ ‘ನಾಯಗನ್’ ಸಿನಿಮಾನಲ್ಲಿ ಕಮಲ್ ಹಾಸನ್ ನಟಿಸಿದ್ದರು. ಆ ಸಿನಿಮಾ ಇಂದಿಗೂ ಭಾರತೀಯ ಚಿತ್ರರಂಗದಲ್ಲಿ ಕಲ್ಟ್ ಕ್ಲಾಸಿಕ್ ಸಿನಿಮಾ ಆಗಿದೆ. ಅದಾದ ಬಳಿಕ ಮತ್ತೆ ಈ ಇಬ್ಬರು ಒಟ್ಟಾಗಿ ಕೆಲಸ ಮಾಡಿದ್ದೇ ಇಲ್ಲ. ಪರಸ್ಪರರ ನಡುವೆ ಬಂದ ಭಿನ್ನಾಭಿಪ್ರಾಯದಿಂದಾಗಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿಲ್ಲ ಎನ್ನಲಾಗುತ್ತದೆ. ಇಬ್ಬರು ದಿಗ್ಗಜರು ಒಟ್ಟಿಗೆ ಸಿನಿಮಾ ಮಾಡದೇ ಇರುವುದು ಸಿನಿಮಾ ಪ್ರೇಮಿಗಳಿಗೆ ಮಾಡಿದ ಅನ್ಯಾಯ ಎಂಬರ್ಥದ ಮಾತುಗಳನ್ನಾಡಿ ಕ್ಷಮೆ ಕೇಳಿದ್ದಾರೆ ಕಮಲ್ ಹಾಸನ್.
ಇದನ್ನೂ ಓದಿ:ಬಾಲಿವುಡ್ನ ಆ ಕುಕೃತ್ಯ ತಿಳಿದು ಹಿಂತಿರುಗಿ ನೋಡದೇ ಬಂದಿದ್ದರು ಕಮಲ್ ಹಾಸನ್
ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಮಣಿರತ್ನಂ ಅವರ ಹಳೆಯ ದಿನಗಳನ್ನು ನೆನಪು ಮಾಡಿಕೊಂಡ ಕಮಲ್ ಹಾಸನ್, ನಾವು ಬೈಕಿನಲ್ಲಿ ಬಂದು ಎಲ್ಡಾಮಸ್ರಸ್ತೆಯಲ್ಲಿ ಬೈಕ್ ಪಾರ್ಕ್ ಅಲ್ಲಿಯೇ ಬೈಕ್ ಮೇಲೆ ಕುಳಿತು ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆವು. ನಾವು ಮಾತನಾಡಿದ 25% ಸಹ ನಮಗೆ ಸಿನಿಮಾಗಳಲ್ಲಿ ಮಾಡಲು ಸಾಧ್ಯವಾಗಿಲ್ಲ. ಆದರೆ ಮುಂದೆಯಾದರೂ ಅದನ್ನು ಮಾಡಲು ಸಾಧ್ಯವಾಗುತ್ತದೆಯೇ ನೋಡಬೇಕಿದೆ’ ಎಂದಿದ್ದಾರೆ ಕಮಲ್ ಹಾಸನ್.
ಕಮಲ್ ಹಾಸನ್ ಇದೀಗ ‘ಥಗ್ ಲೈಫ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ನಿರ್ದೇಶನ ಮಾಡುತ್ತಿರುವುದು ಮಣಿರತ್ನಂ. ಸಿನಿಮಾನಲ್ಲಿ ಸಿಲಂಬರಸನ್, ತ್ರಿಷಾ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಎಆರ್ ರೆಹಮಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