AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಫೋಟೋದಲ್ಲಿರೋ ಕನ್ನಡದ ಸ್ಟಾರ್ ಹೀರೋ ಯಾರು? ಹಿಂಟ್ ಆಧರಿಸಿ ಉತ್ತರಿಸಿ  

ಈ ಫೋಟೋವನ್ನು ಗುರುತಿಸೋಕೆ ನಾವು ನಿಮಗೆ ಕೆಲವು ಹಿಂಟ್​ಗಳನ್ನು ನೀಡುತ್ತಿದ್ದೇವೆ. ಇವರು ಕನ್ನಡದ ಸ್ಟಾರ್ ಹೀರೋ. ಮೈಸೂರಿನಲ್ಲಿ ಇದ್ದ ಇವರು ಹೀರೋ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡು  ಬೆಂಗಳೂರಿಗೆ ಬಂದರು. ಇವರ ತಂದೆ ಬಸ್ ಡ್ರೈವರ್.

ಈ ಫೋಟೋದಲ್ಲಿರೋ ಕನ್ನಡದ ಸ್ಟಾರ್ ಹೀರೋ ಯಾರು? ಹಿಂಟ್ ಆಧರಿಸಿ ಉತ್ತರಿಸಿ  
ಕನ್ನಡದ ಸ್ಟಾರ್ ಹೀರೋ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 08, 2024 | 7:42 AM

Share

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಫೋಟೋ ಆಗಾಗ ವೈರಲ್ ಆಗುತ್ತಾ ಇರುತ್ತವೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ವಿವಿಧ ಕಮೆಂಟ್​ಗಳು ಬರುತ್ತವೆ. ಕೆಲವೊಮ್ಮೆ ಸೆಲೆಬ್ರಿಟಿಗಳೇ ಈ ಫೋಟೋಗಳನ್ನು ಹಂಚಿಕೊಂಡರೆ ಮತ್ತೂ ಕೆಲವೊಮ್ಮೆ ಅವರ ಆಪ್ತ ಬಳಗದವರು ಇದನ್ನು ಹಂಚಿಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಸೆಲೆಬ್ರಿಟಿಗಳೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡುತ್ತಾರೆ. ಈಗ ಕನ್ನಡದ ಸ್ಟಾರ್ ಹೀರೋನ ಫೋಟೋ ವೈರಲ್ ಆಗಿದೆ. ಇವರು ಯಾರೆಂದು ಗುರುತಿಸುತ್ತೀರಾ?

ಈ ಫೋಟೋವನ್ನು ಗುರುತಿಸೋಕೆ ನಾವು ನಿಮಗೆ ಕೆಲವು ಹಿಂಟ್​ಗಳನ್ನು ನೀಡುತ್ತಿದ್ದೇವೆ. ಇವರು ಕನ್ನಡದ ಸ್ಟಾರ್ ಹೀರೋ. ಮೈಸೂರಿನಲ್ಲಿ ಇದ್ದ ಇವರು ಹೀರೋ ಆಗಬೇಕು ಎನ್ನುವ ಕನಸನ್ನು ಇಟ್ಟುಕೊಂಡು  ಬೆಂಗಳೂರಿಗೆ ಬಂದರು. ಇವರ ತಂದೆ ಬಸ್ ಡ್ರೈವರ್. ನಂತರ ಕಿರುತೆರೆಗಳಲ್ಲಿ ನಟಿಸಿ, ಸಿನಿಮಾ ಮಾಡಿದರು. ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಇಷ್ಟೆಲ್ಲ ಹೇಳಿದ ಮೇಲೆ ಅವರು ಯಾರು ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿರುತ್ತದೆ. ಅವರು ಬೇರಾರೂ ಅಲ್ಲ, ‘ರಾಕಿಂಗ್ ಸ್ಟಾರ್ ಯಶ್’.

ಹೌದು, ಅವರು ಬೇರಾರೂ ಅಲ್ಲ ರಾಕಿಂಗ್ ಸ್ಟಾರ್ ಯಶ್. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ಯಶ್ ಅವರ ಸಣ್ಣ ವಯಸ್ಸಿನ ಫೋಟೋ ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ಕಡೆಯಿಂದ ಕಮೆಂಟ್​ಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್​ ಈ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇದ್ದಾರೆ.

ಇದನ್ನೂ ಓದಿ: ‘ರಾಮಾಯಣ’ ಬಿಡುಗಡೆ ದಿನಾಂಕ ಘೋಷಣೆ: ರಣಬೀರ್ ಕಪೂರ್​ ಬದಲು ಯಶ್​ ಫಸ್ಟ್​ ಲುಕ್​ಗೆ ಹೆಚ್ಚಿತು ಬೇಡಿಕೆ

ಯಶ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಅವರು ಅನೇಕ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದರು. ಆ ಬಳಿಕ ಅವರು ‘ಮನಸಾರೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿತು. ನಂತರ ಮಾಸ್ ಹೀರೋ ಆದರು. ‘ಕೆಜಿಎಫ್’ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು. ‘ಕೆಜಿಎಫ್ 2’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ಈಗ ‘ಟಾಕ್ಸಿಕ್’ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೆ, ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ಮಾಪಕರೂ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.