AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯಾಚ್ ಫಿಕ್ಸಿಂಗ್ ಕ್ಯಾಪ್ಟನ್​, ಸ್ನೇಹಿತನಿಗೆ ಕೊಟ್ಟನು ಕೈ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11: ವೀಕೆಂಡ್ ಎಪಿಸೋಡ್​ಗೆ ಬಂದಿದ್ದ ಸುದೀಪ್, ಈ ವಾರದ ಕ್ಯಾಪ್ಟನ್ ತ್ರಿವಿಕ್ರಮ್ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡು ನಾಯಕ ಆದ ಬಗ್ಗೆ ಮನೆಯಲ್ಲಿ ಚರ್ಚೆ ಮಾಡಿದರು.

ಮ್ಯಾಚ್ ಫಿಕ್ಸಿಂಗ್ ಕ್ಯಾಪ್ಟನ್​, ಸ್ನೇಹಿತನಿಗೆ ಕೊಟ್ಟನು ಕೈ
ಮಂಜುನಾಥ ಸಿ.
|

Updated on: Nov 09, 2024 | 11:33 PM

Share

ಬಿಗ್​ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಆಗಿ ತ್ರಿವಿಕ್ರಮ್ ಆಯ್ಕೆ ಆಗಿದ್ದಾರೆ. ಕೊನೆಯಲ್ಲಿ ಭವ್ಯಾ, ತ್ರಿವಿಕ್ರಮ್ ಅವರುಗಳು ಉಳಿದಿದ್ದಾಗ ಮತದಾನದ ಮೂಲಕ ಭವ್ಯ ಅವರನ್ನು ರೇಸಿನಿಂದ ಹೊರಗೆ ಉಳಿಸಲಾಯ್ತು. ಭವ್ಯಗೆ ಜವಾಬ್ದಾರಿ ಸಾಲದು ಇತರೆ ಇತರೆ ಕಾರಣಗಳನ್ನು ಉಗ್ರಂ ಮಂಜು ಇನ್ನಿತರರು ನೀಡಿದರಾದರೂ, ಅಸಲಿ ಕಾರಣ ಬೇರೆಯೇ ಇತ್ತು. ತ್ರಿವಿಕ್ರಮ್ ಹಾಗೂ ಉಗ್ರಂ ಮಂಜು, ಗೌಥಮಿ ಅವರುಗಳು ಮೊದಲೇ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ತ್ರಿವಿಕ್ರಮ್ ಅನ್ನು ಕ್ಯಾಪ್ಟನ್ ಮಾಡಿದ್ದರು. ಆದರೆ ಸುದೀಪ್ ಎದುರು, ಕ್ಯಾಪ್ಟನ್, ಉಗ್ರಂ ಮಂಜುಗೆ ಕೈಕೊಟ್ಟಿದ್ದಾರೆ.

ಮೂರು ಜನರನ್ನು ನೇರ ನಾಮಿನೇಷನ್​ನಿಂದ ಬಚಾವ್ ಮಾಡಿದರೆ ನಿನ್ನನ್ನು ಕ್ಯಾಪ್ಟನ್ ಮಾಡುತ್ತೇವೆ ಎಂದು ಷರತ್ತು ವಿಧಿಸಿ ಅಥವಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಉಗ್ರಂ ಮಂಜು, ಗೌಥಮಿ ಅವರುಗಳು ತ್ರಿವಿಕ್ರಮ್​ಗೆ ಮತ ಹಾಕಿದ್ದರು. ಗೌಥಮಿ, ನನಗೆ ಈ ವಾರ ಇಂಥಹಾ ಕಡೆ ಕೆಲಸಕ್ಕೆ ಹಾಕಬಾರದು, ನಾನು ಕೇಳಿದ ಕೆಲಸವೇ ನನಗೆ ಹಾಕಬೇಕು ಎಂಬ ಷರತ್ತಿನ ಆಧಾರದಲ್ಲಿ ಓಟು ಹಾಕಿದ್ದರು. ಸುದೀಪ್ ಈ ಮ್ಯಾಚ್ ಪಿಕ್ಸಿಂಗ್ ಅನ್ನು ಟೀಕೆ ಮಾಡಿದರು.

