ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ಅಣ್ಣ-ತಂಗಿ ಜಿಂಕೆ ಇದನ್ನು ಊಹಿಸಿರಲಿಲ್ಲ

ಧನರಾಜ್ ಮತ್ತು ಭವ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಅಣ್ಣ-ತಂಗಿಯಾಗಿ ಆಪ್ತತೆ ಬೆಳೆಸಿಕೊಂಡಿದ್ದಾರೆ. ಈ ವಾರದ ಎಲಿಮಿನೇಷನ್​ನಲ್ಲಿ ಈ ರೀತಿ ಆಗುತ್ತದೆ ಎಂದು ಅವರಿಬ್ಬರೂ ಊಹಿಸಿರಲಿಲ್ಲ. ಒಟ್ಟು ಏಳು ಜನರು ಈ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಧನರಾಜ್ ಮತ್ತು ಭವ್ಯಾ ಅವರು ಡೇಂಜರ್ ಝೋನ್​ಗೆ ಬಂದರು. ಆದರೆ ನಂತರ ಆಗಿದ್ದೇ ಬೇರೆ.

ಬಿಗ್ ಬಾಸ್ ಕನ್ನಡ ಎಲಿಮಿನೇಷನ್: ಅಣ್ಣ-ತಂಗಿ ಜಿಂಕೆ ಇದನ್ನು ಊಹಿಸಿರಲಿಲ್ಲ
ಧನರಾಜ್, ಭವ್ಯಾ
Follow us
ಮದನ್​ ಕುಮಾರ್​
|

Updated on: Nov 10, 2024 | 11:12 PM

ಭಾನುವಾರ ಬಂದರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಎಲಿಮಿನೇಷನ್​ನ ಟೆನ್ಷನ್​ ಹೆಚ್ಚಾಗುತ್ತದೆ. ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಕಾಡುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಈ ವಾರ ಒಟ್ಟು 7 ಮಂದಿ ನಾಮಿನೇಟ್​​ ಆಗಿದ್ದರು. ಅವರಲ್ಲಿ ಯಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಇತ್ತು. ಅಂತಿಮವಾಗಿ ಎಲ್ಲರೂ ಸೇಫ್ ಆಗಿದ್ದರು. ಆದರೆ ಕೊನೆಯಲ್ಲಿ ಉಳಿದುಕೊಂಡಿದ್ದು ಭವ್ಯಾ ಮತ್ತು ಧನರಾಜ್. ಅವರಿಗೂ ಒಂದು ಸರ್ಪೈಸ್ ಕಾದಿತ್ತು.

ಡೇಂಜರ್ ಝೋನ್​ನಲ್ಲಿ ಇದ್ದ ಧನರಾಜ್ ಮತ್ತು ಭವ್ಯಾ ಅವರ ಪೈಕಿ ಧನರಾಜ್ ಸೇಫ್ ಆದರು. ಭವ್ಯಾ ಅವರು ಲಗೇಜ್ ಪ್ಯಾಕ್ ಮಾಡಿಕೊಂಡು ಮುಖ್ಯದ್ವಾರದ ಕಡೆಗೆ ಬರಬೇಕಾಯಿತು. ಎಲಿಮಿನೇಷನ್​ನಲ್ಲಿ ಭವ್ಯಾ ಹೆಸರು ಬರುತ್ತದೆ ಎಂದು ಬಹುತೇಕರು ಊಹಿರಲಿಲ್ಲ. ಹಾಗಾಗಿ ಐಶ್ವರ್ಯಾ, ಶಿಶಿರ್, ತ್ರಿವಿಕ್ರಮ್ ಮುಂತಾದವರು ಸಿಕ್ಕಾಪಟ್ಟೆ ಎಮೋಷನಲ್ ಆದರು.

ಇನ್ನೇನು ಭವ್ಯಾ ಅವರು ಬಿಗ್ ಬಾಸ್​ ಮನೆಯಿಂದ ಹೊರಗೆ ಬರಬೇಕು ಎಂಬಷ್ಟರಲ್ಲಿ ಒಂದು ಟ್ವಿಸ್ಟ್​ ನೀಡಲಾಯಿತು. ದೊಡ್ಮನೆಯ ಬಾಗಿಲು ಓಪನ್ ಆಗಲೇ ಇಲ್ಲ. ‘ಭವ್ಯ ಅವರೇ.. ಈ ವಾರ ಈ ಮನೆಯಲ್ಲಿ ನಿಮ್ಮ ಪಯಣ ಮುಂದುವರಿಯುತ್ತದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಇನ್ನೇನು ಹೊರಗೆ ಹೋಗಿ ಫ್ಯಾಮಿಲಿಯವರನ್ನು ನೋಡಬೇಕು ಎಂದುಕೊಂಡಿದ್ದ ಭವ್ಯಾ ಅವರಿಗೆ ಈ ಟ್ವಿಸ್ಟ್​ ನೋಡಿ ಅಚ್ಚರಿ ಆಯಿತು.

ಇದನ್ನೂ ಓದಿ: ಧನರಾಜ್, ಹನುಮಂತ ಫ್ರೇಮ್​ನಲ್ಲಿ ಇದ್ದರೆ ಬಿಗ್ ಬಾಸ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ

ಭವ್ಯಾ ಎಲಿಮಿನೇಟ್ ಆಗಿಲ್ಲ ಎಂಬುದು ಗೊತ್ತಾದ ಬಳಿಕ ಇನ್ನುಳಿದ ಸ್ಪರ್ಧಿಗಳು ಬಂದು ವಿಶ್ ಮಾಡಿದರು. ಈ ವಾರ ಓಟಿಂಗ್ ಲೈನ್ಸ್ ಇರುವುದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ ಬಿಗ್ ಬಾಸ್ ಮನೆಯ ಒಳಗೆ ಇರುವ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿರಲಿಲ್ಲ. ಹಾಗಾಗಿ ಅವರಿಗೆ ಎಂದಿನಂತೆ ಟೆನ್ಷನ್ ಇತ್ತು. ಅಣ್ಣ-ತಂಗಿ ಜಿಂಕೆ ಎಂದೇ ಫೇಮಸ್ ಆಗಿರುವ ಭವ್ಯಾ ಮತ್ತು ಧನರಾಜ್ ಅವರಿಗೆ ಜಾಸ್ತಿ ಆತಂಕ ಆಗಿತ್ತು. ಆದರೆ ಈ ವಾರ ಎಲಿಮಿನೇಷನ್​ ಇಲ್ಲ ಎಂದು ತಿಳಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.