‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು

Bigg Boss Kannada 11: ಬಿಗ್​ಬಾಸ್ ಕನ್ನಡ ಸ್ಪರ್ಧಿ ಭವ್ಯಾ ಗೌಡ ವೀಕೆಂಡ್ ಎಪಿಸೋಡ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಸುದೀಪ್ ಆಡಿದ ಮಾತುಗಳು ಅವರ ಮನಸ್ಸಿಗೆ ನಾಟಿವೆ. ಭವ್ಯಾ ಗೌಡಗೆ ಈ ವಾರ ಉತ್ತಮ ದೊರೆತಿದೆ ಹಾಗಿದ್ದರೂ ಸಹ ಅವರು ಕಣ್ಣೀರು ಹಾಕುವಂತಾಗಿದೆ.

‘ಮುಖಕ್ಕೆ ಎಸೆದು ಹೋಗಿರುತ್ತಿದ್ದೆ‘: ಕಿಚ್ಚನ ಮಾತಿಗೆ ಭವ್ಯಾ ಗೌಡ ಕಣ್ಣೀರು
Follow us
ಮಂಜುನಾಥ ಸಿ.
|

Updated on:Nov 10, 2024 | 8:43 AM

ವಾರಗಳು ಕಳೆದಂತೆ ಬಿಗ್​ಬಾಸ್​ ಕನ್ನಡ ಸೀಸನ್ 11 ರಲ್ಲಿ ಆಟಕ್ಕೆ ರಂಗು ಏರುತ್ತಿದೆ. ಮೊದಲ ಕೆಲ ವಾರಗಳು ಬರೀ ಜಗಳ, ಬೈದಾಟ ಮಾಡಿಕೊಂಡೇ ಕಾಲ ಕಳೆದ ಆಟಗಾರರು ಈಗ ಟಾಸ್ಕ್​ಗಳತ್ತ ಗಮನ ಹರಿಸಿದ್ದಾರೆ. ಸ್ಪರ್ಧಿಗಳು ಹೆಚ್ಚು ಗುರಿಯತ್ತ ಫೋಕಸ್ ಮಾಡಿ ಆಟ ಆಡುವಂತಾಗುವಲ್ಲಿ ಸುದೀಪ್ ಪ್ರಯತ್ನವೂ ಸಾಕಷ್ಟಿದೆ. ಪ್ರತಿಬಾರಿ ವೀಕೆಂಡ್ ಬಂದಾಗಲು ಬರುವ ಸುದೀಪ್, ಆಟಗಾರರ ಆಟವನ್ನು ವಿಶ್ಲೇಷಿಸಿ, ಅವರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಾರೆ. ಈ ವಾರದ ಆಟವನ್ನು ವಿಶ್ಲೇಷಣೆ ಮಾಡಿ ಮುಂದಿನ ವಾರ ಹೇಗೆ ಆಡಬೇಕು ಎಂದು ದಾರಿ ತೋರಿಸುತ್ತಾರೆ. ನಿನ್ನೆ ವೀಕೆಂಡ್ ಪಂಚಾಯಿತಿ ನಡೆಸಿದ ಕಿಚ್ಚ ಸುದೀಪ್ ಆಡಿದ ಮಾತಿಗೆ ಸ್ಪರ್ಧಿ ಭವ್ಯಾ ಗೌಡ ಕಣ್ಣೀರು ಹಾಕಿದರು.

ಭವ್ಯಾ ಗೌಡಗೆ ಈ ಬಾರಿ ಉತ್ತಮ ದೊರಕಿತು. ಆದರೆ ಅವರನ್ನು ಕ್ಯಾಪ್ಟೆನ್ಸಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಸಿಕೊಂಡು ಸೋಲಿಸಲಾಯ್ತು. ಉಗ್ರಂ ಮಂಜು, ಗೌತಮಿ, ಮೋಕ್ಷಿತಾ ಅವರುಗಳು ತ್ರಿವಿಕ್ರಮ್ ಜೊತೆಗೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡು ಭವ್ಯಾ ಅವರನ್ನು ಕ್ಯಾಪ್ಟನ್ಸಿ ರೇಸಿನಿಂದ ಹೊರಗೆ ಹಾಕಿದರು. ಇದರ ಬಗ್ಗೆ ಭವ್ಯಾ ಗೌಡ ಬಳಿ ಮಾತನಾಡಿದ ಕಿಚ್ಚ ಸುದೀಪ್, ಇದು ಹೇಗಾಯ್ತು ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಭವ್ಯಾ, ತಾವು ಮುಗ್ಧತೆಯಿಂದ ಆಡಿದ್ದಾಗಿ ಹೇಳಿದರು. ಆದರೆ ಇದನ್ನು ಒಪ್ಪದ ಸುದೀಪ್ ಕೆಲ ಬುದ್ಧಿವಾದ ಹೇಳಿದರು.

