ಕನ್ನಡದಲ್ಲೂ ರಿಲೀಸ್ ಆಗಲಿದೆ ತೆಲುಗಿನ ‘ಲವ್ ರೆಡ್ಡಿ’; ದುನಿಯಾ ವಿಜಯ್ ಬೆಂಬಲ

‘ನಾವು ಕೂಡ ಕನ್ನಡವರೇ. ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದು ನಟ ಅಂಜನ್ ರಾಮಚಂದ್ರ ಹಾಗೂ ನಟಿ ಶ್ರಾವಣಿ ಹೇಳಿದ್ದಾರೆ. ‘ಲವ್​ ರೆಡ್ಡಿ’ ಸಿನಿಮಾಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕೆ ಇದೆ. ದುಬೈನಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡುವ ಕುರಿತು ಮಾತುಕಥೆ ನಡೆಸುವುದಾಗಿ ದುನಿಯಾ ವಿಜಯ್ ಭರವಸೆ ನೀಡಿದ್ದಾರೆ.

ಕನ್ನಡದಲ್ಲೂ ರಿಲೀಸ್ ಆಗಲಿದೆ ತೆಲುಗಿನ ‘ಲವ್ ರೆಡ್ಡಿ’; ದುನಿಯಾ ವಿಜಯ್ ಬೆಂಬಲ
‘ಲವ್ ರೆಡ್ಡಿ’ ಸಿನಿಮಾದ ಕನ್ನಡ ವರ್ಷನ್​ ಟ್ರೇಲರ್​ ಬಿಡುಗಡೆ
Follow us
ಮದನ್​ ಕುಮಾರ್​
|

Updated on:Nov 11, 2024 | 10:19 PM

ರಿಯಲ್ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಮೂಡಿಬಂದ ‘ಲವ್ ರೆಡ್ಡಿ’ ಸಿನಿಮಾಗೆ ತೆಲುಗಿನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗಲ್ಲಾಪಟ್ಟೆಗೆಯಲ್ಲಿ ಸದ್ದು ಮಾಡಿದ್ದೂ ಅಲ್ಲದೇ ಸ್ಟಾರ್​ ಸೆಲೆಬ್ರಿಟಿಗಳಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದೆ. ಈಗ ಈ ಸಿನಿಮಾವನ್ನು ಕನ್ನಡದಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗೆ ಕನ್ನಡ ವರ್ಷನ್​ ಟ್ರೇಲರ್​ ಬಿಡುಗಡೆ ಆಯಿತು. ದುನಿಯಾ ವಿಜಯ್ (ವಿಜಯ್ ಕುಮಾರ್) ಅವರು ಈ ಟ್ರೇಲರ್​ ಬಿಡುಗಡೆ ಮಾಡುವ ಮೂಲಕ ‘ಲವ್ ರೆಡ್ಡಿ’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಅವರ ಬೆಂಬಲ ಸಿಕ್ಕಿದ್ದಕ್ಕೆ ಸಿನಿಮಾ ತಂಡಕ್ಕೆ ಖುಷಿ ಆಗಿದೆ.

ಸಾಕಷ್ಟು ಮಂದಿ ಹೊಸಬರು ಸೇರಿಕೊಂಡು ‘ಲವ್ ರೆಡ್ಡಿ’ ಸಿನಿಮಾ ಮಾಡಿದ್ದಾರೆ. ಸ್ಮರಣ್ ರೆಡ್ಡಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಟ ಅಂಜನ್ ರಾಮಚಂದ್ರ ಹಾಗೂ ನಟಿ ಶ್ರಾವಣಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅಂಜನ್ ಕುಟುಂಬದವರೇ ನಿರ್ಮಾಣ ಮಾಡಿದ್ದಾರೆ. ದುನಿಯಾ ವಿಜಯ್ ಅವರಿಗೆ ಈ ಸಿನಿಮಾ ಇಷ್ಟ ಆಗಿದೆ. ಹೊಂಬಾಳೆ ಫಿಲ್ಸ್ಮ್​ ಮೂಲಕ ಈ ಸಿನಿಮಾ ಕರ್ನಾಟಕದಲ್ಲಿ ನ.22ರಂದು ಬಿಡುಗಡೆ ಆಗಲಿದೆ.

‘ಲವ್ ರೆಡ್ಡಿ’ ಸಿನಿಮಾದ ಟ್ರೇಲರ್​:

ವಿಶೇಷ ಏನೆಂದರೆ, ಆಂಧ್ರ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯೇ ‘ಲವ್ ರೆಡ್ಡಿ’ ಸಿನಿಮಾದಲ್ಲಿ ಇದೆ. ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್ ಆಗಲಿದೆ ಎಂಬುದು ಚಿತ್ರತಂಡದ ನಂಬಿಕೆ. ‘ನಮಗೆ ಯಾವುದೇ ಫಿಲ್ಮಿ ಹಿನ್ನೆಲೆ ಇಲ್ಲ. ಅಂಜನ್ ರಾಮಚಂದ್ರ ನಮ್ಮ ಫ್ಯಾಮಿಲಿಯವರು. ಹೊಸಬರ ಸಿನಿಮಾವನ್ನು ನಿರ್ಮಾಣ ಮಾಡಲು ಯಾರೂ ಮುಂದೆ ಬರಲ್ಲ. ಹಾಗಾಗಿ ನಾವೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದೇನೆ. ಜನ ಮೆಚ್ಚಿದ್ದಾರೆ. ಪ್ರಭಾಸ್​ ಕೂಡ ಇಷ್ಟಪಟ್ಟಿದ್ದಾರೆ. ವಿಜಯ್ ಕುಮಾರ್​ ಅವರಿಗೆ ನಾವು ಚಿರಋಣಿ’ ಎಂದು ನಿರ್ಮಾಪಕರು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡದ ನಟನ ಮೇಲೆ ಚಿತ್ರಮಂದಿರದಲ್ಲಿ ಮಹಿಳೆಯಿಂದ ಹಲ್ಲೆ; ಕಾರಣ ವಿಚಿತ್ರ

ಕನ್ನಡದ ಸೀರಿಯಲ್​ಗಳ ಮೂಲಕ ಫೇಮಸ್​ ಆಗಿರುವ ಎನ್.ಟಿ. ರಾಮಸ್ವಾಮಿ ಅವರು ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದಾರೆ. ಹೈದರಾಬಾದ್​ನಲ್ಲಿ ಸಿನಿಮಾದ ಪ್ರಚಾರಕ್ಕೆ ಹೋದಾಗ ಮಹಿಳೆಯೊಬ್ಬರು ರಾಮಸ್ವಾಮಿ ಮೇಲೆ ಹಲ್ಲೆಗೆ ಮುಂದಾಗಿದ್ದರು. ಆ ಬಗ್ಗೆ ಅವರು ಮಾತನಾಡಿದರು. ‘ಏಕಾಏಕಿ ಮಹಿಳೆಯೊಬ್ಬರು ಕೆನ್ನೆಗೆ ಹೊಡೆಯಲು ಶುರು ಮಾಡಿದರು. ನನ್ನ ಪಾತ್ರ ನೋಡಿ ಅವರಿಗೆ ಕೋಪ ಬಂದಿತ್ತು. ಅಷ್ಟರಮಟ್ಟಿಗೆ ಜನರಿಗೆ ಈ ಪಾತ್ರ ತಲುಪಿದೆ’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:06 pm, Mon, 11 November 24