ಮಾತು ಕೊಟ್ಟು ಮೋಸ ಮಾಡಿದ ಮಂಜು; ಗೆಳೆಯನಿಗೆ ಪಾಠ ಮಾಡ್ತಾರಾ ಸುದೀಪ್?
ಈ ವಾರ ಬಿಗ್ ಬಾಸ್ ಕನ್ನಡದಲ್ಲಿ ಮಂಜು ಅವರು ತಮ್ಮ ತಂಡದ ಸದಸ್ಯರೊಂದಿಗೆ ಕುತಂತ್ರದ ಆಟ ಆಡಿದ್ದಾರೆ. ಭವ್ಯಾ ಗೌಡರಿಗೆ ಮಾತು ಕೊಟ್ಟು ಮೋಸ ಮಾಡಿದ್ದಾರೆ ಮತ್ತು ಸುರೇಶ್ ಅವರನ್ನು ಕಡೆಗಣಿಸಿದ್ದಾರೆ. ಇದರಿಂದ ಅವರ ತಂಡದ ಸದಸ್ಯರಿಗೆ ಬೇಸರವಾಗಿದೆ. ಸುದೀಪ್ ಅವರು ಮಂಜು ಅವರಿಗೆ ಖಚಿತವಾಗಿ ಒಂದು ಉಪದೇಶ ಮಾಡುವ ಸಾಧ್ಯತೆ ಇದೆ.
ಉಗ್ರಂ ಮಂಜು ಅವರು ಈ ವಾರ ಸಾಕಷ್ಟು ಕುತಂತ್ರದ ಆಟ ಆಡಿದ್ದರು. ಆದಾಗ್ಯೂ ಆಪ್ತ ಬಳಗದಿಂದ ಅವರು ಉತ್ತಮ ಪಡೆದರು. ಈ ಬಗ್ಗೆ ಕೆಲವರಿಗೆ ಬೇಸರ ಇದೆ. ಇಷ್ಟೇ ಅಲ್ಲ, ಭವ್ಯಾ ಗೌಡಗೆ ಮಾತು ಕೊಟ್ಟು ಮೋಸ ಮಾಡಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅವರು ಮಂಜುಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಂಜು ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮಂಜು, ಗೋಲ್ಡ್ ಸುರೇಶ್, ಭವ್ಯಾ ಗೌಡ ಈ ವಾರ ಒಂದೇ ತಂಡದಲ್ಲಿ ಇದ್ದರು. ಪ್ರತಿ ಹಂತದಲ್ಲೂ ಭವ್ಯಾ ಉತ್ತಮವಾಗಿ ಆಡಿದ್ದಾರೆ. ಭವ್ಯಾ ಅವರ ಆಟದಿಂದ ಮಂಜು ತಂಡ ಅನೇಕ ಬಾರಿ ಗೆದ್ದಿದೆ. ಇದು ಮಂಜು ಅವರ ಗಮನಕ್ಕೂ ಬಂದಿತ್ತು. ಮತ್ತೊಂದು ಕಡೆ ಆಟ ಆಡುವಾಗ ಸುರೇಶ್ ಗಾಯ ಮಾಡಿಕೊಂಡರು. ಈ ಮಧ್ಯೆ ಮಂಜು ಅವರು ಭವ್ಯಾ ಗೌಡ ಅವರಿಗೆ ಒಂದು ಭರವಸೆ ನೀಡಿದ್ದರು.
‘ಕ್ಯಾಪ್ಟನ್ಸಿ ಇರೋ ಒಂದು ವಾರದಲ್ಲಿ ನಿನ್ನನ್ನು ಮೊದಲು ಸೇವ್ ಮಾಡ್ತೀನಿ. ಇಡೀ ವಾರದಲ್ಲಿ ಇಮ್ಯುನಿಟಿ ಬರುತ್ತದೆಯೋ ಅದು ನನ್ನ ತಂಡಕ್ಕೆ ಕೊಡೋದು’ ಎಂದು ಮಂಜು ಅವರು ಹೇಳಿದ್ದರು. ಆದರೆ, ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು ಮಂಜು.
ಭವ್ಯಾ ಗೌಡ ಹಾಗೂ ತ್ರಿವಿಕ್ರಂ ಅವರು ಕ್ಯಾಪ್ಟನ್ಸಿ ರೇಸ್ನಲ್ಲಿ ಇದ್ದರು. ಅವರಿಗೆ ವಿರುದ್ಧವಾಗಿ ಮಂಜು ವೋಟ್ ಮಾಡಿದ್ದಾರೆ. ಇದನ್ನು ಭವ್ಯಾ ಬಳಿ ಸಹಿಸಿಕೊಳ್ಳೋಕೆ ಆಗಿಲ್ಲ. ಮತ್ತೊಂದು ಕಡೆಯಲ್ಲಿ ಗೋಲ್ಡ್ ಸುರೇಶ್ ಅವರನ್ನು ಕಳಪೆ ಎಂದು ಮಂಜು ಘೋಷಣೆ ಮಾಡಿದ್ದಾರೆ. ‘ನನ್ನ ತಂಡದವರೇ ನನಗೆ ಕಳಪೆ ಕೊಟ್ರಲ್ಲ’ ಎಂದು ಸುರೇಶ್ ಬೇಸರ ಮಾಡಿಕೊಂಡಿದ್ದಾರೆ. ತಂಡಕ್ಕೋಸ್ಕರ ಆಡಿ, ಗಾಯ ಮಾಡಿಕೊಂಡರೂ ಕೊನೆಗೆ ಸಿಕ್ಕಿದ್ದು ಕೇವಲ ಕಳಪೆ ಎಂದು ಅವರಿಗೆ ಬೇಸರ ಆಗಿದೆ.
ಇದನ್ನೂ ಓದಿ: ಮಂಜು ಕುತಂತ್ರಕ್ಕೆ ಬಲಿಯಾದ್ರಾ ಭವ್ಯಾ? ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್
ಮಂಜು ಹಾಗೂ ಸುದೀಪ್ ಮಧ್ಯೆ ಮೊದಲಿನಿಂದ ಗೆಳೆತನ ಇದೆ. ಈ ವಿಚಾರದಲ್ಲಿ ಸುದೀಪ್ ಅವರು ಮಂಜುಗೆ ಕ್ಲಾಸ್ ತೆಗೆದುಕೊಳ್ಳಲಿ ಎಂದು ಅನೇಕರು ಬಯಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Sat, 9 November 24