AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಬಿಗ್ ಬಾಸ್​ನಲ್ಲಿ 7 ಮಂದಿ ನಾಮಿನೇಟ್; ಯಾರಿಗೆ ಕಾದಿದೆ ಗೇಟ್​ಪಾಸ್​?

ಕಳೆದ ವಾರ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಿಂದ ಮಾಸನಾ ಎಲಿಮಿನೇಟ್ ಆಗಿದ್ದರು. ಈ ವಾರ 7 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರಿಗೆ ಎಷ್ಟು ಬಲ ಇದೆ? ಯಾರ ದುರ್ಬಲತೆ ಏನು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ದಿನ ಕಳೆದಂತೆಲ್ಲ ಬಿಗ್ ಬಾಸ್​ ಮನೆಯೊಳಗಿನ ರೋಚಕತೆ ಜಾಸ್ತಿ ಆಗುತ್ತಿದೆ. ಅದೇ ರೀತಿ ಜಗಳವೂ ಹೆಚ್ಚಾಗುತ್ತಿದೆ.

ಈ ವಾರ ಬಿಗ್ ಬಾಸ್​ನಲ್ಲಿ 7 ಮಂದಿ ನಾಮಿನೇಟ್; ಯಾರಿಗೆ ಕಾದಿದೆ ಗೇಟ್​ಪಾಸ್​?
ಬಿಗ್ ಬಾಸ್​ ಕನ್ನಡ ನಾಮಿನೇಷನ್
ಮದನ್​ ಕುಮಾರ್​
|

Updated on: Nov 07, 2024 | 10:32 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ 39 ದಿನಗಳ ಕಳೆದಿವೆ. ಪ್ರತಿ ವಾರವೂ ಸ್ಪರ್ಧಿಗಳಿಗೆ ಎಲಿಮಿನೇಷನ್​ ಭಯ ಇರುತ್ತದೆ. ಮಾನಸಾ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರಬಿದ್ದರು. ಈ ವಾರ ಯಾರು ಹೊರಗೆ ಹೋಗುತ್ತಾರೆ ಎಂಬ ಕೌತುಕ ಮೂಡಿದೆ. ನಾಮಿನೇಷನ್​ನಲ್ಲಿ ಒಟ್ಟು 7 ಜನರ ಹೆಸರು ಇದೆ. ಧರ್ಮ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್​ ಆಗಿದ್ದಾರೆ. ಇವರ ಪೈಕಿ ಒಬ್ಬರಿಗೆ ಈ ವಾರ ಬಿಗ್ ಬಾಸ್ ಪಯಣ ಅಂತ್ಯವಾಗಲಿದೆ.

ಭವ್ಯ ಅವರು ಟಾಸ್ಕ್​ನಲ್ಲಿ ಚೆನ್ನಾಗಿಯೇ ಆಡುತ್ತಿದ್ದಾರೆ. ಆದರೆ ಮನರಂಜನೆ ವಿಚಾರದಲ್ಲಿ ಅವರು ಹಿಂದೆ ಬೀಳುತ್ತಿದ್ದಾರೆ. ಹಾಗಾಗಿ ಅವರಿಗೆ ಎಲಿಮಿನೇಷನ್​ನ ಆತಂಕ ಇದೆ. ಚೈತ್ರಾ ಕುಂದಾಪುರ ಅವರು ಕೇವಲ ಮಾತಿನ ಮೂಲಕವೇ ಆಟ ಆಡಲು ಪ್ರಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಪ್ರತಿ ವಾರ ಕೂಡ ಅವರು ನಾಮಿನೇಟ್​ ಆಗುತ್ತಿದ್ದಾರೆ. ಈ ವಾರ ಅವರಿಗೆ ಪ್ರೇಕ್ಷಕರ ಬೆಂಬಲ ಸಿಗುತ್ತಾ ಅಥವಾ ಇಲ್ಲವಾ ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಧನರಾಜ್ ಅವರು ಕಾಮಿಡಿ ಮಾಡುತ್ತಿದ್ದಾರೆ. ಆದರೆ ಎಲ್ಲರ ಜೊತೆಗೂ ಅವರು ಬೆರೆಯುತ್ತಿಲ್ಲ. ಕೇವಲ ಹನುಮಂತನ ಜೊತೆ ಅವರು ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಲ್ಲದೇ, ಅವರು ಸ್ಟ್ರಾಂಗ್ ಸ್ಪರ್ಧಿ ಕೂಡ ಅಲ್ಲ. ಎಮೋಷನಲಿ ಅವರು ಕುಗ್ಗುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರು ಕಡಿಮೆ ವೋಟ್​ ಪಡೆದರೂ ಅಚ್ಚರಿ ಏನಿಲ್ಲ. ಹಾಗೆಯೇ ಧರ್ಮ ಕೀರ್ತಿರಾಜ್ ಅವರು ತಮ್ಮ ಛಾಪು ಮೂಡಿಸುವುದು ಬಾಕಿ ಇದೆ. ಅವರಿಗೆ ಜನರು ಇನ್ನಷ್ಟು ಸಮಯಾವಕಾಶ ನೀಡುತ್ತಾರೋ ಇಲ್ಲವೋ ಎಂಬ ಅನುಮಾನ ಮೂಡಿದೆ.

ಎರಡು ವಾರದ ಹಿಂದೆ ಮೋಕ್ಷಿತಾ ಅವರ ಆಟದ ವೈಖರಿ ಬದಲಾಯಿತು. ತ್ರಿವಿಕ್ರಮ್ ವಿರುದ್ಧ ಮೋಕ್ಷಿತಾ ತಿರುಗಿ ಬಿದ್ದಿದ್ದಾರೆ. ಇಷ್ಟು ದಿನ ಆಪ್ತವಾಗಿದ್ದ ಉಗ್ರಂ ಮಂಜು ಜೊತೆಗೂ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಸಾಧ್ಯವಾದಷ್ಟು ನಿಷ್ಠುರವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಮೋಕ್ಷಿತಾ ಅವರನ್ನು ಈ ವಾರ ವೀಕ್ಷಕರು ಸೇವ್ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಧನರಾಜ್, ಹನುಮಂತ ಫ್ರೇಮ್​ನಲ್ಲಿ ಇದ್ದರೆ ಬಿಗ್ ಬಾಸ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ

ಗೋಲ್ಡ್ ಸುರೇಶ್ ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಮನರಂಜನೆ ನೀಡುವ ವಿಚಾರದಲ್ಲಿ ಅವರ ಯಾವಾಗಲೂ ಹಿಂದಿರುತ್ತಾರೆ. ಅಲ್ಲದೇ, ಅವರ ಕಾಲಿಗೆ ಈ ವಾರ ಏಟು ಕೂಡ ಆಗಿದೆ. ಬೇಗ ಅವರು ಚೇತರಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳ ಟಾಸ್ಕ್​ಗಳಲ್ಲಿ ಅವರು ಹಿಂದುಳಿಯುವ ಸಾಧ್ಯತೆ ಇದೆ. ಇನ್ನು, ತ್ರಿವಿಕ್ರಮ್ ಅವರು ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಆದರೆ ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?