ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ
ಹನುಮಂತ ಈಗ ಮೊದಲಿನಂತಿಲ್ಲ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಬಂದ ಅವರು ಆರಂಭದಲ್ಲಿ ಎಲ್ಲದಕ್ಕೂ ಹಿಂಜರಿಯುತ್ತಿದ್ದರು. ಆದರೆ ಈಗ ನಿಧಾನಕ್ಕೆ ಅವರು ಬದಲಾಗಿದ್ದಾರೆ. ಅವರ ಆಟದ ವೈಖರಿ ತುಸು ವೈಲೆಂಟ್ ಆಗುತ್ತಿದೆ. ಹೊಸ ಟಾಸ್ಕ್ನಲ್ಲಿ ಅವರು ಮುನ್ನುಗ್ಗಿದ ರೀತಿ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಅದರ ಪ್ರೋಮೋ ಇಲ್ಲಿದೆ..
ಗ್ರಾಮೀಣ ಪ್ರತಿಭೆ ಹನುಮಂತ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ತಮ್ಮ ಬುದ್ಧಿವಂತಿಕೆ ತೋರಿಸುತ್ತಿದ್ದಾರೆ. ಇಷ್ಟು ದಿನ ಏನೂ ಗೊತ್ತಿಲ್ಲದವನ ಹಾಗೆ ಇರುತ್ತಿದ್ದ ಅವರು ಈಗ ಚುರುಕಾಗಿದ್ದಾರೆ. ಟಾಸ್ಕ್ ಆಡುವಾಗ ಹನುಮಂತ ಅವರು ಭಾರಿ ಹುಮ್ಮಸ್ಸಿನಿಂದ ಮುನ್ನುಗ್ಗಿದ್ದಾರೆ. ಅವರ ಆಟವನ್ನು ನೋಡಿ ತ್ರಿವಿಕ್ರಮ್ ಅವರಿಗೂ ಆಶ್ಚರ್ಯ ಆಗಿದೆ. ‘ನಿಜವಾದ ಗೇಮ್ ಹನುಮಂತನದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ‘ನೀ ಭಾರಿ ಅದಿ’ ಎಂದು ಧನರಾಜ್ ಕೂಡ ಹನುಮಂತನ ಬೆನ್ನು ತಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos