ಸೀತಾ ಹಾಗೂ ರಾಮನಿಂದ ಸಂಪೂರ್ಣವಾಗಿ ದೂರಾಗ್ತಾಳಾ ಸಿಹಿ?

ಸಿಹಿಯು ಸೀತಾಳ ಮಗಳಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ಸಿಹಿ ಬಾಡಿಗೆ ತಾಯ್ತನದಿಂದ ಜನಿಸಿದವಳು. ಈ ವಿಚಾರ ಗೊತ್ತಾದ ಬಳಿಕ ಎಲ್ಲರಿಗೂ ಶಾಕ್ ಆಗಿದೆ. ಈಗ ಸಿಹಿಯ ನಿಜವಾದ ಅಪ್ಪ-ಅಮ್ಮ ಶ್ಯಾಮ್ ಹಾಗೂ ಶಾಲಿನಿ ಬಂದುಕೊಂಡು ತಮಗೆ ಮಗಳನ್ನು ಮರಳಿ ನೀಡಿ ಎಂದು ಕೇಳುತ್ತಿದ್ದಾರೆ.

ಸೀತಾ ಹಾಗೂ ರಾಮನಿಂದ ಸಂಪೂರ್ಣವಾಗಿ ದೂರಾಗ್ತಾಳಾ ಸಿಹಿ?
ಸೀತಾ ರಾಮ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 10, 2024 | 7:30 AM

‘ಸೀತಾ ರಾಮ’ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಧಾರಾವಾಹಿ ಹಲವು ಎಪಿಸೋಡ್​ಗಳನ್ನು ಪೂರ್ಣಗೊಳಿಸಿದೆ. ಈ ವಾರ ಧಾರಾವಾಹಿಯಲ್ಲಿ ಏನೆಲ್ಲ ಆಯಿತು ಎಂಬುದನ್ನು ಗಮನಿಸೋಣ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಸಿಹಿಯನ್ನು ಸೀತಾ ಹಾಗೂ ರಾಮನಿಂದ ದೂರ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸೀತಾ ತುಂಬಾನೇ ಅಪ್ಸೆಟ್ ಆಗಿದ್ದಾಳೆ. ಮತ್ತೊಂದು ಕಡೆ ಭಾರ್ಗವಿ ದೇಸಾಯಿಗೆ ಇದು ಖುಷಿ ನೀಡಿದೆ.

ಸಿಹಿಯು ಸೀತಾಳ ಮಗಳಲ್ಲ ಅನ್ನೋದು ಈಗ ಎಲ್ಲರಿಗೂ ಗೊತ್ತಾಗಿದೆ. ಸಿಹಿ ಬಾಡಿಗೆ ತಾಯ್ತನದಿಂದ ಜನಿಸಿದವಳು. ಈ ವಿಚಾರ ಗೊತ್ತಾದ ಬಳಿಕ ಎಲ್ಲರಿಗೂ ಶಾಕ್ ಆಗಿದೆ. ಈಗ ಸಿಹಿಯ ನಿಜವಾದ ಅಪ್ಪ-ಅಮ್ಮ ಶ್ಯಾಮ್ ಹಾಗೂ ಶಾಲಿನಿ ಬಂದುಕೊಂಡು ತಮಗೆ ಮಗಳನ್ನು ಮರಳಿ ನೀಡಿ ಎಂದು ಕೇಳುತ್ತಿದ್ದಾರೆ. ಅಲ್ಲದೆ ಮಗಳು ತಮ್ಮ ಹಕ್ಕು ಎಂದು ಶ್ಯಾಮ್ ಹಾಗೂ ಶಾಲಿನಿಯು ಸಿಹಿಯನ್ನು ಕರೆದುಕೊಂಡು ಹೋಗಿದ್ದಾರೆ.

ಇದು ಸೀತಾ ಹಾಗೂ ರಾಮನಿಗೆ ಕೋಪ ತರಿಸಿದೆ. ಹೀಗಾಗಿ, ಶ್ಯಾಮ್ ಮನೆಗೆ ಸೀತಾ ಕದ್ದು ಎಂಟ್ರಿ ಕೊಟ್ಟಿದ್ದಳು. ಇದು ಶ್ಯಾಮ್ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು ಶ್ಯಾಮ್ ಹಾಗೂ ಶಾಲಿನಿ. ಇದನ್ನು ರಾಮ್ ವಿರೋಧಿಸಿದ್ದಾನೆ. ಅಲ್ಲದೆ ತಮ್ಮ ದೇಸಾಯಿ ಕುಟುಂಬದ ಪ್ರಭಾವ ಉಪಯೋಗಿಸಿ ಒಂದು ದಿನ ಮಗುವನ್ನು ನೋಡಲು ಅವಕಾಶ ಪಡೆದು ಬಂದಿದ್ದಾನೆ. ಕೋರ್ಟ್​ನಿಂದಲೇ ಈ ಆದೇಶ ಬಂದಿದ್ದರಿಂದ ಶ್ಯಾಮ್ ಹಾಗೂ ಶಾಲಿನಿ ಸೈಲೆಂಟ್ ಆಗಿದ್ದಾರೆ.

ಇದನ್ನೂ ಓದಿ: ಲಾಯರ್​ ರುದ್ರ ಪ್ರತಾಪನಿಗೆ ಏಟು ಕೊಟ್ಟ ಸೀತಾ; ಸಿಹಿ ಸುದ್ದಿಗೆ ಬಂದವರಿಗೆಲ್ಲ ಇದೇ ಗತಿ

ಒಂದು ದಿನ ಸಿಹಿಯನ್ನು ಸೀತಾ ಹಾಗೂ ರಾಮ್ ಹೊರಕ್ಕೆ ಕರೆದುಕೊಂಡು ಹೋಗಿ ಬಂದಿದ್ದಾರೆ. ಮೂವರು ಹಾಯಾಗಿ ಸುತ್ತಾಟ ನಡೆಸಿದ್ದಾರೆ. ಸಿಹಿ ಮರಳಿ ಶ್ಯಾಮ್ ಜೊತೆ ಹೋಗುವಾಗ ಬೇಸರ ಮಾಡಿಕೊಂಡಳು. ಹೇಗಾದರೂ ಮಾಡಿ ಮಗಳು ನನ್ನವಳೇ ಆಗಬೇಕು ಎಂಬುದು ಸೀತಾಳ ಬಯಕೆ. ಆದರೆ, ಸೀತಾ ಮೇಲಿನಿ ಹೊಟ್ಟೆ ಉರಿಯಿಂದಾಗಿ ಶಾಲಿನಿ ಈ ರೀತಿ ಮಾಡುತ್ತಿದ್ದಾಳೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.