ಭಾನುವಾರದ ಬಿಗ್ ಬಾಸ್ ಎಪಿಸೋಡ್ ಪೂರ್ತಿ ಹೈಲೈಟ್ ಆದ ಹನುಮಂತ, ಧನರಾಜ್

ಬಿಗ್ ಬಾಸ್ ಮನೆಗೆ ಹನುಮಂತ ಕಾಲಿಟ್ಟ ಬಳಿಕ ಧನರಾಜ್ ಅವರು ಆ್ಯಕ್ಟೀವ್ ಆದರು. ಅವರಿಬ್ಬರ ಕಾಂಬಿನೇಷನ್​ ಅನೇಕರಿಗೆ ಇಷ್ಟ ಆಗಿದೆ. ಭಾನುವಾರದ (ನವೆಂಬರ್ 10) ಸಂಚಿಕೆಯಲ್ಲಿ ಕೂಡ ಹನುಮಂತ ಮತ್ತು ಧನರಾಜ್ ಅವರು ಸಖತ್ ಹೈಲೈಟ್ ಆಗಿದ್ದಾರೆ. ಕಿಚ್ಚ ಸುದೀಪ್ ಅವರು ಹನುಮಂತ ಹಾಗೂ ಧನರಾಜ್ ಬಗ್ಗೆ ಹೆಚ್ಚು ಚರ್ಚೆ ಮಾಡಿದ್ದಾರೆ.

ಭಾನುವಾರದ ಬಿಗ್ ಬಾಸ್ ಎಪಿಸೋಡ್ ಪೂರ್ತಿ ಹೈಲೈಟ್ ಆದ ಹನುಮಂತ, ಧನರಾಜ್
ಧನರಾಜ್, ಹನುಮಂತ
Follow us
ಮದನ್​ ಕುಮಾರ್​
|

Updated on: Nov 10, 2024 | 10:06 PM

ಪ್ರತಿ ಸೀಸನ್​ನಲ್ಲೂ ಬಿಗ್ ಬಾಸ್ ಮನೆಗೆ ಕಾಮಿಡಿ ಕಲಾವಿದರು ಬರುತ್ತಾರೆ. ಈ ಬಾರಿ ಅದರ ಕೊರತೆ ಆಗಬಹುದೇನೂ ಎನಿಸಿತ್ತು. ಯೂಟ್ಯೂಬ್ ಮೂಲಕ ಖ್ಯಾತಿ ಪಡೆದಿದ್ದ ಧನರಾಜ್ ಅವರು ‘ಬಿಗ್ ಬಾಸ್​ ಕನ್ನಡ 11’ ಶೋಗೆ ಬಂದಿದ್ದರೂ ಕೂಡ ಅವರು ಯಾರೋ ಅಷ್ಟೇನೂ ಕಾಮಿಡಿ ಮಾಡಿರಲಿಲ್ಲ. ಆದರೆ ಅವರ ಜೊತೆ ಹನುಮಂತ ಅವರು ಕೈ ಜೋಡಿಸಿದ ಬಳಿಕ ಕಾಮಿಡಿ ಕಿಕ್ ಶುರುವಾಯಿತು. ಹನುಮಂತ ಹಾಗೂ ಧನರಾಜ್ ಅವರು ಸಾಧ್ಯವಾದಷ್ಟು ಸಮಯ ಒಟ್ಟಿಗೆ ಕಳೆಯುತ್ತಾರೆ. ಆ ಬಗ್ಗೆ ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಮಾತನಾಡಿದ್ದಾರೆ.

ಹನುಮಂತ ಅವರು ಬಿಗ್ ಬಾಸ್​ ಶೋಗೆ ಬಂದ ದಿನದಿಂದಲೂ ಧನರಾಜ್ ಅವರ ಜೊತೆ ಕ್ಲೋಸ್ ಆಗಿದ್ದಾರೆ. ಇಷ್ಟ ದಿನ ಅವರಿಬ್ಬರು ಜೊತೆಯಾಗಿ ಕಾಲ ಕಳೆದ ಕ್ಷಣಗಳನ್ನು ಜೋಡಿ ವಿಡಿಯೋ ಬಿತ್ತರ ಮಾಡಲಾಯಿತು. ಅದನ್ನು ನೋಡಿ ಮನೆ ಮಂದಿಯೆಲ್ಲ ಖುಷಿಯಾದರು. ಧನರಾಜ್ ಅವರಿಗೆ ಹನುಮಂತನ ಮುಗ್ಧತೆ ಹೆಚ್ಚು ಇಷ್ಟ ಆಗುತ್ತಿದೆ. ಹಾಗಾಗಿ ಅವರು ಸ್ನೇಹ ಬೆಳೆಸಿದ್ದಾರೆ.

