ಈ ಭಾನುವಾರ ಹೋಗಿಬಿಡಬೇಕು: ಧರ್ಮ ಇಂಥ ನಿರ್ಧಾರ ಮಾಡಲು ಕಾರಣ ಏನು?

ಎಲಿಮಿನೇಟ್ ಆಗಬಾರದು ಎಂದೇ ಬಿಗ್ ಬಾಸ್ ಮನೆಯ ಎಲ್ಲರೂ ಬಯಸುತ್ತಾರೆ. ಆದರೆ ಧರ್ಮ ಕೀರ್ತಿರಾಜ್ ಅವರು ಈ ವಾರ ಎಲಿಮಿನೇಟ್ ಆಗಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರು ಇಷ್ಟು ಬೇಸರದಿಂದ ನಡೆದುಕೊಳ್ಳಲು ಕಾರಣ ಕೂಡ ಇದೆ. ಕಳೆದ ವಾರದ ಸಂಚಿಕೆಯಲ್ಲಿ ಅವರನ್ನು ಇನ್ನುಳಿದ ಸ್ಪರ್ಧಿಗಳು ತೆಗಳಿದ್ದರು. ಆ ಮಾತುಗಳಿಂದ ಧರ್ಮ ಕೀರ್ತಿರಾಜ್ ಅವರಿಗೆ ನೋವಾಗಿತ್ತು.

ಈ ಭಾನುವಾರ ಹೋಗಿಬಿಡಬೇಕು: ಧರ್ಮ ಇಂಥ ನಿರ್ಧಾರ ಮಾಡಲು ಕಾರಣ ಏನು?
ಧರ್ಮ ಕೀರ್ತಿರಾಜ್
Follow us
ಮದನ್​ ಕುಮಾರ್​
|

Updated on: Nov 11, 2024 | 10:51 PM

ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅದರಲ್ಲೂ ವೀಕೆಂಡ್ ಎಪಿಸೋಡ್ ಬಂದರೆ, ಸುದೀಪ್ ಅವರು ಒಂದಷ್ಟು ಹೇಳಿಕೆಗಳನ್ನು ಸ್ಪರ್ಧಿಗಳ ಮುಂದೆ ಇಡುತ್ತಾರೆ. ಅದರಿಂದ ಕೆಲವರಿಗೆ ಖುಷಿಯಾಗುತ್ತದೆ, ಕೆಲವರಿಗೆ ನೋವಾಗುತ್ತದೆ. ಕಳೆದ ವಾರ ‘ನಾಲಾಯಕ್ ಯಾರು’ ಎಂಬ ಪ್ರಶ್ನೆಗೆ ಅನೇಕರು ಧರ್ಮ ಕೀರ್ತಿರಾಜ್ ಅವರ ಹೆಸರನ್ನು ಹೇಳಿದ್ದರು. ಇದರಿಂದ ಧರ್ಮ ಅವರು ತುಂಬಾ ಬೇಸರ ಆಯಿತು. ಬಿಗ್ ಬಾಸ್​ ಮನೆಗೆ ಬಂದು ಅಂಥ ಮಾತುಗಳನ್ನು ಕೇಳಿಸಿಕೊಂಡಿದ್ದು ಅವರಿಗೆ ನೋವು ತಂದಿದೆ. ಆ ಬಗ್ಗೆ ಅನುಷಾ ರೈ ಜೊತೆ ಅವರು ಧರ್ಮ ಕೀರ್ತಿರಾಜ್ ಅವರು ಮಾತನಾಡಿದ್ದಾರೆ.

ಧರ್ಮ ಕೀರ್ತಿರಾಜ್ ಕುಗ್ಗಿದ್ದನ್ನು ನೋಡಿ ಅನುಷಾ ರೈ ಅವರು ಸಮಾಧಾನ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ಇರಬೇಕು ಎಂದು ಅವರು ತಿಳಿಹೇಳಿದ್ದಾರೆ. ಆಗ ಧರ್ಮ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಂಡಿದ್ದಾರೆ. ‘ಇಲ್ಲಿಗೆ ಬಂದು ಈ ರೀತಿಯೆಲ್ಲ (ನಾಲಾಯಕ್) ಹೇಳಿಸಿಕೊಳ್ಳಬಾರದು. ಇನ್ಮೇಲೆ ಬದಲಾಗಬೇಕು. ಇಲ್ಲವಾದರೆ ಈ ಭಾನುವಾರ ಹೊರಗೆ ಹೋಗಿಬಿಡಬೇಕು’ ಎಂದು ಧರ್ಮ ಕೀರ್ತಿರಾಜ್ ಅವರು ಹೇಳಿದ್ದಾರೆ.

ಚಿತ್ರರಂಗದಲ್ಲಿ ಧರ್ಮ ಕೀರ್ತಿರಾಜ್ ಅವರು ಹೆಸರು ಕೆಡಿಸಿಕೊಂಡಿಲ್ಲ. ನಿಧಾನವಾಗಿ ಆದರೂ ಅವರು ಯಶಸ್ಸಿನ ಕಡೆಗೆ ಸಾಗುತ್ತಿದ್ದಾರೆ. ಒಂದಷ್ಟು ಸಿನಿಮಾಗಳ ಮೂಲಕ ಬೇರೆ ಬೇರೆ ರೀತಿಯ ಪಾತ್ರಗಳನ್ನು ಪ್ರಯತ್ನಿಸಿದ್ದಾರೆ. ಅಷ್ಟೆಲ್ಲ ಕಷ್ಟಪಟ್ಟಿರುವವರಿಗೆ ಬಿಗ್ ಬಾಸ್​ ಮನೆಮಂದಿಯೆಲ್ಲ ಸೇರಿ ನಾಲಾಯಕ್ ಎಂದು ಹೇಳಿದ್ದಕ್ಕೆ ಸಹಜವಾಗಿಯೇ ಧರ್ಮ ಕೀರ್ತಿರಾಜ್​ ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ನಡುವೆ ‘ಟೆನೆಂಟ್’ ಟೀಸರ್​ ಮೂಲಕ ಹೆಚ್ಚಿತು ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಸದ್ದು

ದೊಡ್ಮನೆಗೆ ಕಾಲಿಡುವುದಕ್ಕೂ ಮುನ್ನವೇ ಅನುಷಾ ರೈ ಮತ್ತು ಧರ್ಮ ಕೀರ್ತಿರಾಜ್ ಅವರ ನಡುವೆ ಆಪ್ತತೆ ಬೆಳೆದಿತ್ತು. ಸಿನಿಮಾಗಳಲ್ಲಿ ಅವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಈಗ ಬಿಗ್ ಬಾಸ್ ಮನೆಯಲ್ಲಿ ಕೂಡ ಅವರ ನಡುವೆ ಆಪ್ತತೆ ಹೆಚ್ಚಿದೆ. ಒಬ್ಬರಿಗೆ ಒಬ್ಬರು ಬೆಂಬಲವಾಗಿ ನಿಂತಿದ್ದಾರೆ. ಜೋಡಿಯಾಗಿ ಅವರು ಗಮನ ಸೆಳೆಯುತ್ತಿದ್ದಾರೆ. ಕಳೆದ ವಾರ ಯಾರೂ ಎಲಿಮಿನೇಟ್​ ಆಗಿಲ್ಲ. ಈ ವಾರ ಯಾರು ದೊಡ್ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್