ಸುದೀಪ್ ಎದುರು ಮಾತು ಬದಲಿಸಿದ ತ್ರಿವಿಕ್ರಮ್, ‘ನಾನು ಟಾರ್ಗೆಟ್ ಮಾಡಿ ನಾಮಿನೇಷನ್ ಮಾಡಲ್ಲ’ ಎಂದಿದ್ದೇನೆಯೇ ಹೊರತು, ನಿಮ್ಮನ್ನು ನಾಮಿನೇಟ್ ಮಾಡುವುದಿಲ್ಲ ಎಂದು ಹೇಳಿಲ್ಲ. ನಾನು ಭರವಸೆ ಕೊಟ್ಟಿರುವುದೇ ನಿಗದಿತ ವಾರದಲ್ಲಿ ನೀವು ಕೆಟ್ಟದಾಗಿ ಆಡಿದಿರೆಂದರೆ ನಿಮ್ಮನ್ನೂ ಸಹ ನಾಮಿನೇಟ್ ಮಾಡುತ್ತೇನೆ ಎಂದು ಮಾತು ಬದಲಿಸಿದರು. ಇದು ಉಗ್ರಂ ಮಂಜುಗೆ ತೀವ್ರ ಬೇಸರ ಮೂಡಿಸಿತು. ಉಗ್ರಂ ಮಂಜು, ಮಾತನಾಡಿ, ತ್ರಿವಿಕ್ರಮ್ ತಮಗೆ ಏನು ಭರವಸೆ ನೀಡಿದ್ದರು, ಕ್ಯಾಪ್ಟನ್ ಆಗಲೆಂದೇ ಅವರು ನಾನು ಹಾಕಿದ ಷರತ್ತಿಗೆ ಒಪ್ಪಿದ್ದರು, ಆದರೆ ಈಗ ನಾನು ಹಾಗೆ ಹೇಳಿಲ್ಲ ಎನ್ನುತ್ತಿದ್ದಾರೆ ಎಂದರು.

ಇದನ್ನೂ ಓದಿ:ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್

ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರಿಂದ ತಮಗೆ ಅನ್ಯಾಯವಾಯ್ತು ಎಂದು ಭವ್ಯ ರಾಗ ತೆಗೆದರು. ಅದಕ್ಕೆ ಸುದೀಪ್, ಬಿಗ್​ಬಾಸ್ ಮನೆಯೊಳಗೆ ಇರುವ ವ್ಯಕ್ತಿಗೆ ಇರುವ ಏಕೈಕ ಕೆಲಸ ಆಟ ಆಡುವುದು, ಆಟಕ್ಕೆ ಇಳಿದ ಮೇಲೆ ನೀವು ನಿಮ್ಮ ಎದುರಾಳಿ ಏನೇನೆಲ್ಲ ಮಾಡಬಲ್ಲ, ಅದಕ್ಕೆ ನಾನೇನು ಮಾಡಬಲ್ಲೆ ಎಂದು ಯೋಚನೆ ಮಾಡಿ ಆಟ ಆಡಬೇಕಿತ್ತು’ ಎಂದರು. ಸುದೀಪ್, ಈ ಇಬ್ಬರ ಮ್ಯಾಚ್ ಪಿಕ್ಸಿಂಗ್ ಕರ್ಮಕಾಂಡವನ್ನು ಬೇರೆ ಸ್ಪರ್ಧಿಗಳು ಪಾಠವಾಗಿ ಪರಿಗಣಿಸಬೇಕು ಎಂದರು. ಇದರಿಂದ ಕಲಿಯಬೇಕು ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