ಧನರಾಜ್ ಅವರಿಗೆ ಹನುಮನ ಜೊತೆಗಿನ ಸ್ನೇಹ ಕೆಲವೊಮ್ಮೆ ಮುಳುವಾಗುತ್ತಿದೆ. ಹನುಮಂತನನ್ನು ಬಿಟ್ಟರೆ ಬೇರೆ ಯಾರ ಜೊತೆಗೂ ಧನರಾಜ್ ಹೆಚ್ಚು ಬೆರೆಯುವುದಿಲ್ಲ ಎಂದು ಕೆಲವರು ನಾಮಿನೇಷನ್​ಗೆ ಕಾರಣ ನೀಡಿದ್ದೂ ಉಂಟು. ಹಾಗಂದೆಮಾತ್ರಕ್ಕೆ ಅವರಿಬ್ಬರ ಬಂಧ ಕಡಿಮೆ ಆಗಿಲ್ಲ. ಅಲ್ಲದೇ ಹನುಮಂತ ಅವರು ನಾಮಿನೇಷನ್​ ವಿಚಾರದಲ್ಲಿ ಯಾವುದೇ ಮುಲಾಜು ಇಟ್ಟುಕೊಳ್ಳುವವರಲ್ಲ. ಆ ಗುಣ ಎಲ್ಲರಿಗೂ ಇಷ್ಟ ಆಗಿದೆ.

ಇದನ್ನೂ ಓದಿ: ಹನುಮಂತ ಮುಗ್ಧನಾ? ಚಾಲಾಕಿಯಾ? ಸುದೀಪ್ ಎದುರು ಮನೆ ಮಂದಿ ಹೇಳಿದ್ದೇನು?

ಭಾನುವಾರದ ಎಪಿಸೋಡ್​ನಲ್ಲಿ ಹನುಮಂತ ಮತ್ತು ಧನರಾಜ್ ಅವರು ಸಿನಿಮಾದ ಡೈಲಾಗ್​ಗಳನ್ನು ಹೇಳಿಯೂ ಎಲ್ಲರನ್ನೂ ರಂಜಿಸಿದ್ದಾರೆ. ಇನ್ನು, ಹನುಮಂತ ಅವರ ಗರ್ಲ್​ಫ್ರೆಂಡ್​ ಬಗ್ಗೆಯೂ ಪ್ರಸ್ತಾಪ ಆಯಿತು. ಪ್ರೇಯಸಿಯ ಅಂದವನ್ನು ಹನುಮಂತ ವರ್ಣಿಸಿದರು. ಅದನ್ನು ಕೇಳಿಸಿಕೊಂಡು ಗೋಲ್ಡ್ ಸುರೇಶ್ ಚಿತ್ರ ಬಿಡಿಸಿದರು. ಆ ಚಿತ್ರವನ್ನು ಕಂಡು ಹನುಮಂತ ಹೌಹಾರಿದರು. ಬಳಿಕ ಗೌತಮಿ ಬರೆದ ಚಿತ್ರ ಹನುಮಂತ ಅವರಿಗೆ ಸ್ವಲ್ಪ ಸಮಾಧಾನ ತರಿಸಿತು. ಒಟ್ಟಿನಲ್ಲಿ ಅವರಿಬ್ಬರು ಇಡೀ ಸಂಚಿಕೆಯಲ್ಲಿ ಹೈಲೈಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಧನರಾಜ್ ಮೇಲೆ ಕೈ ಮಾಡಿ ಹೊರ ಹೋದ್ರಾ ರಜತ್?
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ
ಶುಕ್ರವಾರದ ದಿನಭವಿಷ್ಯ; ಗ್ರಹಗಳ ಸಂಚಾರ, ಶುಭ, ಅಶುಭ ಬಗ್ಗೆ ತಿಳಿಯಿರಿ