AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್​ಲಾಲ್ ಪುತ್ರ ಪ್ರಣವ್

ಮಾಲಿವುಡ್​ನ ಸ್ಟಾರ್ ಹೀರೋ ಮೋಹನ್​ಲಾಲ್​ ಅವರ ಪುತ್ರ ಪ್ರಣವ್ ಕೂಡ ನಟನಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಸೂಪರ್​ ಸ್ಟಾರ್​, ತಾಯಿ ನಿರ್ಮಾಪಕಿ ಆಗಿದ್ದರೂ ಕೂಡ ಪ್ರಣವ್ ಮೋಹನ್​ಲಾಲ್ ಅವರು ವಿದೇಶದಲ್ಲಿ ಊಟ ಮತ್ತು ವಸತಿಗಾಗಿ ಕೃಷಿ ಮಾಡುತ್ತಿದ್ದಾರೆ, ಕುರಿ ಮೇಯಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ಅವರ ತಾಯಿ ಸುಚಿತ್ರಾ ಮಾತನಾಡಿದ್ದಾರೆ.

ವಿದೇಶದಲ್ಲಿ ಊಟ, ವಸತಿಗಾಗಿ ಕುರಿ ಮೇಯಿಸಿ, ಕೃಷಿ ಮಾಡುತ್ತಿರುವ ಮೋಹನ್​ಲಾಲ್ ಪುತ್ರ ಪ್ರಣವ್
ಪ್ರಣವ್ ಮೋಹನ್​ಲಾಲ್​
ಮದನ್​ ಕುಮಾರ್​
|

Updated on: Nov 11, 2024 | 6:28 PM

Share

ನಟ ಪ್ರಣವ್ ಮೋಹನ್​ಲಾಲ್ ಅವರಿಗೆ ಈಗ 43 ವರ್ಷ ವಯಸ್ಸು. ಈಗಾಗಲೇ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಮಲಯಾಳಂನ ‘ಹೃದಯಂ’ ಸಿನಿಮಾದಿಂದ ಅವರಿಗೆ ಖ್ಯಾತಿ ಸಿಕ್ಕಿದೆ. ಬಾಲನಟನಾಗಿದ್ದಾಗಲೇ ಅವರು ಕೇರಳ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ತಂದೆ ಮೋಹನ್​ಲಾಲ್ ಅವರು ಸೂಪರ್​ ಸ್ಟಾರ್​ ಆಗಿರುವುದರಿಂದ ಪ್ರಣವ್ ಅವರಿಗೆ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ. ಅವರ ತಾಯಿ ಸುಚಿತ್ರಾ ಅವರು ನಿರ್ಮಾಪಕಿ. ಇಷ್ಟೆಲ್ಲ ಸವಲತ್ತು ಇದ್ದರೂ ಕೂಡ ಪ್ರಣವ್ ಅವರು ಸ್ಪೇನ್​ನಲ್ಲಿ ಕೃಷಿ ಮಾಡುತ್ತಾ, ಕುರಿ, ಕುದುರೆಗಳನ್ನು ಮೇಯಿಸುತ್ತಿದ್ದಾರೆ!

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುಚಿತ್ರಾ ಮೋಹನ್​ಲಾಲ್ ಅವರು ಈ ವಿಚಾರಗಳ ಕುರಿತು ಮಾತನಾಡಿದ್ದಾರೆ. ಪ್ರಣವ್ ಮೋಹನ್​ಲಾಲ್ ಅವರಿಗೆ ವಿದೇಶ ಸುತ್ತುವುದು ಕ್ರೇಜ್​. ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇರುವ ಅನೇಕ ಫೋಟೋಗಳೇ ಅದಕ್ಕೆ ಸಾಕ್ಷಿ ಆಗಿವೆ. ಈಗ ಅವರು ಸ್ಪೇನ್​ನಲ್ಲಿ ಇದ್ದಾರೆ. ಅಲ್ಲಿ ಊಟ ಮತ್ತು ವಸತಿ ಸಲುವಾಗಿ ಅವರು ಬೇರೆಯವರ ಫಾರ್ಮ್​ನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.

ವಿದೇಶದಲ್ಲಿ ಊಟ ಮತ್ತು ವಸತಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವಷ್ಟು ಶ್ರೀಮಂತಿಕೆ ಪ್ರಣವ್ ಮೋಹನ್​ಲಾಲ್ ಅವರಿಗೆ ಇದೆ. ಆದರೆ ಹಣದ ಬಳಕೆ ಇಲ್ಲದೆಯೇ ಬದುಕಿನಲ್ಲಿ ಒಂದು ಅನುಭವ ಬೇಕು ಎಂಬ ಕಾರಣಕ್ಕಾಗಿ ಅವರು ಈ ರೀತಿ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ಅವರಿಗೆ ಆಸಕ್ತಿ ಇದೆ. ಆದರೆ ಅವಸರದಲ್ಲಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. 2 ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾ ಅವರು ಹಾಯಾಗಿ ಇದ್ದಾರೆ.

ಇದನ್ನೂ ಓದಿ: ಮಿಲಿಟರಿ ಸಮವಸ್ತ್ರದಲ್ಲಿ ವಯನಾಡಿಗೆ ಭೇಟಿ ಕೊಟ್ಟ ನಟ ಮೋಹನ್​ಲಾಲ್, 3 ಕೋಟಿ ನೆರವು

ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕು ಎಂಬುದು ಪ್ರಣವ್ ಮೋಹನ್​ಲಾಲ್ ಅವರ ಲೆಕ್ಕಾಚಾರ. ಹಾಗಾಗಿ ಅವರು ಪ್ರವಾಸಕ್ಕೆ, ಜೀವನಾನುಭವಕ್ಕೆ ಮಹತ್ವ ನೀಡುತ್ತಿದ್ದಾರೆ. ಸದ್ಯಕ್ಕೆ ಸ್ಪೇನ್​ನಲ್ಲಿ ಅವರು ಖಚಿತವಾಗಿ ಯಾವ ಲೊಕೇಷನ್​ನಲ್ಲಿ ಇದ್ದಾರೆ ಎಂಬುದು ಕೂಡ ಅವರ ಮನೆಯವರಿಗೆ ತಿಳಿದಿಲ್ಲ! ‘ಮೋಹನ್​ಲಾಲ್​ ಹಾಗೂ ಪ್ರಣವ್ ಒಂದೇ ಸಿನಿಮಾದಲ್ಲಿ ನಟಿಸಲಿ ಎಂದು ನಾನು ಬಯಸುವುದಿಲ್ಲ. ಒಂದು ವೇಳೆ ನಟಿಸಿದರೆ ಜನರು ಹೋಲಿಕೆ ಮಾಡುತ್ತಾರೆ’ ಎಂದು ಸುಚಿತ್ರಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