AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಗ್ಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಶಿವಕುಮಾರ್ ಭಾಗಿ, ಯಾಸಿರ್ ಪಠಾಣ್​ಗಾಗಿ ಮತಯಾಚನೆ

ಶಿಗ್ಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಶಿವಕುಮಾರ್ ಭಾಗಿ, ಯಾಸಿರ್ ಪಠಾಣ್​ಗಾಗಿ ಮತಯಾಚನೆ

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 07, 2024 | 3:55 PM

ದುಂಡಶಿ ಕಾಂಗ್ರೆಸ್ ಸಮಾವೇಶದಲ್ಲಿ ಹೆಚ್ ಕೆ ಪಾಟೀಲ್, ಈಶ್ವರ್ ಖಂಡ್ರೆ, ಶಿವಾನಂದ ಪಾಟೀಲ್, ಪ್ರಕಾಶ್ ರಾಠೋಡ್ ಮೊದಲಾದವರು ಸೇರಿದ್ದರು. ವೇದಿಕೆ ಮೇಲೆ ಹಿಂದೆ ಕುಳಿತಿದ್ದ ಮುಖಂಡರೊಬ್ಬರು ಶಿವಕುಮಾರ್ ಭುಜ ತಟ್ಟಿ ನಮಸ್ಕರಿಸುತ್ತ ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಾರೆ, ಅದರೆ ಶಿವಕುಮಾರ್ ಮುಗುಳ್ನಗುವ ಕೆಲಸವನ್ನೂ ಮಾಡಲ್ಲ!

ಹಾವೇರಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ತಾರಕಕ್ಕೇರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಿಗ್ಗಾವಿ ಕ್ಷೇತ್ರದಲ್ಲಿ ನಿನ್ನೆಯಿಂದ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪ್ರಚಾರ ಮಾಡುತ್ತಿದ್ದಾರೆ. ಇಂದು ಕ್ಷೇತ್ರದ ದುಂಡಶಿ ಗ್ರಾಮದಲ್ಲಿ ಏರ್ಪಡಿಲಾಗಿದ್ದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಭಾಗಿಯಾಗಿದ್ದರು. ಮೆರವಣಿಗೆಯಲ್ಲಿ ಶಿವಕುಮಾರ್ ಆಗಮಿಸುವಾಗ ವೇದಿಕೆಯ ಮೇಲಿದ್ದ ಕಾರ್ಯಕ್ರಮ ನಿರೂಪಕ ಬಹು ಪರಾಕ್ ಹೇಳುತ್ತಲೇ ಇದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು, ಬೇರೆಯವರ ಜತೆಗಿದ್ದಂತೆ ಇದ್ದರೆ ಆಗುವುದಿಲ್ಲ: ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಮಾತು

Published on: Nov 07, 2024 03:12 PM