ಸೇಮ್ ನಿಮ್ಮ ರೀತಿ ಹುಡುಗ ಆದ್ರೆ ಓಕೆ: ಐಶೂ ಮಾತಿಗೆ ನಾಚಿದ ಶಿಶಿರ್

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿಗಳು ಇರಲೇಬೇಕು. ಪ್ರತಿ ಸೀಸನ್​ನಲ್ಲೂ ಕೆಲವರ ನಡುವೆ ಪ್ರೀತಿ ಮೂಡುತ್ತದೆ. ಈ ಸೀಸನ್​ನಲ್ಲಿ ಕೆಲವು ಸ್ಪರ್ಧಿಗಳು ಹೆಚ್ಚು ಕ್ಲೋಸ್ ಆಗಿದ್ದಾರೆ. ಒಂದೆಡೆ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರು ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ, ಶಿಶಿರ್ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಆಪ್ತತೆ ಬೆಳೆಸಿಕೊಂಡಿದ್ದಾರೆ.

ಸೇಮ್ ನಿಮ್ಮ ರೀತಿ ಹುಡುಗ ಆದ್ರೆ ಓಕೆ: ಐಶೂ ಮಾತಿಗೆ ನಾಚಿದ ಶಿಶಿರ್
ಶಿಶಿರ್, ಐಶ್ವರ್ಯಾ ಸಿಂಧೋಗಿ
Follow us
ಮದನ್​ ಕುಮಾರ್​
|

Updated on: Nov 08, 2024 | 10:22 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆರಂಭವಾಗಿ 40 ದಿನ ಕಳೆದಿದೆ. ಕೆಲವರು ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದವರು ಟ್ರೋಫಿ ಮೇಲೆ ಕಣ್ಣಿಟ್ಟು ಆಟ ಆಡುತ್ತಿದ್ದಾರೆ. ಅದರ ನಡುವೆಯೂ ಕೆಲವರು ಕಣ್ ಕಣ್ಣ ಸಲಿಗೆ ಆರಂಭಿಸಿದ್ದಾರೆ. ಐಶ್ವರ್ಯಾ ಸಿಂಧೋಗಿ ಅವರು ಶಿಶಿರ್ ಜೊತೆ ಕ್ಲೋಸ್ ಆಗಿದ್ದಾರೆ. ಶುಕ್ರವಾರದ (ನವೆಂಬರ್ 8) ಎಪಿಸೋಡ್​ನಲ್ಲಿ ಅವರಿಬ್ಬರ ನಡುವೆ ನಡೆದ ಮಾತುಕಥೆ ಗಮನ ಸೆಳೆದಿದೆ. ‘ಹುಡುಗ ನನ್ನ ಹಾಗೆ ಇದ್ದರೆ ಓಕೆನಾ?’ ಎಂದು ಶಿಶಿರ್ ಕೇಳಿದ್ದಾರೆ. ‘ಸೇಮ್ ನಿಮ್ಮ ರೀತಿ ಇದ್ದರೆ ಓಕೆ. ಸ್ವಲ್ಪವೂ ಬದಲಾವಣೆ ಇರಬಾರದು’ ಎಂದು ಐಶ್ವರ್ಯಾ ಸಿಂಧೋಗಿ ಹೇಳಿದ್ದಾರೆ.

ಐಶ್ವರ್ಯಾ ಸಿಂಧೋಗಿ ಹೇಳಿದ ಈ ಮಾತುಗಳನ್ನು ಕೇಳಿ ಶಿಶಿರ್ ಅವರು ನಾಚಿ ನೀರಾಗಿದ್ದಾರೆ. ಇಬ್ಬರ ನಡುವೆ ದಿನದಿಂದ ದಿನಕ್ಕೆ ಹೆಚ್ಚು ಆಪ್ತತೆ ಬೆಳೆಯುತ್ತಿದೆ. ಶಿಶಿರ್ ಅವರು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಟಾಸ್ಕ್ ಆಡುವಾಗ ಅವರು ಉತ್ಸಾಹ ತೋರಿಸುತ್ತಾರೆ. ಅದೇ ರೀತಿ ಅವರು ಫ್ಲರ್ಟ್​ ಮಾಡುವಲ್ಲಿಯೂ ಹಿಂದೆ ಬಿದ್ದಿಲ್ಲ. ಲವರ್ ಬಾಯ್ ರೀತಿ ಅವರ ಇಮೇಜ್ ಇದೆ.

ಶುಕ್ರವಾರದ ಸಂಚಿಕೆಯಲ್ಲಿ ಧರ್ಮ ಕೀರ್ತಿರಾಜ್ ಮತ್ತು ಅನುಷಾ ರೈ ಅವರು ಅಕ್ಕಪಕ್ಕ ಕುಳಿತಿದ್ದರು. ಅವರಿಬ್ಬರು ಪರಸ್ಪರ ದೃಷ್ಟಿ ಬೆರೆಸುವ ಪರಿ ಕಂಡು ಐಶ್ವರ್ಯಾ ಮತ್ತು ಶಿಶಿರ್ ಅವರು ಕಣ್ಣರಳಿಸಿದ್ದಾರೆ. ‘ನಾನು ಕೂಡ ನಿನ್ನನ್ನು ಹಾಗೇ ನೋಡಲೇ?’ ಎಂದು ಶಿಶಿರ್ ಅವರು ಐಶ್ವರ್ಯಾಗೆ ಕೇಳಿದ್ದಾರೆ. ನಂತರ ಅವರನ್ನು ಕರೆದು ಪಕ್ಕಕ್ಕೆ ಕೂರಿಸಿಕೊಂಡಿದ್ದಾರೆ. ‘ಹೀಗೆಲ್ಲ ನೋಡಿದರೆ ಕೃತಕ ಎನಿಸುತ್ತದೆ’ ಎಂದು ಐಶ್ವರ್ಯಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​ನಲ್ಲಿ 7 ಮಂದಿ ನಾಮಿನೇಟ್; ಯಾರಿಗೆ ಕಾದಿದೆ ಗೇಟ್​ಪಾಸ್​?

ಬಿಗ್ ಬಾಸ್ ಎಂಬುದು ಭಾವನೆಗಳ ಮಿಶ್ರಣ. ಇಲ್ಲಿ ವಿವಾದಗಳ ಜೊತೆ ಪ್ರೇಮ್​ ಕಹಾನಿ ಕೂಡ ಇರುತ್ತದೆ. ಈ ಕಾರಣದಿಂದಲೇ ಪ್ರೇಕ್ಷಕರಿಗೆ ಈ ಶೋ ಇಷ್ಟ ಆಗುತ್ತದೆ. ಆದರೆ ಇಲ್ಲಿ ಹುಟ್ಟುವ ಲವ್​ಸ್ಟೋರಿಗಳು ನಿಜವೋ ಅಥವಾ ನಾಟಕವೋ ಎಂಬುದು ಕೊನೆವರೆಗೂ ತಿಳಿಯುವುದಿಲ್ಲ. ಯಾಕೆಂದರೆ, ಈಗ ಶಿಶಿರ್ ಜೊತೆ ಕ್ಲೋಸ್ ಆಗಿರುವ ಐಶ್ವರ್ಯಾ ಅವರು ಈ ಮೊದಲು ಧನರಾಜ್ ಜೊತೆ ಆಪ್ತವಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.