ಇದನ್ನೂ ಓದಿ:ಚಿನ್ನದ ಸರ ಬಿಚ್ಚಿಕೊಟ್ಟ ಸುರೇಶ್, ಬುದ್ಧಿವಾದ ಹೇಳಿದ ಸುದೀಪ್

ನಿಮ್ಮನ್ನು ಕ್ಯಾಪ್ಟೆನ್ಸಿ ರೇಸಿನಿಂದ ಹೊರಗೆ ಹಾಕಿದ ಜನರೇ ಆ ನಂತರ ಬಂದು ಕಣ್ಣೀರು ಒರೆಸಲೆಂದು ಎಂಬಂತೆ ಉತ್ತಮ ಪಟ್ಟ ಕೊಡುತ್ತಾರೆ. ಮಸಿ ಬಳಿದವರೇ ನಿಮಗೆ ಉತ್ತಮ ಪಟ್ಟ ಕೊಡುತ್ತಾರೆ. ಅದನ್ನು ನೀವು ಖುಷಿಯಿಂದ ಒಪ್ಪುತ್ತೀರ ನಿಮ್ಮ ಜಾಗದಲ್ಲಿ ನಾನು ಇದ್ದಿದ್ದರೆ, ಉತ್ತಮ ಕೊಟ್ಟು ಕೊರಳಿಗೆ ಹಾಕಿದ ಚಿನ್ನದ ಪದಕವನ್ನು ಅವರ ಮುಖದ ಮೇಲೆ ಎಸೆದು ಬರುತ್ತಿದ್ದೆ’ ಎಂದರು. ಇದನ್ನು ಕೇಳಿದ ಭವ್ಯಾ ಗೌಡ ಅಳಲು ಪ್ರಾರಂಭ ಮಾಡಿದರು.

ಈ ವಾರ ಅಸಲಿಗೆ ಭವ್ಯಾಗೆ ಅನ್ಯಾಯ ಆಗಿದೆ. ಅವರನ್ನು ಕ್ಯಾಪ್ಟೆನ್ಸಿ ರೇಸಿನಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಯ್ತು. ಅವರು ಈ ವಾರವೆಲ್ಲ ಒಳ್ಳೆಯ ಪ್ರದರ್ಶನ ನೀಡಿದ್ದರು. ಹಾಗಿದ್ದರೂ ಸಹ ಮನೆಯ ಕೆಲ ಸದಸ್ಯರು ಗುಂಪುಗಾರಿಕೆ ಮಾಡಿಕೊಂಡು ಭವ್ಯಾಗೆ ಅವಕಾಶ ಸಿಗದಂತೆ ಮಾಡಿದರು. ಉತ್ತಮ ಕೊಡುವುದರಲ್ಲಿಯೂ ಸಹ ಗುಂಪುಗಾರಿಕೆ ನಡೆಯಿತು. ಉಗ್ರಂ ಮಂಜು, ಗೌತಮಿಗೆ ಕೊಟ್ಟರೆ, ಗೌತಮಿ ಹಾಗೂ ಮೋಕ್ಷಿತಾ ಮಂಜುಗೆ ಉತ್ತಮ ಕೊಟ್ಟರು. ಆದರೆ ಮನೆಯ ಬೇರೆ ಸದಸ್ಯರು ಭವ್ಯಾಗೆ ಉತ್ತಮ ನೀಡಿದ್ದರಿಂದ ಆರು ಮತಗಳನ್ನು ನಡೆದು ಮನೆಯ ಮೊದಲ ಉತ್ತಮ ಎನಿಸಿಕೊಂಡರು ಭವ್ಯಾ ಗೌಡ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:42 am, Sun, 10 November 24

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ
ಶಿವಕುಮಾರ್ ಸ್ಥಿತಿ ನೋಡಿದರೆ ನನ್ನಲ್ಲಿ ಕರುಣೆ ಹುಟ್ಟುತ್ತದೆ: ಆರ್ ಅಶೋಕ