AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ನಡುವೆ ‘ಟೆನೆಂಟ್’ ಟೀಸರ್​ ಮೂಲಕ ಹೆಚ್ಚಿತು ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಸದ್ದು

ಬಿಗ್ ಬಾಸ್​ ಮನೆಯಲ್ಲಿ ಧರ್ಮ ಕೀರ್ತಿರಾಜ್​ ಮತ್ತು ಉಗ್ರಂ ಮಂಜು ಅವರು ಪೈಪೋಟಿ ನೀಡುತ್ತಿದ್ದಾರೆ. ಇದೇ ಸಮಯಕ್ಕೆ ಅವರ ಹೊಸ ಸಿನಿಮಾದ ಟೀಸರ್​ ರಿಲೀಸ್ ಆಗಿದೆ. ಹೌದು, ತಿಲಕ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ನಟಿಸಿರುವ ‘ಟೆನೆಂಟ್’ ಸಿನಿಮಾದ ಟೀಸಲ್ ಲಾಂಚ್ ಆಗಿದೆ. ನ.22ಕ್ಕೆ ಸಿನಿಮಾ ತೆರೆಕಾಣಲಿದೆ.

ಬಿಗ್ ಬಾಸ್ ನಡುವೆ ‘ಟೆನೆಂಟ್’ ಟೀಸರ್​ ಮೂಲಕ ಹೆಚ್ಚಿತು ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಸದ್ದು
ಉಗ್ರಂ ಮಂಜು, ಧರ್ಮ ಕೀರ್ತಿ ರಾಜ್, ಸೋನು ಗೌಡ, ತಿಲಕ್, ರಾಕೇಶ್ ಮಯ್ಯ
ಮದನ್​ ಕುಮಾರ್​
|

Updated on: Oct 17, 2024 | 7:32 PM

Share

ಕನ್ನಡದ ‘ಟೆನೆಂಟ್’ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ. ಪ್ರಚಾರದ ಭಾಗವಾಗಿ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಬಹುತಾರಾಗಣ ಇದೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಪೈಪೋಟಿ ನೀಡುತ್ತಿರುವ ಧರ್ಮ ಕೀರ್ತಿರಾಜ್, ಉಗ್ರಂ ಮಂಜು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಿಲಕ್, ಸೋನು ಗೌಡ, ರಾಕೇಶ್ ಮಯ್ಯ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶ್ರೀಧರ್ ಶಾಸ್ತ್ರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ನಾಗರಾಜ್ ಟಿ. ಅವರು ‘ಮಾಸ್ಟರ್ ಚಾಯ್ಸ್ ಕ್ರಿಯೇಶನ್’ ಮೂಲಕ ‘ಟೆನಂಟ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರಿಂದ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಿಸಲಾಗಿದೆ. ಶಶಾಂಕ್, ಪವನ್ ಒಡೆಯರ್, ಸತ್ಯ ಹೆಗಡೆ, ಸಚಿನ್ನಾ ಹೆಗ್ಗಾರ್, ಚಂದನ್ ಶೆಟ್ಟಿ, ವಿಕ್ಕಿ, ನವೀಶ್ ಶಂಕರ್ ಮುಂತಾದವರು ಟೀಸರ್​ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

‘ಟೆನೆಂಟ್’ ಸಿನಿಮಾ ಟೀಸರ್​:

‘ಟೆನೆಂಟ್’ ಸಿನಿಮಾದಲ್ಲಿ ಕ್ರೈಮ್ ಥ್ರಿಲ್ಲರ್ ಕಥೆ ಇದೆ. ಟೀಸರ್​ ನೋಡಿದರೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುತ್ತದೆ. ‘ನವಗ್ರಹ’ ಸಿನಿಮಾದಲ್ಲಿ ‘ಕಣ್ ಕಣ್ಣ ಸಲಿಗೆ…’ ಎನ್ನುತ್ತಾ ಚಾಕೊಲೇಟ್ ಹೀರೋ ಆಗಿ ಗಮನ ಸೆಳೆದಿದ್ದ ಧರ್ಮ ಕೀರ್ತಿರಾಜ್ ಅವರು ಈಗ ‘ಟೆನೆಂಟ್’ ಸಿನಿಮಾದಲ್ಲಿ ಒಂದು ಡಿಫರೆಂಟ್​ ಪಾತ್ರ ಮಾಡಿದ್ದಾರೆ. ಟೀಸರ್​ನಲ್ಲಿ ಆ ಪಾತ್ರದ ಝಲಕ್​ ತೋರಿಸಲಾಗಿದೆ.

ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ ನಡುವಿನ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಗೋಲ್ಡ್ ಸುರೇಶ್

ಉಗ್ರಂ ಮಂಜು ಅವರು ಕೂಡ ‘ಟೆನೆಂಟ್’ ಸಿನಿಮಾದ ಟೀಸರ್​ನಲ್ಲಿ ಅಬ್ಬರಿಸಿದ್ದಾರೆ. ತಿಲಕ್ ರಾಜ್, ರಾಕೇಶ್ ಮಯ್ಯ, ಸೋನು ಗೌಡ ಸಹ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ. ಕಥೆಯ ಬಗ್ಗೆ ಟೀಸರ್​ನಲ್ಲಿ ಕೌತುಕ ಮೂಡಿಸಲಾಗಿದೆ. ಟೀಸರ್​ನಲ್ಲಿ ಹಿನ್ನೆಲೆ ಸಂಗೀತ, ಛಾಯಾಗ್ರಹಣ ಪ್ರೇಕ್ಷಕರಿಗೆ ಇಷ್ಟ ಆಗುತ್ತಿದೆ. ನವೆಂಬರ್​ 22ರಂದು ‘ಟೆನೆಂಟ್’ ಸಿನಿಮಾ ಬಿಡುಗಡೆ ಆಗಲಿದೆ. ಗಿರೀಶ್ ಹೊತೂರ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಮನೋಹರ್ ಅವರ ಛಾಯಾಗ್ರಹಣ, ಉಜ್ವಲ್ ಅವರ ಸಂಕಲನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್